ಬೆಂಗಳೂರು,ಮಾ.9- ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಸುಮಾರು ಒಂದು ಸಾವಿರ ಕೋಟಿ ರೂ. ಬೆಲೆ ಬಾಳುವ 25 ಎಕರೆಯಷ್ಟು ಜಾಗ ಪ್ರಭಾವಿಗಳ ಪಾಲಾಗುತ್ತಿದೆ ಎಂದು ಕೆಂಪೇಗೌಡ ಆಸ್ಪತ್ರೆ ಅಧ್ಯಕ್ಷ ಉಮಾಪತಿ ಶ್ರೀನಿವಾಸಗೌಡ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಭಾವಿಗಳ ಪಾಲಾಗುತ್ತಿರುವ ಜಮೀನಿನ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಒತ್ತಾಯಿಸಿದರು. ಬೆಂಗಳೂರು ದಕ್ಷಿಣ ತಾಲ್ಲೂಕು, ಬೇಗೂರು ಹೋಬಳಿಯ ದೇವರಚಿಕ್ಕನಹಳ್ಳಿ ಗ್ರಾಮಕ್ಕೆ ಸೇರಿದಂತೆ ಬಿಟಿಎಂ ಲೇಔmನ್ನು ಬಿಡಿಎ ನಿರ್ಮಾಣ ಮಾಡಿದೆ.
ಈ ಬಡಾವಣೆಯ ವಿವಿಧ ಸರ್ವೆ ನಂಬರ್‍ಗಳಿಗೆ ಸೇರಿದ ಜಮೀನನ್ನು ಪ್ರಭಾವಿಗಳು ದಾಖಲೆ ಸೃಷ್ಟಿಸಿ ಕಂದಾಯ ನಿವೇಶನಗಳನ್ನಾಗಿ ಪರಿವರ್ತಿಸಿದ್ದಾರೆ ಎಂದು ಆರೋಪಿಸಿದರು.
ಮನಬಂದತೆ ನುಗ್ಗಿದ ಎಸ್‍ಯುವಿ ; ಇಬ್ಬರು ಸಾವು, 8 ಮಂದಿಗೆ ಗಾಯ
ಬಿಡಿಎ ಬಡಾವಣೆ ಖಾಸಗಿಯವರ ಪಾಲಾಗಿ ಕಂದಾಯ ನಿವೇಶನವಾಗಿ ಪರಿವರ್ತಿತವಾಗಿದೆ ಎಂದು ದಾಖಲೆಗಳನ್ನು ಬಹಿರಂಗಪಡಿಸಿದರು. ಈ ವಿಚಾರ ಅಧಿವೇಶನದಂದು ಪ್ರಸ್ತಾಪಿಸಲಾಗಿದ್ದು, ಸಿಎಂ ಅವರು ಬಿಡಿಎ ಸ್ವತ್ತು ಎಂದು ಉತ್ತರ ನೀಡಿದ್ದಾರೆ. ಈ ರೀತಿಯ ವ್ಯವಹಾರದಲ್ಲಿ ಬಿಡಿಎ, ಕಂದಾಯ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳು ಕೈ ಜೋಡಿಸಿರುವ ಶಂಕೆಯಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಸುಮಾರು ಸಾವಿರಕ್ಕೂ ಹೆಚ್ಚು ಮಂದಿಗೆ ಅನ್ಯಾಯವಾಗಿದ್ದು, ಅವರ ಪರವಾಗಿ ವಿಷಯ ಪ್ರಸ್ತಾಪ ಮಾಡುತ್ತಿದ್ದೇನೆ. ಯಾರ ವಿರುದ್ದವೂ ಆರೋಪಿಸುತ್ತಿಲ್ಲ. ಸ್ಥಳೀಯ ಶಾಸಕರ ಮೇಲೂ ಆರೋಪ ಮಾಡುತ್ತಿಲ್ಲ.
ಪಾಕ್ ಮೇಲೆ ದಾಳಿಗೆ ಸಜ್ಜಾಗಿದೆ ಭಾರತ : ಅಮೆರಿಕ ಗುಪ್ತಚರ ಇಲಾಖೆ ಎಚ್ಚರಿಕೆ
ಸತ್ಯಾಸತ್ಯತೆ ಹೊರಬರಲು ಸೂಕ್ತ ತನಿಖೆಯಾಗಬೇಕು. ತಮಗೆ ಲಭ್ಯವಿರುವ ಮಾಹಿತಿ ಆಧರಿಸಿ ಆರೋಪ ಮಾಡುತ್ತಿದ್ದೇನೆ. ಬಿಡಿಎ ಆಸ್ತಿ ರಕ್ಷಿಸಲು ಹಾಗೂ ಅನ್ಯಾಯಕ್ಕೊಳಗಾದವರ ಪರವಾಗಿ ನ್ಯಾಯಾಲಯದ ಮೊರೆ ಹೋಗುವುದಾಗಿಯೂ ಹೇಳಿದರು.
ತಮ್ಮ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನೀಡುವ ತೀರ್ಪಿಗೆ ತಲೆ ಬಾಗುವುದಾಗಿ ಅವರು ತಿಳಿಸಿದರು.
BDA, 25 acres, land, UmapathySrinivasa Gowda,