ಬೆಳಗಾವಿ,ಡಿ.23- ಹೊರದೇಶಗಳಿಗೆ ಗೋವಿನ ಮಾಂಸ ರಫ್ತು ಮಾಡುವ ಕಂಪನಿಗಳಿಗೆ ಹಲಾಲ್ ಪ್ರಮಾಣ ಪತ್ರ ನೀಡುವುದನ್ನು ನಿಷೇಧಿಸಲಿ ಎಂದು ವಿಧಾನಪರಿಷತ್ ಸದಸ್ಯ ನಸೀರ್ ಅಹ್ಮದ್ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಹಾರ ಪದಾರ್ಥಗಳಿಗೆ ಹಲಾಲ್ ಪ್ರಮಾಣ ಪತ್ರ ನೀಡುವುದನ್ನು ನಿಷೇಧಿಸುವಂತೆ ಕೋರಿ ವಿಧಾನಪರಿಷತ್ ಸದಸ್ಯರೊಬ್ಬರು ಖಾಸಗಿ ವಿಧೇಯಕ ಮಂಡನೆ ಮಾಡಲು ಮುಂದಾಗಿದ್ದಾರೆಂದು ತಿಳಿದು ಬಂದಿದೆ. ಆದರೆ, ನಮ್ಮ ದೇಶದಿಂದ ಹೊರ ದೇಶಗಳಿಗೆ ಗೋ ಮಾಂಸ ರಫ್ತು ಮಾಡಲಾಗುತ್ತಿದ್ದು, ಅಂತಹ ಕಂಪನಿಗಳಿಗೆ ಹಲಾಲ್ ಪ್ರಮಾಣ ಪತ್ರ ನೀಡುವುದನ್ನು ನಿಷೇಧಿಸಲಿ ನೋಡೋಣ ಎಂದು ಸವಾಲು ಹಾಕಿದರು.
ಬೆಂಗಳೂರು ವಿವಿ ಆವರಣದಲ್ಲಿ ಮಾಸ್ಕ್ ಕಡ್ಡಾಯ
ಯಾರೊಬ್ಬರೂ ಪ್ರಮಾಣ ಪತ್ರಗಳನ್ನು ನೋಡಿ ಊಟ ಮಾಡುವುದಿಲ್ಲ. ಆಹಾರ ಆಯ್ಕೆಯೂ ಸಂವಿಧಾನಬದ್ಧವಾಗಿ ಲಭ್ಯವಿರುವ ಮೂಲಭೂತ ಹಕ್ಕು. ಅದನ್ನು ನಿರ್ಬಂಧಿಸಲು ಯಾರಿಂದಲೂ ಸಾಧ್ಯವಿಲ್ಲ. ಇದು ಕೇವಲ ದ್ವೇಷ ಹರಡಿಸಲು,
ಅಶಾಂತಿ ಉಂಟು ಮಾಡುವ ಕೆಲಸವಾಗುತ್ತಿದೆ. ಸದನದಲ್ಲಿ ಈ ಖಾಸಗಿ ವಿಧೇಯಕ ಮಂಡನೆಯಾದರೆ ಖಂಡಿತವಾಗಿಯೂ ನಾವು ವಿರೋಧ ಮಾಡುತ್ತೇವೆ ಎಂದು ಅವರು ಹೇಳಿದರು.
ರಾಜ್ಯ ಸರ್ಕಾರವು ವಧಾಗಾರಗಳು, ಜಾನುವಾರುಗಳ ವಧೆಗೆ ಸಂಬಂಧಿಸಿದಂತೆ ನಿಬಂಧನೆಗಳನ್ನು ನೀಡಬಹುದು. ಆದರೆ, ಹಲಾಲ್ ಕುರಿತು ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದರು.
ಆರೋಪಿ ಸೆರೆ : 5.15 ಲಕ್ಷ ಮೌಲ್ಯದ 3 ಕಾರು- 2 ಬೈಕ್ಗಳ ವಶ
ಗೋ ಮಾಂಸ ರಫ್ತು ಮಾಡುವ ದೊಡ್ಡ ದೊಡ್ಡ ಕಂಪನಿಗಳು ಸಂಘ ಪರಿವಾರದವರಿಗೆ ಸೇರಿದ್ದಾಗಿದೆ. ಅವರಿಗೆ ಸರ್ಕಾರ ನೀಡುತ್ತಿರುವ ಹಲಾಲ್ ಪ್ರಮಾಣ ಪತ್ರವನ್ನು ನಿಷೇಧಿಸುವಂತೆ ಆಗ್ರಹಿಸಲಿ ಎಂದರು.
#BeefExport, #HalalCertificate, #Ban, #NaseerAhmed,