ಕನ್ನಡ ಬಾವುಟ ಹಾರಿಸಿದ ಯುವಕನಿಗೆ ಪೊಲೀಸ್ ಥಳಿತ : ತನಿಖೆಗೆ ಸಿಎಂ ಸೂಚನೆ

Social Share

ಹುಬ್ಬಳ್ಳಿ,ಡಿ.2- ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕನ್ನಡ ಬಾವುಟ ಹಾರಿಸಿದ ಯುವಕನ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಬಗ್ಗೆ ತನಿಖೆ ನಡೆಸಲು ಸೂಚಿಸಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವಕನೊಬ್ಬ ಕನ್ನಡ ಬಾವುಟ ಹಾರಿಸಿದ್ದಕ್ಕೆ ಹಲ್ಲೆ ಮಾಡಲಾಗಿದೆ ಎಂದು ದೂರು ಕೊಡಲು ಬಂದಿದ್ದ ಯುವಕನ ಮೆಲೆಯೇ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂಬ ಆರೋಪವಿದೆ. ಈಗಾಗಲೇ ನಾನು ಬೆಳಗಾವಿ ನಗರ ಪೊಲೀಸ್ ಆಯುಕ್ತರ ಜೊತೆ ಮಾತನಾಡಿದ್ದೇನೆ. ತನಿಖೆಗೆ ಸೂಚಿಸಿದ್ದೇನೆ.

ಒಂದು ವೇಳೆ ಪೊಲೀಸರು ಯುವಕನ ಮೇಲೆ ಹಲ್ಲೆ ನಡೆಸಿರುವುದು ಸಾಬೀತಾದರೆ ಖಂಡಿತವಾಗಿಯೂ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದರು. ನಾವು ಯುವಕನ ಮೇಲೆ ಹಲ್ಲೆ ನಡೆಸಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಆದರೂ ಸತ್ಯಾಸತ್ಯತೆ ತಿಳಿಯಲು ತನಿಖೆಗೆ ಸೂಚಿಸಿದ್ದೇನೆ. ವರದಿ ಬಂದ ಕ್ಷಣವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಯಾರಿಗೂ ಇದರ ಬಗ್ಗೆ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದರು.

ಜೆಡಿಎಸ್ ಅಧಿಕಾರಕ್ಕೆ ಬಂದರೆ ದಲಿತರನ್ನು ಸಿಎಂ ಮಾಡ್ತೀವಿ : ಹೆಚ್ಡಿಕೆ

ಚುನಾವಣೆಗಳು ಬಂದಾಗಲೆಲ್ಲ ಮಹಾರಾಷ್ಟ್ರ ಸರ್ಕಾರ ಗಡಿ ವಿವಾದವನ್ನು ಮುಂದಿಟ್ಟುಕೊಂಡು ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಮಾಡುತ್ತಲೇ ಇದೆ. ನಾವು ಅವರಿಗೆ ಕಾನೂನಿನ ಮೂಲಕ ಉತ್ತರ ಕೊಡುತ್ತೇವೆ. ನ್ಯಾಯಾಲಯದಲ್ಲಿ ನನಗೆ ಜಯ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಮತದಾರರ ಗುರುತಿನಚೀಟಿ ಹಗರಣ ಪ್ರಕರಣ ಹಾಗೂ ಕೆಲವು ಕಡೆ ಉದ್ದೇಶಪೂರ್ವಕವಾಗಿ ಹೆಸರುಗಳನ್ನು ತೆಗೆದು ಹಾಕಲಾಗಿದೆ ಎಂಬ ಪ್ರತಿಪಕ್ಷಗಳ ಆರೋಪ ಕುರಿತು ಪ್ರತಿಕ್ರಿಯಿಸಿ, ಅವರು ಹೇಳಿದ್ದೆಲ್ಲ ಸತ್ಯವಲ್ಲ ಎಂದರು.
ಈಗಾಗಲೇ ಕೇಂದ್ರ ಚುನಾವಣಾ ಆಯೋಗವು ತನಿಖೆಯನ್ನು ಕೈಗೆತ್ತಿಕೊಂಡಿದೆ. ರಾಜ್ಯ ಚುನಾವಣಾಧಿಕಾರಿಗಳು ನೀಡುವ ಮಾಹಿತಿ ಮೇಲೆ ತನಿಖೆ ನಡೆಸುತ್ತಾರೆ. ಇದರಲ್ಲಿ ಸರ್ಕಾರದ ಹಸ್ತಕ್ಷೇಪ ಇರುವುದಿಲ್ಲ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು.

ಉನ್ನತ ಶಿಕ್ಷಣ ಪರಿಷತ್ತಿಗೆ 10 ಮಂದಿ ನಾಮನಿರ್ದೇಶನ

ಒಂದು ಕಡೆ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ತೆಗೆದು ಹಾಕಲಾಗಿದೆ ಎಂಬ ಆರೋಪವಿದೆ. ಮತ್ತೊಂದೆಡೆ ಎರಡೆರಡು ಕಡೆ ಪಟ್ಟಿಗೆ ಹೆಸರುಗಳನ್ನು ಸೇರ್ಪಡೆ ಮಾಡಲಾಗಿದೆ ಎನ್ನಲಾಗುತ್ತಿದೆ.
ಓರ್ವ ವ್ಯಕ್ತಿ ಒಂದೇ ಕಡೆ ಮತ ಚಲಾಯಿಸಲು ಅವಕಾಶವಿದೆ. ಎರಡು ಕಡೆ ಹೆಸರುಗಳನ್ನು ಸೇರಿಸಿದವರು ಯಾರು ಎಂಬುದು ತನಿಖೆಯಾಗಬೇಕು. ಈ ಎಲ್ಲ ಅಂಶಗಳ ಬಗ್ಗೆಯೂ ಆಯೋಗವು ತನಿಖೆ ನಡೆಸುತ್ತದೆ.

ನಿಜವಾದ ಮತದಾರರನಿಗೆ ಮತ ಚಲಾಯಿಸುವ ಹಕ್ಕು ಕೈ ತಪ್ಪಬಾರದು ಎಂಬುದು ಸಂವಿಧಾನದ ಉದ್ದೇಶ. ಹಾಗಾಗಿಯೇ ಎರಡು ಕಡೆ ಇದ್ದ ಹೆಸರುಗಳನ್ನು ತೆಗೆದು ಹಾಕಲಾಗುತ್ತದೆ. ಕೆಲವು ಕಡೆ ಅಧಿಕಾರಿಗಳು ಮನೆಗೆ ಬಂದ ವೇಳೆ ಮಾಹಿತಿ ಕೊಡುವವರೇ ಇರುವುದಿಲ್ಲ. ಹೀಗಾಗಿ ಒಂದೊಂದು ಬಾರಿ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕಲಾಗುತ್ತದೆ.

600 ಕೋಟಿ ವೆಚ್ಚದ ‘ಅನುಭವ ಮಂಟಪ’ ಯೋಜನೆಗೆ ಚಾಲನೆ

ಅಂತಿಮವಾಗಿ ಆಯೋಗ ಎಲ್ಲವನ್ನು ಪರಿಶೀಲಿಸಿ ಮತದಾರರ ಪಟ್ಟಿಯನ್ನು ಸಿದ್ದಪಡಿಸುತ್ತದೆ. ಇದರಲ್ಲಿ ರಾಜಕೀಯ ಹಸ್ತಕ್ಷೇಪ ಅಥವಾ ಸರ್ಕಾರದ ಮಧ್ಯಪ್ರವೇಶ ಇರುವುದಿಲ್ಲ ಎಂದು ಬೊಮ್ಮಾಯಿ ಅವರು ಪುನರುಚ್ಚರಿಸಿದರು.

Belgaum, Kannada, flag, hoisting, Police, investigate, CM Bommai,

Articles You Might Like

Share This Article