ನಾಳೆಯಿಂದ ಬೆಳಗಾವಿ ಅಧಿವೇಶನ, ಪ್ರತಿಭಟನೆಗೆ ಸಜ್ಜಾದ ವಿವಿಧ ಸಂಘಟನೆಗಳು

Social Share

ಬೆಳಗಾವಿ,ಡಿ.18- ಬೆಳಗಾವಿ ಅಧಿವೇಶನ ಎಂದರೆ ಪ್ರತಿಭಟನೆಗಳು ಪ್ರಮುಖವಾಗಿ ಎದ್ದು ಕಾಣಿಸುತ್ತಿವೆ. ಈ ಹಿಂದಿನ ಅಧಿವೇಶನದ ಸಂದರ್ಭದಲ್ಲಿ ಹಲವು ಪ್ರತಿಭಟನೆಗಳು ನಡೆದಿರುವ ನಿದರ್ಶನಗಳಿವೆ. ಈ ಬಾರಿಯೂ ಪ್ರತಿಭಟನೆಗೆ ಅವಕಾಶ ಕೋರಿ ವಿವಿಧ ಸಂಘಟನೆಗಳು ಜಿಲ್ಲಾಡಳಿತದ ಬಳಿ ತಮ್ಮ ಸಂಘಟನೆಗಳ ಹೆಸರನ್ನು ನೋಂದಾಯಿಸಿಕೊಂಡಿವೆ.

ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿ ಅವುಗಳನ್ನು ಸರಕಾರದ ಗಮನಕ್ಕೆ ತಂದು ತಮ್ಮ ಬಹುದಿನಗಳ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಸಂಘಟನೆಗಳು ಇದೀಗ ಸಜ್ಜಾಗುತ್ತಿದ್ದು ಆಯಾ ಸಂಘಟನೆಗಳ ಕಾರ್ಯಕರ್ತರು ಬೆಳಗಾವಿಯತ್ತ ಧಾವಿಸುತ್ತಿರುವುದು ವಿಶೇಷವಾಗಿದೆ.

ನ್ಯೂಯಾರ್ಕ್ : ಅಗ್ನಿ ಅವಘಡದಲ್ಲಿ ಭಾರತೀಯ-ಅಮೆರಿಕನ್ ಮಹಿಳಾ ಉದ್ಯಮಿ ಸಾವು

ಸಂಘಟನೆಗಳು ನಡೆಸುವ ಪ್ರತಿಭಟನೆಗೆ ಜಿಲ್ಲಾಡಳಿತ ಅತ್ಯಂತ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿರುವುದು ಇನ್ನೊಂದು ವಿಶೇಷವಾಗಿದೆ.ಸೋಮವಾರದಿಂದ ಸುವರ್ಣ ವಿಧಾನಸೌಧದಲ್ಲಿ ವಿಧಾನ ಮಂಡಲದ ಚಳಿಗಾಲದ ವಿಶೇಷ ಅಧಿವೇಶನ ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ವಿವಿಧ ಸಂಘಟನೆಗಳು ಸುವರ್ಣ ಸೌಧದ ಬಳಿ ವಿವಿಧ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ರವಾನಿಸಲು ಮುಂದಾಗಿವೆ.

#BelgaumSession, #Organizations, #protest, #SuvarnaSoudha,

Articles You Might Like

Share This Article