ವಾರ್ಡ್ ಪುನರ್ ವಿಂಗಡಣೆ ತಕರಾರು: ಬಿಬಿಎಂಪಿಗೆ ನೋಟೀಸ್..

Social Share

ಬೆಂಗಳೂರು,ನ.24- ಬಿಬಿಎಂಪಿ ವಾರ್ಡ್ ಪುನರ್ ವಿಂಗಡಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. 198 ವಾರ್ಡ್‍ಗಳನ್ನು ಸರ್ಕಾರ 243 ವಾರ್ಡ್‍ಗಳನ್ನಾಗಿ ಪರಿವರ್ತಿಸಿದ್ದು, ವಾರ್ಡ್ ಪುನರ್ ವಿಂಗಡಣೆಯಲ್ಲಿ ಲೋಪದೋಷಗಳಾಗಿವೆ ಎಂದು ಶಾಸಕ ಸತೀಶ್ ರೆಡ್ಡಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಹೈಕೋರ್ಟ್ ವಿಭಾಗೀಯ ಪೀಠ ಬಿಬಿಎಂಪಿ ಹಾಗೂ ಚುನಾವಣಾ ಆಯೋಗಕ್ಕೆ ನೋಟೀಸ್ ಜಾರಿ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವಾರಲೆ ನೇತೃತ್ವದ ಪೀಠ ಸತೀಶ್ ರೆಡ್ಡಿ ಅವರ ಮೇಲ್ಮನವಿಯನ್ನು ಪುರಸ್ಕರಿಸಿ ವಿಚಾರಣೆಗೆ ಅಂಗೀಕಾರ ನೀಡಿರುವುದರಿಂದ ವಾರ್ಡ್ ಪುನರ್‍ವಿಂಗಡಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಂತಾಗಿದೆ.

ನೇಮಕ ಮಾಡದಿದ್ದರೆ ಆಕಾಶ ಕಳಚಿಬೀಳುತ್ತಿತ್ತೇ: ಸುಪ್ರೀಂ ಗರಂ

ಈ ಮೊದಲು ವಾರ್ಡ್ ಪುನರ್‍ವಿಂಗಡಣೆಯನ್ನು ಪ್ರಶ್ನಿಸಿ ಸತೀಶ್ ರೆಡ್ಡಿ ಮತ್ತಿತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋಟ್ ಏಕ ಸದಸ್ಯ ಪೀಠ ಪುನರ್‍ವಿಂಗಡಣೆ ಸಮರ್ಪಕವಾಗಿದೆ ಎಂದು ಪ್ರಕರಣವನ್ನು ಇತ್ಯರ್ಥಪಡಿಸಿತ್ತು.

ಇದೀಗ ಏಕ ಸದಸ್ಯ ಪೀಠದ ತೀರ್ಪು ಪ್ರಶ್ನಿಸಿ ಸತೀಶ್ ರೆಡ್ಡಿ ಮತ್ತಿತರರು ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ಕುಟುಂಬಸ್ಥರಿಗೆ ಟಿಕೆಟ್ ಕೊಡಿಸಲು ಬಿಜೆಪಿ ಭಾರೀ ಲಾಬಿ..

ಹೊಸದಾಗಿ ವಿಂಗಡಣೆ ಮಾಡಿರುವ ಹೊಸ ವಾರ್ಡ್‍ಗಳು ಒಂದೇ ವಿಧಾನಸಭಾ ಕ್ಷೇತ್ರದಲ್ಲಿರದೆ ಎರಡು ಕ್ಷೇತ್ರಗಳಿಗೆ ಹಂಚಿಕೆಯಾಗಿರುವುದರಿಂದ ವಾರ್ಡ್ ಪುನರ್‍ವಿಂಗಡಣೆಯಲ್ಲಿಆಗಿರುವ ಲೋಪದೋಷ ಸರಿಪಡಿಸಬೇಕು ಎನ್ನುವುದು ಅರ್ಜಿದಾರರ ವಾದವಾಗಿದೆ.

BBMP, ward, redistribution, High Court, Notice,

Articles You Might Like

Share This Article