ಚೇತೇಶ್ವರ್ ಪೂಜಾರಗೆ ಉಪನಾಯಕನ ಪಟ್ಟ

Social Share

ನವದೆಹಲಿ, ಡಿ. 12- ಬಾಂಗ್ಲಾ ದೇಶ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯಲ್ಲಿ 2-1 ರಿಂದ ಸೋಲು ಕಂಡಿರುವ ಭಾರತ ತಂಡವು ಡಿಸೆಂಬರ್ 14 ರಿಂದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಬಾಂಗ್ಲಾದೇಶ ವಿರುದ್ಧ ನಡೆದ 2ನೆ ಏಕದಿನ ಪಂದ್ಯದಲ್ಲಿ ಕೈ ಬೆರಳಿಗೆ ಗಾಯ ಮಾಡಿಕೊಂಡಿರುವ ರೋಹಿತ್ ಶರ್ಮಾ ಅವರು ಟೆಸ್ಟ್ ಸರಣಿಯಿಂದ ಹೊರಗುಳಿದಿರುವುದರಿಂದ ಕನ್ನಡಿಗ ಕೆ.ಎಲ್.ರಾಹುಲ್ಗೆ ನಾಯಕನ ಪಟ್ಟ ಅಲಂಕರಿಸಿದ್ದಾರೆ.

ಕೆ.ಎಲ್.ರಾಹುಲ್ ನಾಯಕನ ಪಾತ್ರ ನಿಭಾಯಿಸುವುದರಿಂದ ತಂಡದ ಉಪನಾಯಕನಾಗಿ ರಿಷಭ್ ಪಂತ್ ಆಯ್ಕೆಯಾಗುತ್ತಾರೆ ಎಂದು ಅಂದಾಜಿಸಲಾಗಿತ್ತಾದರೂ ಬಿಸಿಸಿಐನ ಭಾರತ ತಂಡದ ಹಿರಿಯ ಆಟಗಾರ ಚೇತೇಶ್ವರ್ ಪೂಜಾರ ಅವರಿಗೆ ಉಪನಾಯಕನ ಪಟ್ಟವನ್ನು ಕಟ್ಟಿದ್ದಾರೆ.

2020- 21ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಬಾರ್ಡರ್- ಗವಾಸ್ಕರ್ ಸರಣಿಯಲ್ಲಿ ಚೇತೇಶ್ವರ್ ಪೂಜಾರ ಅವರು ಉಪನಾಯಕನ ಪಾತ್ರವನ್ನು ನಿಭಾಯಿಸಿದ್ದರು.

ನೀವು ದೇವರು ಕೊಟ್ಟ ವರ’ ರೊನಾಲ್ಡೊ ಬಣ್ಣಿಸಿದ ಕೊಹ್ಲಿ

ತಮ್ಮ ಕಳಪೆ ಫಾರ್ಮ್ನಿಂದಾಗಿ ಭಾರತ ತಂಡದಲ್ಲಿ ಆಡುವ ಅವಕಾಶ ಕೈಚೆಲ್ಲಿದ್ದ ಚೇತೇಶ್ವರ ಪೂಜಾರ ಅವರನ್ನು ಸ್ವದೇಶದಲ್ಲಿ ಶ್ರೀಲಂಕಾ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯಿಂದ ಕೈಬಿಡಲಾಗಿತ್ತಾದರೂ, ಈಗ ಬಾಂಗ್ಲಾ ದೇಶ ವಿರುದ್ಧ ಟೆಸ್ಟ್ಗೆ ಆಯ್ಕೆ ಮಾಡುವ ಮೂಲಕ ಅಚ್ಚರಿ ಮೂಡಿಸಿದೆ.

ಚಳಿಗಾಲದ ಅಧಿವೇಶನ: ಅಗತ್ಯ ಸೌಲಭ್ಯಗಳಿಗೆ ಸ್ಪೀಕರ್ ಸೂಚನೆ

ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯವು ಡಿಸೆಂಬರ್ 14 ರಿಂದ 18ರವರೆಗೆ ಚಿತ್ತೋಗ್ರಾಮ್ನಲ್ಲಿ ನಡೆದರೆ,2ನೆ ಪಂದ್ಯವು ಡಿಸೆಂಬರ್ 22ರಿಂದ 26ರವರೆಗೂ ಢಾಕಾನಲ್ಲಿ ನಡೆಯಲಿದೆ.

BCCI, announces, cheteshwar pujara, vice captain, Test match, Bangladesh,

Articles You Might Like

Share This Article