ಎಲ್ಲೆಂದರಲ್ಲಿ ಮೂತ್ರ ಮಾಡುವುದನ್ನು ತಡೆಯಲು ಬಿಬಿಎಂಪಿ ಹೊಸ ಪ್ಲ್ಯಾನ್‍..!

ಬೆಂಗಳೂರು, ಜ.13-ಫುಟ್‍ಪಾತ್, ರಸ್ತೆ ಬದಿ ಎಲ್ಲೆಂದರಲ್ಲಿ ಮೂತ್ರ ಮಾಡುವುದನ್ನು ತಡೆಯಲು, ಸ್ವಚ್ಛತೆ ಕಾಪಾಡಲು ಬಿಬಿಎಂಪಿ ಸರಳ ಹಾಗೂ ಹೊಸ ಪ್ಲ್ಯಾನ್‍ವೊಂದನ್ನು ರೂಪಿಸಿದೆ.
ಕನ್ನಡಿ ಇದ್ದರೆ ಆ ಜಾಗದಲ್ಲಿ ಯಾರೂ ಗಲೀಜು ಮಾಡುವುದಿಲ್ಲ.

ಕನ್ನಡಿಯಲ್ಲಿ ತಮ್ಮ ಮುಖ ತಾವೇ ನೋಡಿಕೊಂಡು ನಾಚಿಕೊಳ್ಳುತ್ತಾರೆ ಎಂಬ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಬಿಬಿಎಂಪಿ ಕನ್ನಡಿ(ಮಿರರ್)ಯನ್ನು ಅಳವಡಿಸಲು ಮುಂದಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ದುರ್ನಾತ ತಡೆಯಲು ಕನ್ನಡಿ ಬಳಕೆ ಮಾಡುವ ಯೋಜನೆಯೊಂದನ್ನು ರೂಪಿಸಿ ಚರ್ಚ್ ಸ್ಟ್ರೀಟ್, ಇಎಸ್‍ಐ ಆಸ್ಪತ್ರೆ ಬಳಿ ಕನ್ನಡಿಗಳನ್ನು ಅಳವಡಿಸಿದೆ.
ಬಹುತೇಕ ಬೆಂಗಳೂರಿನಲ್ಲಿ ಸಾರ್ವಜನಿಕ ಶೌಚಾಲಯಗಳಿದ್ದರೂ ಜನ ಫುಟಾಪಾತ್, ರಸ್ತೆ ಬದಿ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುವುದು ಸಾಮಾನ್ಯವಾಗಿದೆ. ಇದನ್ನು ತಪ್ಪಿಸಲು ಸಾಕಷ್ಟು ಪ್ರತಿಭಟನೆಗಳು ನಡೆದಿವೆ.

ಸಾಕಷ್ಟು ಶೌಚಾಲಯಗಳನ್ನು ನಿರ್ಮಿಸಿದರೂ ತಡೆಯಲು ಸಾಧ್ಯವಾಗಿಲ್ಲ. ಹೀಗಾಗಿ ಒಂದು ಹೊಸ ಉಪಾಯ ಕಂಡುಹಿಡಿದು ಮಿರರ್ ಅಳವಡಿಸಲು ಮುಂದಾಗಿದೆ. ಇಂತಹ ಜಾಗಗಳಲ್ಲಿ ಜನ ನೆಮ್ಮದಿಯಾಗಿ ಓಡಾಡಬಹುದಾಗಿದೆ.