ಕೋಲ್ಕತ್ತಾ,ಮಾ.12- ತುಟ್ಟಿಭತ್ಯೆ ಹೆಚ್ಚಳಕ್ಕೆ ಆಗ್ರಹಿಸಿ ಪಶ್ಚಿಮ ಬಂಗಾಳದ ರಾಜ್ಯ ಸರ್ಕಾರಿ ನೌಕರರು ನಡೆಸುತ್ತಿರುವ ಅಮರಣಾಂತರ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಲು ಬಾಧ್ಯಸ್ಥಗಾರರು ಕ್ರಮ ಕೈಗೊಳ್ಳಬೇಕು ಎಂದು ಪಶ್ಚಿಮ ಬಂಗಾಳದ ಗವರ್ನರ್ ಸಿ.ವಿ.ಆನಂದ ಬೋಸ್ ಕರೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಇಕ್ಕಟ್ಟಿನಿಂದ ಹೊರಬರಲು ಒಂದು ಸ್ವೀಕಾರಾರ್ಹ ಮಾರ್ಗಕ್ಕಾಗಿ ಬಾಧ್ಯಸ್ಥರು ಮುಂದಾಗಬೇಕು ಎಂದಿದ್ದಾರೆ. ಕೇಂದ್ರ ಸರ್ಕಾರಿ ನೌಕರರ ಪಡೆಯುವಷ್ಟರ ಮಟ್ಟಕ್ಕೆ ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಏರಿಸಬೇಕು ಎಂದು ಒತ್ತಾಯಿಸಿ 18 ಸಂಘಟನೆಗಳ ನೌಕರರು ಮೂರು ವಾರಗಳಿಂದ ಮುಷ್ಕರ ನಡೆಸುತ್ತಿದ್ದಾರೆ.
ರಾಜ್ಯದ ಮತದಾರರಿಗೆ ನ್ಯಾ.ಸಂತೋಷ್ ಹೆಗ್ಡೆ ಸಂದೇಶ : ವಿಶೇರ್ಷ ಸಂದರ್ಶನ
ಶುಕ್ರವಾರದಿಂದ ಅಮರಣಾಂತರ ಉಪವಾಸ ಸತ್ಯಾಗ್ರಹ ಆರಂಭವಾಗಿವೆ. ಪ್ರತಿಭಟನೆ ನಾಲ್ಕನೇ ವಾರಕ್ಕೆ ಕಾಲಿಡುತ್ತಿರುವುದಕ್ಕೆ ರಾಜ್ಯಪಾಲರು ವಿಷಾದ ವ್ಯಕ್ತ ಪಡಿಸಿದ್ದಾರೆ.
ಸಮಸ್ಯೆಗಳು ಸಂಕೀರ್ಣವಾಗಿರಬಹುದು ಆದರೆ ಯಾವಾಗಲೂ ಸರಳವಾದ ಮಾರ್ಗವಿದೆ ಎಂದು ರಾಜ್ಯಪಾಲರ ಅಕೃತ ಟ್ವಿಟರ್ ಖಾತೆಯಲ್ಲಿ ಪೆÇೀಸ್ಟ್ ಮಾಡಲಾಗಿದೆ. ಸರ್ಕಾರಿ ನೌಕರರು ತಮ್ಮ ಪ್ರಮುಖವಾದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸುತ್ತಿದ್ದಾರೆ. ಈ ನಡುವೆ ಉಪವಾಸ ಸತ್ಯಾಗ್ರಹ ನಿರತರ ಜೀವಗಳು ಅಮೂಲ್ಯ.
ಅಪಾಯಕಾರಿಯಾದ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಲು ಬಾಧ್ಯಸ್ಥರು ಒಟ್ಟಿಗೆ ಕುಳಿತು ಮಾತುಕತೆ ನಡೆಸಬೇಕು. ಸ್ವೀಕಾರ್ಹವಾದ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಅಕ್ರಮ ಸಿಲಿಂಡರ್ ದಾಸ್ತಾನು- ರೀಫಿಲ್ಲಿಂಗ್ ಮಾಡುತ್ತಿದ್ದ ಮನೆಮೇಲೆ ಸಿಸಿಬಿ ದಾಳಿ
ಆದರೆ ಸರ್ಕಾರ ಡಿಎ ಹೆಚ್ಚಳಕ್ಕೆ ನಿರಾಕರಿಸಿದೆ. ಈ ವಾರದ ಆರಂಭದಲ್ಲಿ ನಡೆದ ವಿಧಾನಸಭೆಯಲ್ಲಿ ಮಾತನಾಡಿದ್ದ
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪ್ರತಿಭಟನಾಕಾರರು ನನ್ನ ತಲೆ ಕತ್ತರಿಸಿದ ಸಹ ಡಿಎ ಹೆಚ್ಚಳ ಮಾಡಬೇಕು ಎಂಬ ಬೇಡಿಕೆಯನ್ನು ಪೂರೈಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.
Bengal, Guv, urges, govt ,employees, hunger, strike, DA, hike, end, stir,