ಬೆಂಗಳೂರು,ಡಿ.7- ಚಿಲುಮೆ ಸಂಸ್ಥೆಯ ಮತದಾರರ ವೈಯಕ್ತಿಕ ಮಾಹಿತಿ ಕಳುವು ಪ್ರಕರಣದಿಂದ ಅಮಾನತುಗೊಂಡಿರುವ ಇಬ್ಬರು ಐಎಎಸ್ ಅಧಿಕಾರಿಗಳನ್ನು ಇಂದು ಮತ್ತೊಮ್ಮೆ ಪೊಲೀಸರು ವಿಚಾರಣೆ ನಡೆಸುವ ಸಾಧ್ಯತೆಗಳಿವೆ.
ಪ್ರಕರಣ ಬೆಳಕಿಗೆ ಬಂದ ನಂತರ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾಗಿದ್ದ ಶ್ರೀನಿವಾಸ್ ಹಾಗೂ ಬಿಬಿಎಂಪಿ ವಿಶೇಷ ಆಯುಕ್ತ ರಂಗಪ್ಪ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಆರೋಪಕ್ಕೆ ಗುರಿಯಾಗಿದ್ದ ಇಬ್ಬರು ಐಎಎಸ್ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರೂ ಇಬ್ಬರು ವಿಚಾರಣೆಗೆ ಹಾಜರಾಗಿರಲಿಲ್ಲ.
ಸಿದ್ಧಾಂತ ಮರೆತವರಿಗೆ ಬಿಸಿ ಮುಟ್ಟಿಸಲು ವ್ಯೂಹ ರಚಿಸಿದ ಕಾಂಗ್ರೆಸ್
ಹೀಗಾಗಿ ವಾಟ್ಸ್‍ಪ್ ಮೂಲಕ ಮತ್ತೊಂದು ನೋಟೀಸ್ ಜಾರಿ ಮಾಡಿದ ನಂತರ ಹಾಜರಾಗಿದ್ದ ಇಬ್ಬರನ್ನು ಗುಪ್ತ ಸ್ಥಳದಲ್ಲಿ ವಿಚಾರಣೆ ನಡೆಸಲಾಗಿತ್ತು. ಇದೀಗ ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಬಂಧನದ ನಂತರ ಆತ ಕೆಲವು ಮಾಹಿತಿಗಳನ್ನು ಪೊಲೀಸರಿಗೆ ನೀಡಿದ್ದು ಈ ಮಾಹಿತಿಯನ್ನಾಧರಿಸಿ ಇಂದು ಶ್ರೀನಿವಾಸ್ ಹಾಗೂ ರಂಗಪ್ಪ ಅವರನ್ನು ಮತ್ತೊಮ್ಮೆ ವಿಚಾರಣೆಗೊಳಪಡಿಸಲು ಪೊಲೀಸರು ತೀರ್ಮಾನಿಸಿದ್ದಾರೆ.
ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ : ಕೆಲ ಅಧಿಕಾರಿಗಳಿಗೆ ನಡುಕ ಶುರು
ಈ ಮಧ್ಯೆ ವಿಚಾರಣೆ ನಂತರ ಪೊಲೀಸರು ನಮ್ಮನ್ನು ಬಂಧಿಸುವ ಸಾಧ್ಯತೆ ಇದೆ ಎಂಬ ಗುಮಾನಿ ಮೇಲೆ ಇಬ್ಬರು ಐಎಎಸ್ ಅಧಿಕಾರಿಗಳು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.
BBMP, Voters, list, scam, Two, IAS officers, police, investigation,