ದನಗಳ ಕಳ್ಳಸಾಗಣೆ ತಡೆದು 9 ಹಸುಗಳನ್ನು ರಕ್ಷಿಸಿದ ಬಿಜೆಪಿ ಶಾಸಕಿ

Social Share

ಕೋಲ್ಕತ್ತಾ, ಡಿ.21- ಬಾಂಗ್ಲಾದೇಶಕ್ಕೆ ದನಗಳನ್ನು ಕಳ್ಳಸಾಗಣೆ ಮಾಡುವ ಯತ್ನವನ್ನು ವಿಫಲಗೊಳಿಸಿ ಒಂಬತ್ತು ಹಸುಗಳನ್ನು ರಕ್ಷಿಸಿರುವುದಾಗಿ ಬಿಜೆಪಿ ಶಾಸಕಿ ಅಗ್ನಿಮಿತ್ರ ಪೌಲ್ ಹೇಳಿದ್ದಾರೆ. ಅಸನ್ಸೋಲ್‍ನಿಂದ ಕೋಲ್ಕತ್ತಾಗೆ ತೆರಳುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 2ರಲ್ಲಿ ಹಸುಗಳನ್ನು ತುಂಬಿದ್ದ ಟ್ರಕ್ ಅನ್ನು ತಡೆದು ನಿಲ್ಲಿಸಿದ್ದಾಗಿ ಪಾಲ್ ಟ್ವೀಟ್ ಮಾಡಿದ್ದಾರೆ.

ಹಸುಗಳನ್ನು ತುಂಬಿದ ಟ್ರಕ್ ಅನ್ನು ನಿಲ್ಲಿಸಿ ದಾಖಲೆಗಳನ್ನು ಕೇಳಲಾಯಿತು ಆದರೆ ಯಾವುದೂ ಕಂಡುಬಂದಿಲ್ಲ ಹಸು ಕಳ್ಳಸಾಗಣೆಯು ದಂಧೆ ನಡೆಯುತ್ತಿದೆ, ಕಳ್ಳಸಾಗಣೆಗೆ ಅವಕಾಶ ಮಾಡಿಕೊಡಲು ಪೊಲೀಸರಿಗೆ ಲಂಚ ನೀಡಲಾಗಿದೆ ಎಂದು ಟ್ರಕ್‍ನಲ್ಲಿದ್ದವರು ಹೇಳಿದ್ದರು ಎಂದು ಶಾಸಕಿ ಆರೋಪಿಸಿದ್ದಾರೆ. ರಾಜ್ಯದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹಸುಗಳನ್ನು ಮೆಟಾಡೋರ್ ಮತ್ತು ಟ್ರಕ್‍ಗಳಂತಹ ವಾಹನಗಳಲ್ಲಿ ಸಾಗಿಸಲಾಗುತ್ತದೆ.

ಇದರಲ್ಲಿ ಹೊಸದೇನೂ ಇಲ್ಲ. ಬಿಜೆಪಿ ಶಾಸಕರು ಜಾನುವಾರು ಕಳ್ಳಸಾಗಣೆ ಹುಡುಕಲು ಪ್ರಯತ್ನಿಸಿ ವಿಷಯವನ್ನು ರಾಜಕೀಯಗೊಳಿಸುವ ಪ್ರಯತ್ನವಲ್ಲದೆ ಬೇರೇನೂ ಅಲ್ಲ ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಹೇಳಿದ್ದಾರೆ.

ಕಳ್ಳಭಟ್ಟಿ ದುರಂತದಲ್ಲೂ ರಾಜಕೀಯ ಕೆಸರೆರೆಚಾಟ

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪಾಲ, ಟ್ರಕ್ ಅನ್ನು ವಶಕ್ಕೆ ಪಡೆದಾಗ, ಜಾನುವಾರುಗಳನ್ನು ಭಾರತ-ಬಾಂಗ್ಲಾದೇಶದ ಗಡಿಗೆ ಕೊಂಡೊಯ್ಯಲಾಗುತ್ತಿತ್ತು ಎಂದು ಚಾಲಕರು ಒಪ್ಪಿಕೊಂಡಿದ್ದಾನೆ ಸರ್ಕಾರ ಇದನ್ನು ಮರೆಮಾಚಲು ಯತ್ನಿಸುತ್ತಿದೆ ಎಂದು ಟೀಕಿಸಿದ್ದಾರೆ.

ನಾವು ಟ್ರಕ್ ಮತ್ತು ಚಾಲಕನನ್ನು ಪೊಲೀಸರಿಗೆ ಒಪ್ಪಿಸಿದ್ದೇವೆ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ನಾನು ಭಾವಿಸುತ್ತೇನೆ. ಈ ಘಟನೆ ಅದನ್ನು ತಡೆಯಲು ಪೊಲೀಸರು ಯಾವುದೇ ಪ್ರಯತ್ನ ಮಾಡದೆ ರಾಜ್ಯದಲ್ಲಿ ಜಾನುವಾರು ಕಳ್ಳಸಾಗಾಣಿಕೆ ನಡೆಯುತ್ತಿದೆ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಅವರು ಹೇಳಿದರು.

ನಿಯಮ ಪಾಲಿಸಿ, ಇಲ್ಲವೆ ಯಾತ್ರೆ ನಿಲ್ಲಿಸಿ : ಕೇಂದ್ರ ಸರ್ಕಾರ ಎಚ್ಚರಿಕೆ

ಈ ವರ್ಷದ ಆರಂಭದಲ್ಲಿ, ಸಿಬಿಐ ಮತ್ತು ಇಡಿ ಟಿಎಂಸಿ ನಾಯಕ ಅನುಬ್ರತಾ ಮೊಂಡಲ್ ಅವರನ್ನು ಹಸು ಕಳ್ಳಸಾಗಣೆಯಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಬಂಧನವಾಗಿತ್ತು ರಾಜ್ಯದಲ್ಲಿ ಜಾನುವಾರು ಕಳ್ಳಸಾಗಣೆ ಪ್ರಸ್ತುತ ರಾಜಕೀಯ ದಾಳವಾಗಿ ತಿರುಗಿದೆ.

Bengal, BJP Leader, Claims, Stopped, Truck, Smuggling Cows,

Articles You Might Like

Share This Article