ಮತದಾರರ ಪಟ್ಟಿ ಲೋಪ ಸರಿಪಡಿಸುವ ಕಾರ್ಯಕ್ಕೆ ಚಾಲನೆ

Social Share

ಬೆಂಗಳೂರು,ಡಿ.6- ಚಿಲುಮೆ ಸಂಸ್ಥೆ ಹಗರಣದ ನಂತರ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮತದಾರರ ಹೆಸರು ಡಿಲೀಟ್ ವಿರುದ್ಧ ಆಪರೇಷನ್ ಆರಂಭಿಸಿರುವ ಚುನಾವಣಾ ಆಯೋಗ ಮಹದೇವಪುರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಆರಂಭಿಸಿದೆ.

ಮಹದೇವಪುರದಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸುವ ಕಾರ್ಯಕ್ಕೆ ಮಹದೇವಪುರದ ವಿಧಾನಸಭಾ ಕ್ಷೇತ್ರದ ವಿಶೇಷಾಧಿಕಾರಿಯಾಗಿ ಅಜಯ್ ನಾಗಭೂಷಣ್ ಅವರನ್ನು ನೇಮಕ ಮಾಡಲಾಗಿದೆ. ನಾಳೆ ನಾಗಭೂಷಣ್ ಅವರು ಸರ್ವಪಕ್ಷಗಳ ಸಭೆ ಕರೆದು ವಿವಿಧ ರಾಜಕೀಯ ಪಕ್ಷಗಳ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಪರೇಷನ್ ಆರಂಭಿಸಲಿದ್ದಾರೆ.

ಲಾಲೂಗೆ ಪುತ್ರಿಗೆ ಆದರ್ಶ ಪುತ್ರಿ ಎಂದು ಕೊಂಡಾಡಿದ ರಾಜಕೀಯ ವಿರೋಧಿಗಳು

ನಾಳೆ ಮಹದೇವಪುರದ ಫೀನಿಕ್ಸ್ ಮಾಲ್ ಸಮೀಪದ ಬಿಬಿಎಂಪಿ ವಲಯ ಕಚೇರಿಯಲ್ಲಿ ನಡೆಯಲಿರುವ ಸಭೆಯಲ್ಲಿ ನಾಗಭೂಷಣ್ ಅವರು 2022ರ ಜ.1ರ ನಂತರ ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿರುವ ಹಾಗೂ ಡಿಲಿಟ್ ಆಗಿರುವ ಅಂಕಿ ಅಂಶಗಳನ್ನು ಪರಿಶೀಲಿಸಲಿದ್ದಾರೆ.

ಜಿ-20 ಶೃಂಗ : ಪ್ರಧಾನಿ ಮೋದಿಗೆ ಸಲಹೆ ಕೊಟ್ಟ ದೇವೇಗೌಡರು

ಸಭೆಗೆ ಬರುವವರು ಮತದಾರರ ಪಟ್ಟಿಯಲ್ಲಿ ಆಗಿರುವ ಲೋಪದೋಷಗಳ ಬಗ್ಗೆ ಇರುವ ಆಕ್ಷೇಪಣೆಗಳೊಂದಿಗೆ ಆಗಮಿಸಿ ಸಮಸ್ಯೆ ನಿವಾರಣೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

#BBMP, #Voter, #List, #ElectionCommission,

Articles You Might Like

Share This Article