ಬಿಡಿಎ – ಬಿಬಿಎಂಪಿ ಆಸ್ತಿ ರಕ್ಷಣೆಗೆ ಕ್ರಮ : ಸಿಎಂ

Social Share

ಬೆಂಗಳೂರು,ಫೆ.23- ಬಿಡಿಎ ಭೂ ಸ್ವಾೀಧಿನ ಮತ್ತು ಸ್ವತ್ತುಗಳ ರಕ್ಷಣೆಗೆ ಸಂಬಂಧಪಟ್ಟಂತೆ ಸ್ಪಷ್ಟತೆ ತರಲು ತಮ್ಮ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ವಿಧಾನಪರಿಷತ್‍ನಲ್ಲಿ ಸದಸ್ಯ ಮರಿತಿಬ್ಬೇಗೌಡ ಅವರು ಬೆಂಗಳೂರು ದಕ್ಷಿಣ ತಾಲ್ಲೂಕು ಬೇಗೂರು ಹೋಬಳಿ ದೇವರಚಿಕ್ಕನಹಳ್ಳಿ ಗ್ರಾಮದಲ್ಲಿ ಸ್ವಾೀನಪಡಿಸಿಕೊಳ್ಳಲಾದ ಭೂಮಿಯಲ್ಲಿನ ತೊಂದರೆಗಳ ಬಗ್ಗೆ ಸರ್ಕಾರದ ಗಮನ ಸೆಳೆದಾಗ ಉತ್ತರಿಸಿದ ಮುಖ್ಯಮಂತ್ರಿಯವರು, ಭೂ ಸ್ವಾೀಧಿನಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತನ್ನದೇ ಆದ ಕಾಯ್ದೆಯನ್ನು ಹೊಂದಿದೆ. ನಿರ್ದಿಷ್ಟ ಉದ್ದೇಶವನ್ನು ಪ್ರಸ್ತಾಪಿಸಿ 4.1 ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ. ಬಳಿಕ ಹೆಚ್ಚುವರಿ ಎಂದು ಕಂಡು ಬಂದ ಭೂಮಿಯನ್ನು ಅಧಿಸೂಚನೆಯಿಂದ ಕೈ ಬಿಡಲಾಗುವುದು.

ಮಂಡ್ಯದಲ್ಲಿ ಭೀಕರ ಕೊಲೆ, ಬೆಚ್ಚಿಬಿದ್ದ ಜನ

ನಿಯಮ 6.1 ಅನುಸಾರ ಅಂತಿಮ ಅಧಿಸೂಚನೆ ಜಾರಿಯಾದ ಬಳಿಕ ಯಾವ ಕಾರಣಕ್ಕೂ ಭೂಮಿಯನ್ನು ಕೈ ಬಿಡಲು ಸಾಧ್ಯವಿಲ್ಲ. ಈ ನಡುವೆ ಭೂಮಿಯ ಮಾಲೀಕರು ಪರಿಹಾರದ ಮೊತ್ತ ಕಡಿಮೆಯಾಗಿದೆ ಎಂದು ವಿವಿಧ ರೀತಿಯಲ್ಲಿ ತಗಾದೆಗಳನ್ನು ತೆಗೆದು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಕೆಲವು ಪ್ರಕರಣಗಳಲ್ಲಿ ತೀರ್ಪು ಸರ್ಕಾರದ ಪರವಾಗಿ ಬಂದಿದ್ದರೆ ಮತ್ತಷ್ಟು ಪ್ರಕರಣಗಳಲ್ಲಿ ಅರ್ಜಿದಾರರ ಪರ ತೀರ್ಪು ಬಂದಿದೆ.

ಬಿಬಿಎಂಪಿ ಮತ್ತು ಬಿಡಿಎ ಸ್ವತ್ತುಗಳ ರಕ್ಷಣೆ ಹಾಗೂ ಸ್ವಾೀಧಿನ ಪ್ರಕ್ರಿಯೆಯಲ್ಲಿ ಏಕರೂಪತೆ ಜಾರಿಗೆ ತರಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ಸ್ವತ್ತುಗಳ ರಕ್ಷಣೆಗಾಗಿ ಪರಿಣಾಮಕಾರಿಯಾಗಿ ವಾದ ಮಂಡಿಸಿಲ್ಲ ಎಂಬ ಆಕ್ಷೇಪವೂ ಇದೆ. ಮುಂದಿನ ದಿನಗಳಲ್ಲಿ ಈ ರೀತಿಯ ಲೋಪಗಳನ್ನು ಸರಿಪಡಿಸಲಾಗುವುದು ಎಂದರು.

ಹಾವೇರಿ : ಒಂದೇ ಕುಟುಂಬದ ಮೂವರ ಆತ್ಮಹತ್ಯೆ

ದೇವರಚಿಕ್ಕನಹಳ್ಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ವಾೀನಪಡಿಸಿಕೊಳ್ಳಲಾದ 3.23 ಎಕರೆ ಪ್ರದೇಶದಲ್ಲಿ 50 ನಿವೇಶನಗಳನ್ನು ವಿಂಗಡಿಸಲಾಗಿದೆ. 7 ನಿವೇಶನಗಳನ್ನು ಈಗಾಗಲೇ ಹಂಚಲಾಗಿದೆ. ನ್ಯಾಯಾಲಯದ ತೀರ್ಪು ವಿಳಂಬವಾಗಿದೆ ಎಂಬ ಕಾರಣಕ್ಕಾಗಿ ಉಳಿದ ನಿವೇಶನಗಳಿಗೆ ಎಂಡೋಸ್‍ಮೆಂಟ್ ನೀಡಲಾಗಿದೆ.

ಇದು ತಪ್ಪು ಕ್ರಮ. ನ್ಯಾಯಾಲಯದ ತೀರ್ಪಿಗೆ ಮೇಲ್ಮನೆ ಸಲ್ಲಿಸಲು ವಿಳಂಬ ಮಾಡಿರುವುದು ಮತ್ತು ಎಂಡೋಸ್‍ಮೆಂಟ್ ನೀಡಿರುವುದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದಾಗಿ ಸಿಎಂ ಭರವಸೆ ನೀಡಿದರು.

BDA , BBMP, property, CM Bommai,

Articles You Might Like

Share This Article