ಜನಗಾಂವ್, ಫೆ.12- ನಾನು ಹುಲಿಯ ಮಗ, ನನ್ನನ್ನು ಕೆಣಕಬೇಡಿ, ಕೆಣಕಿದರೆ ದೆಹಲಿಯ ಅಧಿಕಾರದ ಗದ್ದುಗೆಯಿಂದ ನಿಮ್ಮನ್ನು ಓಡಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಎಚ್ಚರಿಕೆ ನೀಡಿದ್ದಾರೆ. ಜನಗಾಂವ್‍ನಲ್ಲಿ ಜಿಲ್ಲಾಧಿಕಾರಿ ನೂತನ ಕಚೇರಿಯನ್ನು ಉದ್ಘಾಸಿದ ಬಳಿಕ ಸಾರ್ವಜನಿಕ ಸಮಾವೇಶನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಹೋರಾಟಕ್ಕೆ ಸಿದ್ಧನಿದ್ದೇನೆ.
ನೀವು ನನ್ನ ವಿರುದ್ಧ ಟೀಕೆ ಮಾಡಿರುವುದನ್ನು ನೋಡಿದ್ದೇನೆ. ದೆಹಲಿಯ ಕೋಟೆಗೆ ಬಿರುಗಾಳಿಯಾಗಲು ಸಿದ್ಧನಾಗಿದ್ದೇನೆ. ಎಚ್ಚರವಿರಲಿ ಮೋದಿ ಅವರೆ ನಾನು ಹುಲಿಯ ಮಗ ಎಂದಿದ್ದಾರೆ. ಅಗತ್ಯವಾದರೆ ನಾನು ರಾಷ್ಟ್ರ ರಾಜಕಾರಣಕ್ಕೆ ಪ್ರವೇಶ ಮಾಡಲು ತಯಾರಿದ್ದೇನೆ. ಕೇಂದ್ರ ಸರ್ಕಾರ ವಿದ್ಯುತ್ ಕ್ಷೇತ್ರದಲ್ಲಿ ಯಾವುದೇ ಸುಧಾರಣೆ ಮಾಡಿಲ್ಲ. ಕೃಷಿಯ ಒಂದು ಪಂಪ್‍ಸೆಟ್‍ಗೂ ಮೋಟಾರ್ ಪಂಪ್‍ಸೆಟ್ ಅಳವಡಿಸಲು ಸಾಧ್ಯವಾಗುತ್ತಿಲ್ಲ ಎಂದು ಅಸಮದಾನ ವ್ಯಕ್ತ ಪಡಿಸಿದ್ದಾರೆ.
ಇತ್ತೀಚೆಗೆ ಕೇಂದ್ರ ಸರ್ಕಾರದ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಚಂದ್ರ ಶೇಖರ್ ರಾವ್, ಪ್ರಧಾನಿ ಅಲ್ಪ ದೃಷ್ಠಿಯ ನಾಯಕ ಎಂದು ಟೀಕಿಸಿದ್ದಲ್ಲದೆ, ಬಿಜೆಪಿಯನ್ನು ಬಂಗಾಳಕೊಲ್ಲಿಯಲ್ಲಿ ಮುಳುಗಿಸಲಿದೆ ಎಂದಿದ್ದರು.ಪ್ರಧಾನಿ ಇತ್ತೀಚೆಗೆ ಹೈದರಾಬಾದ್‍ಗೆ ಭೇಟಿ ನೀಡಿ ಸಮಾನತೆಯ ಪ್ರತಿಮೆಯನ್ನು ಅನಾವರಣಗೊಳಿಸಿದರು. ಆ ಕಾರ್ಯಕ್ರಮದಲ್ಲಿ ಭಾಗವಹಿಸದೆ ಚಂದ್ರಶೇಖರ್ ದೂರ ಉಳಿದಿದ್ದು ಅಚ್ಚರಿಗೆ ಕಾರಣವಾಗಿತ್ತು.
ಇಂದು ಮುಖ್ಯಮಂತ್ರಿಯವರು ಜನ್‍ಗಾಂಗ್ ಗೆ ಭೇಟಿ ನೀಡುವ ವೇಳೆ ಬಿಜೆಪಿ ನಾಯಕರನ್ನು ಗೃಹ ಬಂಧನದಲ್ಲಿಡಲಾಗಿದೆ ಎಂಬ ಆರೋಪಗಳಿವೆ. ನಾವು ಪ್ರಜಾಪ್ರಭುತ್ವದಲ್ಲಿ ಇದ್ದೇವೆಯೋ ನಿಜಾಮರ ಆಡಳಿತದಲ್ಲಿ ಇದ್ದೇವೆಯೋ ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ.
