ಗುವಾಹಟಿ, ಆ.8 – ಜಾರ್ಖಂಡ್ ಕಾಂಗ್ರೇಸ್ ಶಾಸಕರಿಂದ ನಗದು ವಶಪಡಿಸಿಕೊಂಡ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಪೊಲೀಸರು ಅಸ್ಸಾಂ ಮೂಲದ ಉದ್ಯಮಿ ಅಶೋಕ್ ಕುಮಾರ್ ಧನುಕಾ ಅವರಿಗೆ ಸಮನ್ಸ ನೀಡಿದ್ದಾರೆ.
ಪಶ್ಚಿಮ ಬಂಗಾಳದ ಅಪರಾಧ ತನಿಖಾ ಇಲಾಖೆ (ಸಿಐಡಿ) ಗುವಾಹಟಿಯಲ್ಲಿರುವ ಧನುಕಾ ಅವರ ನಿವಾಸದ ಗೇಟ್‍ಗೆ ನೋಟಿಸ್ ಅಂಟಿಸಿ ಕೋಲ್ಕತ್ತಾದಲ್ಲಿ ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ತಿಳಿಸಿದ್ದಾರೆ.
ದೂರವಾಣಿ ಮೂಲಕ ಪದೇ ಪದೇ ಪ್ರಯತ್ನಿಸಿದರೂ ಧನುಕಾ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ ಆದ ಕಾರಣ ನೋಟೀಸ್ ನೀಡಿ ವಿಚಾರಣೆಗೆ ಬರುವಂತೆ ಹೇಳಿದ್ದೇವೆ ಎಂದು ಕೋಲ್ಕತಾದ ಹಿರಿಯ ಪೊಲೀಸ್ ಅಧಿಕಾರಿಗಲು ತಿಳಿಸಿದ್ದಾರೆ.
ಜಾರ್ಖಂಡ್‍ನ ಮೂವರು ಕಾಂಗ್ರೆಸ್ ಶಾಸಕರಾದ ಇರ್ಫಾನ್ ಅನ್ಸಾರಿ, ರಾಜೇಶ್ ಕಚ್ಚಪ್ ಮತ್ತು ನಮನ್ ಬಿಕ್ಸಲ್ ಕೊಂಗಾರಿ ಅವರನ್ನು ಜುಲೈ 31 ರಂದು ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿ ಅವರು ಪ್ರಯಾಣಿಸುತ್ತಿದ್ದ ಕಾರಿನಿಂದ 49 ಲಕ್ಷ ರೂಪಾಯಿ ಹಣವನ್ನು ವಶಪಡಿಸಿಕೊಳ್ಳಲಾಗಿತ್ತು.
ಧನುಕಾ ಅವರ ನಿವಾಸದ ಗೇಟಿನ ಮೇಲೆ ಸಿಐಡಿ ಅಧಿಕಾರಿಗಳು ಯಾವಾಗ ನೋಟಿಸ್ ಹಾಕಿದರು ಎಂಬುದು ತಕ್ಷಣಕ್ಕೆ ತಿಳಿದಿಲ್ಲ. ಒಟ್ಟರೆ ತನಖೆ ಹಲವು ತಿರುವು ಪಡೆಯುತ್ತಿದ್ದು ಕುತೂಹಲ ಕೆರಳಿಸಿದೆ.