ಬೆಳಗಾವಿ, ಡಿ.28- ರಾಜ್ಯದಲ್ಲಿ ಒಂದೇ ವರ್ಷದಲ್ಲಿ ನೂರಕ್ಕೂ ಹೆಚ್ಚು ಪೊಲೀಸ್ ಠಾಣೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಳಗಾವಿ ಪೊಲೀಸ್ ಆಯುಕ್ತರ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಪೊಲೀಸ್ ಗೃಹ ಮಂಡಳಿಯಿಂದ ರಾಜ್ಯಾದ್ಯಂತ ಒಳ್ಳೆಯ ಕೆಲಸ ಆಗುತ್ತಿದೆ.ಈಗಾಗಲೇ 16 ಪೊಲೀಸ್ ಠಾಣೆ ನಿರ್ಮಾಣದ ಹಂತದಲ್ಲಿವೆ. ಒಂದೇ ವರ್ಷದಲ್ಲಿ ನೂರಕ್ಕೂ ಹೆಚ್ಚು ಪೊಲೀಸ್ ಠಾಣೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ 2500 ಪೊಲೀಸ್ ಮನೆಗಳನ್ನು ನಿರ್ಮಾಣ ಮಾಡುತ್ತಿದ್ದು, ಸುಮಾರು 80 ಕೋಟಿ ರೂ.ಗಳ ವೆಚ್ಚದಲ್ಲಿ 300 ಜೀಪ್ ಹಾಗೂ ಸ್ಕಾರ್ಪಿಯೊ ಖರೀದಿ ಮಾಡಲಾಗುತ್ತಿದೆ. ಡಿವೈಎಸ್ಪಿಗಳಿಗೆ ಸ್ಕಾರ್ಪಿಯೊ ವಾಹನಗಳನ್ನು ನೀಡಲಾಗುತ್ತಿದೆ ಮಾಹಿತಿ ನೀಡಿದರು.
ಪ್ರಧಾನಿ ಮೋದಿ ತಾಯಿ ಹೀರಾ ಬೇನ್ ಆರೋಗ್ಯದಲ್ಲಿ ಏರುಪೇರು
ಕರ್ನಾಟಕ ಪೊಲೀಸ್ ಪಡೆಗೆ ಅಭಿನಂದಿಸಿ, ಗಡಿ ಭಾಗದಲ್ಲಿ ಕೇವಲ ಶಕ್ತಿ ಪ್ರದರ್ಶನ ಮಾಡುವುದಲ್ಲ. ಜನರ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡು ಅವರ ಸಮಸ್ಯೆ ಪರಿಹರಿಸುವ ಕೆಲಸ ಮಾಡಬೇಕು. ಗಡಿ ಭಾಗದ ಸಮಸ್ಯೆ ಪರಿಹರಿಸಿದರೆ ಹೆಚ್ಚು ಅನುಕೂಲ. ಇತ್ತೀಚೆಗೆ ವಿದ್ವಂಸಕ ಕೃತ್ಯಗಳು ನಡೆಯುತ್ತಿವೆ ಅವುಗಳನ್ನು ಅತ್ಯಂತ ವೇಗವಾಗಿ ಪತ್ತೆ ಹಚ್ಚುವ ಕೆಲಸ ಆಗುತ್ತಿದೆ ಎಂದರು.
ದಕ್ಷತೆಯಿಂದ ನಮ್ಮ ಪೊಲಿಸರು ಕೆಲಸ ಮಾಡುತ್ತಿದ್ದಾರೆ. ನಾನು ಗೃಹ ಸಚಿವನಾಗಿದ್ದಾಗ ಅಡಿಗಲ್ಲು ಹಾಕಿದ ಕಟ್ಟಡಗಳು ಈಗ ಉದ್ಘಾಟನೆಯಾಗುತ್ತಿವೆ . ಎಫ್ಎಸ್ಎಲ್ ರಿಪೋರ್ಟ್ 15 ದಿನದಲ್ಲಿ ಬಂದರೆ ಅಪರಾಧ ನಿಯಂತ್ರಣಕ್ಕೆ ಹೆಚ್ಚು ಅನುಕೂಲ ಆಗುತ್ತದೆ ಎಂದು ಹೇಳಿದರು.
ತುಮಕೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾ ಕಾರ್ಯಕಾರಿಣಿ
ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವ ಗೋವಿಂದ ಕಾರಜೋಳ, ಸಂಸದೆ ಮಂಗಳಾ ಅಂಗಡಿ, ಶಾಸಕ ಅನಿಲ್ ಬೆನಕೆ, ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Belgaum, Police station, CM Bommai,