ಬೆಂಗಳೂರು, ಸೆ. 5- ಐಸಿಸಿ ಆಯೋಜನೆಯ ಪ್ರತಿಷ್ಠಿತ ವಿಶ್ವಕಪ್ ಟೂರ್ನಿಗೆ ಅಜಿತ್ ಅಗರ್ಕರ್ ಸಾರಥ್ಯದ ಆಯ್ಕೆ ಮಂಡಳಿಯು ಹಿಟ್‍ಮ್ಯಾನ್ ರೋಹಿತ್ ಶರ್ಮಾ ಸಾರಥ್ಯದ 15 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಿದ್ದು ಕನ್ನಡಿಗ ಕೆ.ಎಲ್.ರಾಹುಲ್‍ಗೆ ತಂಡದಲ್ಲಿ ಸ್ಥಾನ ಲಭಿಸಿದೆ. ಏಷ್ಯಾಕಪ್ ಟೂರ್ನಿಗೆ ಪ್ರಕಟಿಸಿದ ತಂಡದಲ್ಲೂ ಲೋಕೇಶ್ ರಾಹುಲ್‍ಗೆ ಸ್ಥಾನ ಕಲ್ಪಿಸಲಾಗಿತ್ತಾದರೂ, ಫಿಟ್ನೆಸ್ ಸಮಸ್ಯೆಯಿಂದ ಪಾಕಿಸ್ತಾನ ಹಾಗೂ ನೇಪಾಳ ತಂಡದಿಂದ ಹೊರಗುಳಿದಿದ್ದರೂ ಸೂಪರ್-4 ಸುತ್ತಿಗೆ ಲಭ್ಯವಾಗಿದ್ದಾರೆ.
ತಿಲಕ್‍ವರ್ಮಾ- ಸಂಜು ಸ್ಯಾಮ್ಸನ್ ಔಟ್:
ಏಷ್ಯಾಕಪ್ ಟೂರ್ನಿಗೆ ಪ್ರಕಟಿಸಿದ್ದ ತಂಡದಲ್ಲಿ ಹೊಸ ಮುಖವಾಗಿ ಸ್ಥಾನ ಪಡೆದಿದ್ದ ಯುವ ಆಟಗಾರ ತಿಲಕ್ ವರ್ಮಾ ಹಾಗೂ ಮೀಸಲು ಆಟಗಾರ ಸಂಜು ಸ್ಯಾಮ್ಸನ್‍ರನ್ನು ಏಕದಿನ ವಿಶ್ವಕಪ್ ತಂಡದಿಂದ ಹೊರಗಿಡಲಾಗಿದೆ. ಕನ್ನಡಿಗ ಪ್ರಸಿಧ್ ಕೃಷ್ಣಗೆ ಕೊಕ್ ನೀಡಲಾಗಿದೆ.
ಖಾಲಿ ಇರುವ ಬೋಧಕ, ಬೋಧಕೇತರ ಹುದ್ದೆಗಳ ನೇಮಕಾತಿ : ಸಚಿವ ಸುಧಾಕರ್
ಚಹಲ್‍ಗೆ ಕೊಕ್:
ಏಷ್ಯಾಕಪ್ ಟೂರ್ನಿಯಿಂದ ಹೊರಗುಳಿದಿದ್ದರೂ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ಭರವಸೆಯಲ್ಲಿದ್ದ ಲೆಗ್‍ಸ್ಪಿನ್ನರ್ ಯುಜ್ವೇಂದ್ರ ಚಹಲ್‍ಗೆ ನಿರಾಸೆ ಉಂಟಾಗಿದೆ. ಆದರೆ ಟಿ 20 ನಂಬರ್ 1 ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರಿಗೆ ಏಕದಿನ ವಿಶ್ವಕಪ್‍ಗೆ ಚೊಚ್ಚಲ ಕರೆ ಸಿಕ್ಕಿದೆ.
ಟೀಮ್ ಇಂಡಿಯಾ ಹಾಟ್‍ಫೇವರೇಟ್:
2011ರಲ್ಲಿ ತವರಿನ ಜಂಟಿ ಆತಿಥ್ಯದಲ್ಲಿ ನಡೆದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್‍ಪಟ್ಟ ಅಲಂಕರಿಸಿದ್ದ ಟೀಮ್ ಇಂಡಿಯಾ 2013ರ ನಂತರ ತವರು ನೆಲದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಐಸಿಸಿ ಟ್ರೋಫಿ ಬರ ನೀಗಿಸಿಕೊಳ್ಳಲು ರಣತಂತ್ರ ರೂಪಿಸಿದ್ದು 8ನೇ ಕ್ರಮಾಂಕದವರೆಗೂ ಬ್ಯಾಟಿಂಗ್ ಬಲಪಡಿಸಿಕೊಳ್ಳಲು ಅಕ್ಷರ್‍ಪಟೇಲ್, ಶಾರ್ದೂಲ್ ಠಾಕೂರ್‍ರಂತಹ ಆಲ್‍ರೌಂಡರ್‍ಗಳಿಗೆ ಮಣೆ ಹಾಕಿದೆ.
ಇಂಡಿಯಾ ಮೈತ್ರಿ ಕೂಟದಲ್ಲಿ ಬಿರುಕು ಮೂಡಿಸಿದ ಸನಾತನ ಧರ್ಮದ ವಿವಾದ
ಏಕದಿನ ವಿಶ್ವಕಪ್‍ಗೆ ಭಾರತದ ಬಲಿಷ್ಠ ತಂಡ:
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ .
#BCCI, #announces, #India, #WorldCup, #squad,