ಭಿಕ್ಷಾಟನೆಯಲ್ಲಿ ತೊಡಗಿದ್ದ 55 ಮಂದಿ ರಕ್ಷಣೆ

Social Share

ಬೆಂಗಳೂರು,ಫೆ.23- ನಗರದ ಪ್ರಮುಖ ಸ್ಥಳಗಳಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ್ದ ಒಟ್ಟು 55 ಮಂದಿಯನ್ನು ಸಿಸಿಬಿ ಮಹಿಳಾ ಸಂರಕ್ಷಣಾ ದಳದ 14 ತಂಡಗಳು ರಕ್ಷಣೆ ಮಾಡಿವೆ.

ನಗರದಲ್ಲಿ ಭಿಕ್ಷಾಟನೆ ತಡೆಗಟ್ಟುವ ನಿಟ್ಟಿನಲ್ಲಿ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತರು ಹಾಗೂ ಉಪ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಡಿಸಿಪಿಒ ಅವರ ನೇತೃತ್ವದಲ್ಲಿ ನಗರದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ, ನೋಡಲ್ ಸಂಸ್ಥೆಗಳು, ಮಕ್ಕಳ ಪಾಲನಾ ಸಂಸ್ಥೆಗಳು, ಚೈಲ್ಡ್‍ಲೈನ್ ತಂಡ, ಆಫ್ಸಾ ಚೈಲ್ಡ್‍ಲೈನ್ ತಂಡ, ಬೆಂಗಳೂರು ನಗರ ಸಹಾಯಕ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಎಸ್‍ಜೆಪಿಯು ತಂಡ ಹಾಗೂ ಕೇಂದ್ರ ಅಪರಾಧ ಪತ್ತೆದಳ ವತಿಯಿಂದ 14 ತಂಡಗಳನ್ನು ರಚಿಸಲಾಗಿತ್ತು.

ಬೆಂಗಳೂರು : ಮಾರಕಾಸ್ತ್ರಗಳಿಂದ ಕೊಚ್ಚಿ ಕಾರ್ಪೆಂಟರ್ ಕೊಲೆ

ಈ ತಂಡಗಳು ನಿನ್ನೆ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ಏಕಕಾಲದಲ್ಲಿ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ, ಈಶಾನ್ಯ, ಆಗ್ನೇಯ, ಕೇಂದ್ರ ಮತ್ತು ವೈಟ್‍ಫೀಲ್ಡ್ ವಿಭಾಗಗಳಲ್ಲಿ ಎಲ್ಲ ವಲಯಗಳ ಪ್ರಮುಖ ಸ್ಥಳಗಳ ಮೇಲೆ ಕಾರ್ಯಾಚರಣೆ ಕೈಗೊಂಡು ಹಾಟ್‍ಸ್ಪಾಟ್ ಎಂದು ಗುರುತಿಸಿಕೊಂಡು ಭಿಕ್ಷಾಟನೆಯಲ್ಲಿ ತೊಡಗಿದ್ದವರ ರಕ್ಷಣಾ ಕಾರ್ಯ ಕೈಗೊಂಡಿದ್ದವು.

ಈ ತಂಡಗಳು ಭಿಕ್ಷಾಟನೆಯಲ್ಲಿ ತೊಡಗಿದ್ದ ಮೂವರು ಹುಡುಗರು, ಐದು ಮಂದಿ ಹುಡುಗಿಯರು, 17 ಮಂದಿ ತಾಯಂದಿರು, 18 ಮಂದಿ ಮಕ್ಕಳು, ಐದು ಮಂದಿ ಹೆಂಗಸರು ಹಾಗೂ ಏಳು ಮಂದಿ ಗಂಡಸರನ್ನು ರಕ್ಷಣೆ ಮಾಡಲಾಗಿದೆ.

ಬಸ್‍ನಲ್ಲಿ ಮಹಿಳೆಯ ಸೀಟ್ ಮೇಲೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ

ಕೆಲ ಮಹಿಳೆಯರನ್ನು ಬಾಡಿಗೆ ಹಾಗೂ ಕಳ್ಳಸಾಗಾಣಿಕೆ ಮೂಲಕ ಮಕ್ಕಳನ್ನು ತಂದಿರಬಹುದು ಹಾಗೂ ಅಂತಹ ಮಕ್ಕಳಿಗೆ ನಿದ್ದೆ ಬರುವ ಔಷ ನೀಡಿ ಮಲಗಿಸಿ ಭಿಕ್ಷಾಟನೆ ಮಾಡುತ್ತಿದ್ದರು. ಮಹಿಳೆ ಮತ್ತು ಮಕ್ಕಳನ್ನು ಪಿಡಬ್ಲ್ಯೂಸಿ, ಡಿಸಿಪಿಒ ಅವರು ಸ್ವಾದಾರ ಕೇಂದ್ರಗಳಿಗೆ ಒಪ್ಪಿಸಿ ಸ್ವೀಕೃತಿಯನ್ನು ಪಡೆಯಲಾಗಿದೆ.

Bengaluru, 55 begging, rescued, police,

Articles You Might Like

Share This Article