ಬೆಂಗಳೂರು, ಜ.18- ನಗರದಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿ ನಗದೂ ಸೇರಿದಂತೆ 9 ಲಕ್ಷ ರೂ. ಮೌಲ್ಯದ ಗಾಂಜಾ, ಎಂಡಿಎಂಎ ಕ್ರಿಸ್ಟೇಲ್ ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಸಿಂಗಾಪುರ, ವರದರಾಜ ನಗರ ನಿವಾಸಿಗಳಾದ ಶೇಖ್ ಅಲಿ(47), ಶೇಖ್ ಸಲ್ಮಾನ್(24), ವಿಲ್ಸನ್ ಗಾರ್ಡನ್ನ ಮುಜಾಮಿಲ್ ಪಾಷಾ ಅಲಿಯಾಸ್ ಮುಜ್ಜು(34) ಮತ್ತು ಶ್ರೀರಾಂಪುರದ ಲಕ್ಷ್ಮೀನಾರಾಯಣಪುರಂ ನಿವಾಸಿ ವಿನೋದ್ ಕುಮಾರ್ ಅಲಿಯಾಸ್ ಚಿನ್ನಿ(28) ಬಂಧಿತರು.
ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸಿಂಗಾಪುರ, ಕಾನ್ಶೀರಾಮ್ ನಗರದ ಕೆರೆ ಪಕ್ಕದಲ್ಲಿರುವ ಮನೆಯೊಂದರಲ್ಲಿ ಮಾದಕ ವಸ್ತುಗಳಾದ ಗಾಂಜಾ ಮತ್ತು ಎಂಡಿಎಂಎ ಕ್ರಿಸ್ಟೇಲ್ಗಳನ್ನು ಸಂಗ್ರಹಿಸಿಕೊಂಡು ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ.
ಫೆ.2 ರಂದು ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ..?
ಇನ್ಸ್ಪೆಕ್ಟರ್ ಸುಂದರ್ ಅವರು ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯೊಂದಿಗೆ ಮನೆ ಮೇಲೆ ದಾಳಿ ಮಾಡಿ ನಾಲ್ವರನ್ನು ಬಂಧಿಸಿ 2 ಕೆಜಿ 380 ಗ್ರಾಂ ತೂಕದ ಗಾಂಜಾ, 56 ಗ್ರಾಂ ತೂಕದ ಎಂಡಿಎಂಎ ಕ್ರಿಸ್ಟೇಲ್, 2.39 ಲಕ್ಷ ರೂ ನಗದು, ಎರಡು ಮೊಬೈಲ್ಗಳು, ಎರಡು ದ್ವಿಚಕ್ರ ವಾಹನಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಇನ್ನಿತರ ಪರಿಕರಗಳನ್ನು ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ 9 ಲಕ್ಷ ರೂ.ಗೂ ಅಕ ಎಂದು ಅಂದಾಜಿಸಲಾಗಿದೆ.
ಆರೋಪಿಗಳು ಕಡಿಮೆ ಸಮಯದಲ್ಲಿ ಹೆಚ್ಚಿನ ಹಣ ಸಂಪಾದನೆ ಮಾಡುವ ಉದ್ದೇಶದಿಂದ ತಮಗೆ ಪರಿಚಯವಿರುವ ವ್ಯಕ್ತಿಗಳಿಂದ ಮಾದಕ ವಸ್ತುಗಳನ್ನು ಕಡಿಮೆ ಬೆಲೆಗೆ ಖರೀದಿ ಮಾಡಿಕೊಂಡು ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡು ಚಿಕ್ಕ ಚಿಕ್ಕ ಪ್ಯಾಕೇಟ್ಗಳಾಗಿ ಮಾಡಿ ತಮಗೆ ಪರಿಚಯವಿರುವ ಗಿರಾಕಿಗಳಿಗೆ ಮಾರುತ್ತಿದ್ದರು.
ಒಂದು ಗ್ರಾಂ ಎಂಡಿಎಂಎ ಕ್ರಿಸ್ಟೇಲ್ನ್ನು 8 ಸಾವಿರದಿಂದ 10 ಸಾವಿರದಂತೆ ಹಾಗೂ 10 ಗ್ರಾಂ ಗಾಂಜಾವನ್ನು ಒಂದು ಸಾವಿರದಿಂದ 2 ಸಾವಿರದವರೆಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದುದ್ದು ವಿಚಾರಣೆಯಿಂದ ತಿಳಿದು
ಬಂದಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.
ಈಶಾನ್ಯ ವಿಭಾಗದ ಉಪಪೊಲೀಸ್ ಆಯುಕ್ತ ಅನೂಪ್ ಎ ಶೆಟ್ಟಿ ಮಾರ್ಗದರ್ಶನದಲ್ಲಿ, ಯಲಹಂಕ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಮಂಜುನಾಥ್ ಅವರ ಸೂಚನೆಯಂತೆ ಇನ್ಸ್ಪೆಕ್ಟರ್ ಸುಂದರ್ ಅವರನ್ನೊಳಗೊಂಡ ಸಿಬ್ಬಂದಿ ತಂಡ ಈ ಕಾರ್ಯಾಚರಣೆ ಕೈಗೊಂಡಿತ್ತು. ಈ ತಂಡದ ಕಾರ್ಯವೈಖರಿಯನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.
#BengaluruPolice, #4Arrested, #DrugCase,