ಭ್ರಷ್ಟಾಚಾರದ ಬಗ್ಗೆ ಚರ್ಚಿಸಲು ಪ್ರತಿಪಕ್ಷ ಪಟ್ಟು, ಸದನದಲ್ಲಿ ವಾಕ್ಸಮರ

Social Share

ಬೆಳಗಾವಿ,ಡಿ.26-ರಾಜ್ಯ ಸರ್ಕಾರದ ಭ್ರಷ್ಟಾಚಾರವನ್ನು ನಿಯಮ 69ರಡಿ ಚರ್ಚಿಸಲು ಅವಕಾಶ ನೀಡಬೇಕೆಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪಟ್ಟು ಹಿಡಿದ ಕಾರಣ ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಭಾರೀ ವಾಕ್ ಸಮರ ನಡೆಯಿತು.

ಗಮನಸೆಳೆಯುವ ಸೂಚನೆಗಳು ಮುಗಿದ ನಂತರ ಸಿದ್ದರಾಮಯ್ಯನವರು ಪ್ರಸ್ತಾಪಿಸಿದ ವಿಷಯವನ್ನು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕೈಗೆತ್ತಿಕೊಂಡರು. ಇದು ನಿಯಮ 69ರಡಿ ಚರ್ಚಿಸಲು ಬರುವುದಿಲ್ಲ. ಇದನ್ನು ಬೇರೊಂದು ನಿಯಮದಡಿ ಚರ್ಚಿಸಲು ಅವಕಾಶ ಕೊಡುತ್ತೇನೆ ಎಂದು ಹೇಳಿದರು.

ಆಗ ಆಕ್ಷೇಪಿಸಿದ ಸಿದ್ದರಾಮಯ್ಯನವರು, ಇದು ಅತ್ಯಂತ ಮಹತ್ವದ ಮತ್ತು ಜರೂರಾಗಿರುವ ವಿಷಯ. ಸರ್ಕಾರ ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆದಿರುವುದು ಮಾಧ್ಯಮಗಳು ವರದಿ ಮಾಡಿವೆ ಪ್ರತಿದಿನ ಒಂದಿಲ್ಲೊಂದು ಆರೋಪಗಳು ಬರುತ್ತಲೇ ಇವೆ. ಹೀಗಾಗಿ ಸಾರ್ವಜನಿಕ ಮಹತ್ವದ ವಿಷಯವಾಗಿರುವುದರಿಂದ ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದರು.

ಮಿತಿಮೀರಿದ ಕೋವಿಡ್ ಕೇಸ್, ಚೀನಾದ ರಕ್ತಕ್ಕಾಗಿ ಹಾಹಾಕಾರ

ನಾನು ಈ ಹಿಂದೆಯೂ ಪ್ರಸ್ತಾಪ ಮಾಡಿದ್ದೆ. ಆಗಲೂ ಸರ್ಕಾರ ಚರ್ಚೆಗೆ ಅವಕಾಶವನ್ನೇ ಕೊಡಲಿಲ್ಲ. ಪ್ರತಿಬಾರಿ ಏನಾದರೊಂದು ಸಬೂಬು ಹೇಳಿ ಸರ್ಕಾರ ನುಣ್ಣುಚಿಕೊಳ್ಳುತ್ತಿದೆ. ಅವರಿಗೆ ಭ್ರಷ್ಟಾಚಾರದ ಬಗ್ಗೆ ಚರ್ಚಿಸಲು ಇಷ್ಟವಿದ್ದಂತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಇದರಿಂದ ಕೆರಳಿದ ಸಚಿವ ಜೆ.ಸಿ.ಮಾಧುಸ್ವಾಮಿ, ನಾವು ಚರ್ಚೆಗೆ ಅವಕಾಶ ಕೊಡಬೇಡಿ ಎಂದು ಎಲ್ಲಿಯೂ ಹೇಳಿಲ್ಲ. ನಿಯಮ 69ರಡಿ ಚರ್ಚೆ ಆರಂಭಿಸಿದರೆ ಕೇವಲ ಪ್ರತಿಪಕ್ಷದ ನಾಯಕರು ಮಾತ್ರ ಇದರಲ್ಲಿ ಭಾಗಿಯಾಗಬಹುದು. ಎಲ್ಲ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಳ್ಳಬೇಕು ಎಂಬುದು ನಮ್ಮ ಇಚ್ಚೆಯಾಗಿದೆ. ಸರ್ಕಾರ ಎಲ್ಲಿಯೂ ಕೂಡ ಚರ್ಚೆಗೆ ಹೆದರುತ್ತಿಲ್ಲ ಎಂದರು.

ಸೈಬರ್ ಅಪರಾಧ ನಿರ್ಲಕ್ಷಿಸುವ ಪೊಲೀಸರ ವಿರುದ್ಧ ಕಠಿಣ ಕ್ರಮ

ಪ್ರತಿ ಸಂದರ್ಭದಲ್ಲೂ ಅವರು ವಿಷಯ ಪ್ರಸ್ತಾಪ ಮಾಡಿದಾಗ ಸಿದ್ದರಾಮಯ್ಯ ನಾವು ಚರ್ಚೆಗೆ ಹೆದರಿ ಹೋಗುತ್ತಿದ್ದೇವೆ ಎಂದು ಗೂಬೆ ಕೂರಿಸುವ ಕೆಲಸ ಮಾಡುತ್ತಾರೆ. ನಾವು ಚರ್ಚೆಗೆ ಸಿದ್ದವಿದ್ದಾರೆ. ನಿಯಮ 69ರಡಿ ಚರ್ಚೆಗೆ ಅವಕಾಶ ಕೊಡಬೇಕಾದರೆ ಅದು ಇತ್ತೀಚಿನ ಘಟನೆಯಾಗಬೇಕು ನಿಯಮಗಳನ್ನು ಗಾಳಿಗೆ ತೂರಿ ಸದನ ನಡೆಸಲು ಅವಕಾಶವಿಲ್ಲ ಎಂದು ತಿರುಗೇಟು ಕೊಟ್ಟರು. ಆಗ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

belagavi, session, discuss corruption, Siddaramaiah,

Articles You Might Like

Share This Article