ಚೀನಾದ ಬೀಜಿಂಗ್‍ನಲ್ಲಿ ಮೊದಲ ಓಮಿಕ್ರಾನ್ ಕೇಸ್ ಪತ್ತೆ

Social Share

ಬೀಜಿಂಗ್, ಜ. 16.ಚೀನಾ ಮೊದಲ ಭಾರಿಗೆ ರಾಜಧಾನಿ ಬೀಜಿಂಗ್‍ನಲ್ಲಿ ಓಮಿಕ್ರಾನ್ ಸೋಂಕು ಪತ್ತೆಯಾಗಿದೆ ಎಂದು ವರದಿ ಮಾಡಿದೆ,ಸೋಂಕಿತ ವ್ಯಕ್ತಿಯು ಬೀಜಿಂಗ್ ನಗರದ ವಾಯುವ್ಯ ಜಿಲ್ಲೆಯ ಹೈಡಿಯನಲ್ಲಿ ವಾಸಿಸುತ್ತಿದ್ದಾರೆ ಮತ್ತು ಕೆಲಸ ಮಾಡುತ್ತಾರೆ.
ವ್ಯಕ್ತಿಯು ಗುರುವಾರ ರೋಗಲಕ್ಷಣ ಕಂಡುಬಂದು ಪರೀಕ್ಷಿಸಿದಾಗ ಓಮಿಕ್ರಾನ್ ಸೋಂಕು ದೃಢಪಟ್ಟಿದೆ ಎಂದು ಅಕಾರಿಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು, ಫೆಬ್ರವರಿ 4 ರಂದು ಚಳಿಗಾಲದ ಒಲಿಂಪಿಕ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭಕ್ಕೆ ಮೂರು ವಾರಗಳ ಮೊದಲು ಸೋಂಕು ಕಾಣಿಸಿಕೊಂಡಿದೆ,ಇಲ್ಲಿಯವರೆಗೆ, ಚೀನಾದ ಶಾಂಘೈ, ಪಶ್ಚಿಮ ನಗರ ಕ್ಸಿಯಾನ್, ದಕ್ಷಿಣದ ಗುವಾಂಗ್ಡಾಂಗ್ ಪ್ರಾಂತ್ಯದ ನಗರಗಳಾದ ಝುಹೈ ಮತ್ತು ಝೊಂಗ್ಶಾನ್ ಒಮಿಕ್ರಾನ್ ಸೋಂಕುಗಳನ್ನು ವರದಿಯಾಗಿದೆ.
ಸಮುದಾಯ ಪ್ರಸರಣವನ್ನು ತಡೆಗಟ್ಟುವ ಪ್ರಯತ್ನದಲ್ಲಿ ವಸತಿ ಸಂಯುಕ್ತಗಳನ್ನು ಮತ್ತು ಕ್ಸಿಯಾನ್ನಂತಹ ಸಂಪೂರ್ಣ ನಗರಗಳನ್ನು ಲಾಕ್‍ಡೌನ್ ಮಾಡಿದ್ದಾರೆ.ಬೀಜಿಂಗ್ ರೋಗಿಯ ವಸತಿ ಕಾಂಪೌಂಡ್ ಮತ್ತು ಕೆಲಸದ ಸ್ಥಳವನ್ನು ಮುಚ್ಚಲಾಗಿದೆ. ಚೀನಾ ಶನಿವಾರ 119 ಹೊಸ ಕರೋನವೈರಸ್ ಸೋಂಕಿತರ ಪತೆಯಾಗಿದೆ ಎಂದು ವರದಿ ಮಾಡಿದೆ,

Articles You Might Like

Share This Article