ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ಕ್ಷೀರಭಾಗ್ಯ ಹಾಲಿನ ಪೌಡರ್..!

Social Share

ಬೆಳಗಾವಿ, ನ.19- ಬೆಳಗಾವಿ ಸುವರ್ಣಸೌಧ ಬಳಿಯ ಹಲಗಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಗುರುಸಿದ್ದೇಶ್ವರ ಸ್ವೀಟ್ಸ್ ಅಂಗಡಿ ಮೇಲೆ ದಾಳಿ ನಡೆಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಕ್ಷೀರಭಾಗ್ಯ ಯೋಜನೆಯ 32 ಕೆಜಿ ಹಾಲಿನ ಪೌಡರ್ ವಶಪಡಿಸಿಕೊಂಡಿದ್ದಾರೆ.

ಬಡವರ ಮಕ್ಕಳಿಗೆ ಪೌಷ್ಠಿಕ ಕೊರತೆ ನಿವಾರಿಸಲು ಸರ್ಕಾರದಿಂದ ಕ್ಷೀರ ಭಾಗ್ಯ ಯೋಜನೆ ಜಾರಿ ಮಾಡಿತ್ತು. ಆದರೆ, ಬಡವರ ಮಕ್ಕಳಿಗೆ ಸೇರಬೇಕಾದ ಹಾಲಿನ ಪೌಡರ್ ಕೆಲವು ಸ್ವೀಟ್ ಮಾರ್ಟ್ ಅಂಗಡಿಗಳಲ್ಲಿ ಕವಾ ಹಾಗೂ ಇನ್ನಿತರ ಪೇಡಗಳನ್ನು ತಯಾರಿಸಲು ಬಳಕೆ ಮಾಡಲಾಗುತ್ತಿದೆ.

ಬಸವನಗುಡಿಯಲ್ಲಿ ಕಡಲೆಕಾಯಿ ಪರೀಷೆಗೆ ನಾಳೆ ಸಿಎಂ ಚಾಲನೆ

ಖಚಿತ ಮಾಹಿತಿ ಮೇರೆಗೆ ಮಕ್ಕಳ ಕಲ್ಯಾಣ ಇಲಾಖೆ ಅಕಾರಿಗಳು ಹಾಗೂ ಸ್ಥಳೀಯ ಪೊಲೀಸರು ಸ್ವೀಟ್ ಅಂಗಡಿ ಮೇಲೆ ದಾಳಿ ನಡೆಸಿ ಹಾಲಿನ ಪೌಡರ್ ವಶಪಡಿಸಿಕೊಂಡು ಅಂಗಡಿ ಸೀಜ್ ಮಾಡಿ ಮಾಲೀಕರ ವಿರುದ್ಧ ದೂರು ದಾಖಲಿಸಿದ್ದಾರೆ.

ಮತದಾರರ ವೈಯಕ್ತಿಕ ಮಾಹಿತಿ ಕಳುವಿನ ಬಗ್ಗೆ ದಾಖಲೆ ಸಿಕ್ಕಿಲ್ಲ: ತುಷಾರ್ ಗಿರಿನಾಥ್

ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಹಲವು ಅಂಗನವಾಡಿಗಳಿಂದ ಸ್ವೀಟ್ ಮಾರ್ರ್ಟ್‍ನವರು ಹಾಲಿನಪುಡಿ ಕಬಳಿಸಿರುವ ಶಂಕೆ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಂಡಿದೆ.

Belagavi, Ksheera, Bhagya, milk, powder,

Articles You Might Like

Share This Article