ರೈತರ ಆತ್ಮಹತ್ಯೆಗೆ ವೀಕ್‍ಮೈಂಡ್ ಕಾರಣ : ಸಚಿವ ಬಿ.ಸಿ.ಪಾಟೀಲ್ ಮತ್ತೆ ಯಡವಟ್ಟು

Spread the love

ಮೈಸೂರು, ಜ.19- ರೈತರ ಆತ್ಮಹತ್ಯೆಗೆ ಕಾರಣ ಅವರ ವೀಕ್ ನೆಸ್ ಮೈಂಡ್ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.  ಕೆಲ ಸಂದರ್ಭದಲ್ಲಿ ರೈತರ ಮೈಂಡ್ ವೀಕ್ ಆದಾಗ ಆತ್ಮಹತ್ಯೆ ನಿರ್ಧಾರ ಮಾಡುತ್ತಾರೆ. ಇದಕ್ಕೆ ಸರ್ಕಾರದ ನೀತಿಗಳು ಕಾರಣವಲ್ಲ. ಹಳ್ಳಿ ಭಾಗದಲ್ಲಿ ಇರೋರೆಲ್ಲ ರೈತರೇ. ಹಾಗಂತ ಅಲ್ಲಿ ಆತ್ಮಹತ್ಯೆ ಮಾಡಕೊಂಡದಕ್ಕೆಲ್ಲ ಒಂದೇ ಕಾರಣವೂ ಇರುವುದಿಲ್ಲ ಎಂದರು.

ರೈತರು ಆತ್ಮಹತ್ಯೆ ಮಾಡಿಕೊಂಡ ತಕ್ಷಣ ಅವರ ಮನೆಗೆ ಹೋಗಿ ಹಾರ ಹಾಕಿದ್ರೆ. ಸಾಂತ್ವನ ಹೇಳಿದ್ರೆ ಆತ್ಮಹತ್ಯೆ ನಿಲ್ಲೋಲ್ಲ.ಅದಕ್ಕೆ ಪರ್ಯಾಯವಾಗಿ ಕಾರ್ಯಕ್ರಮ ರೂಪಿಸ ಬೇಕು ಎಂದು ಹೇಳಿದರು.  ಒನ್ ಡಿಸ್ಟ್ರಿಕ್ಟ್ ಒಂದು ಪ್ರೊಡೆಕ್ಟ್ ಯೋಜನೆ ಯನ್ನು ಕಾರ್ಯರೂಪಕ್ಮೆ ತರಲಾಗುತ್ತಿದೆ. ಸಿಎಪ್ ಟಿ ಆರ್ ಐ ಜೊತೆ ಒಪ್ಪಂದ ಮಾಡಿಕೊಂಡು. 500 ಜನ ರೈತರಿಗೆ ತರಬೇತಿ ನೀಡಲಾಗುತ್ತಿದೆ. ರೈತರನ್ನು ಉದ್ಯಮಿಯಾಗಿ ಮಾಡೋದು ಈ ಕಾರ್ಯಕ್ರಮದ ಉದ್ದೇಶ.

ರೈತರು ಬೆಳೆದ ಬೆಳೆಯನ್ನು ಸಂಸ್ಕರಿಸಿ ಪ್ಯಾಕ್ ಮಾಡಿ ನೆರವಾಗಿ ರೈತರೇ ಮಾರಾಟ ಮಾಡಬಹುದಾಗಿದೆ. ಈ ವಿಚಾರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಸಿಎಪ್‍ಟಿ ಆರ್‍ಐ ನಿರ್ದೇಶಕರ ಜೊತೆ ಚರ್ಚೆ ಮಾಡಿದ್ದೇನೆ. ಎರಡು ದಿನಗಳ ಕಾಲ ಮಾರ್ಕೆಟಿಂಗ್ ತರಬೇತಿ ನೀಡುವಂತೆ ತಿಳಿಸಲಾಗಿದೆ ಎಂದರು.

ಪ್ರಧಾನ ಮಂತ್ರಿ ಆತ್ಮ ನಿರ್ಭರ ಯೋಜನೆಯಡಿ 490 ಕೋಟಿ ರೂ. ನೀಡಿದ್ದಾರೆ.ಆಹಾರ ಸಂಸ್ಕರಣ ಘಟಕಕ್ಕೂ ಈ ಯೋಜನೆಯಡಿ ಅನುದಾನ ನೀಡಿದ್ದಾರೆ ಎಂದು ಪಾಟೀಲ್ ವಿವರಿಸಿದರು.

Facebook Comments