ಬೆಂಗಳೂರು : ರಸ್ತೆ ಗುಂಡಿಗೆ ಬಿದ್ದ ಬೈಕ್ ಸವಾರ ಕೋಮಾಗೆ

Social Share

ಬೆಂಗಳೂರು,ನ.5- ಬಿಬಿಎಂಪಿಯವರಿಗೆ ಇನ್ನೆಷ್ಟು ಜೀವಗಳ ಬಲಿ ಬೇಕೋ ಆ ದೇವರೆ ಬಲ್ಲ. ರಸ್ತೆ ಗುಂಡಿ ಗಂಡಾಂತರಕ್ಕೆ ಒಂದಿಲ್ಲೊಂದು ಜೀವ ಬಲಿಯಾಗುತ್ತಿದ್ದರೂ ಪಾಲಿಕೆ ಮಾತ್ರ ಇನ್ನು ಗುಂಡಿ ಮುಚ್ಚುವ ಕಾರ್ಯವನ್ನು ಮಾತ್ರ ಚುರುಕುಗೊಳಿಸಿಲ್ಲ.

ಬಲಿಗಾಗಿ ಬಾಯ್ತೆರೆದು ಕುಳಿತಿರುವ ಯಮಸ್ವರೂಪಿ ರಸ್ತೆ ಗುಂಡಿಗೆ ಬಿದ್ದ ಬೈಕ್ ಸವಾರನೊಬ್ಬ ಕೋಮಾಗೆ ಹೋಗಿರುವ ಘಟನೆ ಜಾಲಹಳ್ಳಿಯ ಗಂಗಮ್ಮ ರಸ್ತೆಯಲ್ಲಿ ನಡೆದಿದೆ.ವಿದ್ಯಾರಣ್ಯಪುರದ ನಿವಾಸಿ ಸಂದೀಪ್(37) ಕೋಮಾದಲ್ಲಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಕಳೆದ ಮಂಗಳವಾರ ರಾತ್ರಿ ಸಂದೀಪ್ ಸ್ನೇಹಿತರ ಜೊತೆ ಕ್ರಿಕೆಟ್ ಆಡಿ ಮನೆಗೆ ಹೋಗುತ್ತಿದ್ದಾಗ ಜಾಲಹಳ್ಳಿಯ ಗಂಗಮ್ಮ ರಸ್ತೆಯ ಯಮಸ್ವರೂಪಿ ರಸ್ತೆ ಗುಂಡಿಗೆ ಬಿದ್ದರು.

ಅಪಘಾತದಲ್ಲಿ ಸಂದೀಪ್ ತಲೆಗೆ ತೀವ್ರ ಪೆಟ್ಟಾಗಿತ್ತು. ಆತನನ್ನು ತಕ್ಷಣ ಹೆಚ್‍ಎಂಟಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಮಣಿಪಾಲ್ ಆಸ್ಪತ್ರೆಗೆ ಸಾಗಿಸುವಂತೆ ಸಲಹೆ ನೀಡಿದರು.,

ಶಾಲೆಗಳಲ್ಲಿ ಧ್ಯಾನ ವಿರೋಧಿಸಿದ ಸಿದ್ದುಗೆ ಸಚಿವ ಬಿ.ಸಿ.ನಾಗೇಶ್ ತಿರುಗೇಟು

ತಕ್ಷಣ ಅವರನ್ನು ಹೆಬ್ಬಾಳದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ತಲೆಗೆ ಆಪರೇಷನ್ ಮಾಡಿ ಕೋಮಾದಲ್ಲಿರುವ ಸಂದೀಪ್‍ಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಈಗಾಗಲೇ ಹಲವಾರು ಜೀವಗಳನ್ನು ಬಲಿ ತೆಗೆದುಕೊಂಡಿರುವ ಯಮಸ್ವರೂಪಿ ರಸ್ತೆ ಗುಂಡಿಗಳನ್ನು ಮುಚ್ಚಲು ಮೀನಾಮೇಷ ಎಣಿಸುತ್ತಿರುವ ಬಿಬಿಎಂಪಿ ಅಕಾರಿಗಳ ಧೋರಣೆಗೆ ಸಾರ್ವಜನಿಕರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.

Articles You Might Like

Share This Article