ಬಿಬಿಎಂಪಿ ವಾರ್ಡ್ ಮರುವಿಂಗಡಣೆಗೆ ಕೋಟಿ ಕೋಟಿ ಖರ್ಚು

Social Share

ಬೆಂಗಳೂರು,ಡಿ.24- ಈ ಹಿಂದೆ ಇದ್ದ 198 ವಾರ್ಡ್‍ಗಳನ್ನು 243 ವಾರ್ಡ್‍ಗಳನ್ನಾಗಿ ಮರು ವಿಂಗಡಣೆ ಮಾಡಿರುವುದರಿಂದ ಬಿಬಿಎಂಪಿಗೆ ಆರ್ಥಿಕ ಹೊರೆ ಹೆಚ್ಚಾಗಿದೆ. ವಾರ್ಡ್ ವಿಂಗಡಣೆ ಮಾಡಲು ಬಿಬಿಎಂಪಿಗೆ ಸಿಬ್ಬಂದಿ ವೇತನ, ಕಚೇರಿ ಇತರೆ ಖರ್ಚು ವೆಚ್ಚಗಳು ಸೇರಿ ತಿಂಗಳಿಗೆ 10 ರಿಂದ 15 ಕೋಟಿ ರೂ.ಗಳ ಹೆಚ್ಚುವರಿ ಹೊರೆ ಬಿದ್ದಿದೆ.

198 ವಾರ್ಡ್‍ಗಳನ್ನು 243 ವಾರ್ಡ್‍ಗಳನ್ನಾಗಿ ಪರಿವರ್ತಿಸಿರುವುದರಿಂದ ಹೆಚ್ಚುವರಿಯಾಗಿ 45 ವಾರ್ಡ್‍ಗಳನ್ನು ರಚಿಸಬೇಕಾದರೆ ವಾರ್ಷಿಕ ನೂರಾರು ಕೋಟಿ ರೂ.ಗಳನ್ನು ಪಾಲಿಕೆಯಿಂದ ಭರಿಸಬೇಕಿದೆ.

ವಾರ್ಡ್ ಪುನರ್‍ವಿಂಗಡಣೆಗೆ ಹೆಚ್ಚುವರಿ ಹುದ್ದೆ ಸೃಷ್ಟಿಸಿ ಅವರಿಗೆ ಬಿಬಿಎಂಪಿಯಿಂದಲೇ ವೇತನ ನೀಡಬೇಕಿದೆ. ಮೊದಲೆ ಆರ್ಥಿಕ ಸಂಕಷ್ಟದಿಂದ ತತ್ತರಿಸಿ ಹೋಗಿರುವ ಬಿಬಿಎಂಪಿಗೆ ಈ ಹೆಚ್ಚುವರಿ ವೆಚ್ಚವನ್ನು ಭರಿಸಲು ಸಾಧ್ಯವೇ ಎಂಬ ಪ್ರಶ್ನೆ ಇದೀಗ ಎದುರಾಗಿದೆ.

ಚಿಲುಮೆ ಅಕ್ರಮ ಪ್ರಕರಣ : ಇಬ್ಬರು IAS ಅಧಿಕಾರಿಗಳ ಅಮಾನತು ವಾಪಸ್

ಪ್ರತಿವರ್ಷ ಸರ್ಕಾರದಿಂದಲೇ ಅನುದಾನ ಕೇಳುವ ಬಿಬಿಎಂಪಿಯವರು ವಾರ್ಡ್ ವಿಂಗಡಣೆ ಕಾರ್ಯಕ್ಕೆ ನಿಯೋಜನೆ ಮಾಡುವ ಸಿಬ್ಬಂದಿಗಳ ಕೊಟ್ಯಂತರ ರೂ.ವೇತನವನ್ನು ಯಾವ ರೀತಿ ನೀಡುತ್ತದೆ ಎನ್ನುವುದು ಮಾತ್ರ ನಿಗೂಢವಾಗಿಯೇ ಉಳಿದಿದೆ.

ಯಾವ್ಯಾವ ವಿಭಾಗಕ್ಕೆ ಎಷ್ಟೆಷ್ಟು ಸಿಬ್ಬಂದಿ ಬೇಕು. ಅವರ ವೇತನ ಎಷ್ಟು..?
ಕಂದಾಯ ವಿಭಾಗ 163 ಹುದ್ದೆ 7,92,02,184 ಕೋಟಿವಾರ್ಷಿಕ ವೇತನ
ಕಾಮಗಾರಿ ವಿಭಾಗ 71 ಹುದ್ದೆ 5,77,37,124 ಕೋಟಿ ವಾರ್ಷಿಕ ವೇತನ
ಆರೋಗ್ಯ ವಿಭಾಗ 2295 ಹುದ್ದೆ 73,41,15,960 ಕೋಟಿ ವಾರ್ಷಿಕ ವೇತನ
ಸಾಮಾನ್ಯ ಆಡಳಿತ 271 ಹುದ್ದೆ 10,44,22,776 ಕೋಟಿ ವಾರ್ಷಿಕ ವೇತನ
ಒಟ್ಟು ಹುದ್ದೆ 2800 97,54,78,044 ಕೋಟಿ ವಾರ್ಷಿಕ ವೇತನ

ಈ ಹೊಸ ಲಸಿಕೆ ಹಾಕಿಸಿಕೊಂಡರೆ ಜ್ವರ, ಮೈಕೈ ನೋವು ಬರಲ್ಲ
ವೇತನದ ಜತೆಗೆ ಇತರೆ ಖರ್ಚು ಎಷ್ಟು:
ಸ್ವಂತ ಕಟ್ಟಡಗಳಿಲ್ಲದಿರೋದ್ರಿಂದ ಬಾಡಿಗೆ ಕಟ್ಟಡಕ್ಕೆ ಬಾಡಿಗೆ
ದೂರವಾಣಿ, ವಿದ್ಯುತ, ಜಲಮಂಡಳಿಗೆ ಪ್ರತಿ ತಿಂಗಳು ಬಾಡಿಗೆ
ಅಧಿಕಾರಿಗಳಿಗೆ ಕಾರು, ಪೆಟ್ರೋಲ್ ಗೆ ಲಕ್ಷಾಂತರ ರೂಪಾಯಿ ಖರ್ಚನ್ನು ಬಿಬಿಎಂಪಿಯೇ ಭರಿಸಬೇಕಿದೆ.

BBMP ward, restructuring, financial, burden,

Articles You Might Like

Share This Article