ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಕಷ್ಟವಾಗಬಹುದು ಉಸಿರಾಟ

Social Share

ಬೆಂಗಳೂರು,ಡಿ.6- ಸಿಲಿಕಾನ್ ಸಿಟಿ ಬೆಂಗಳೂರು ಇದೀಗ ಪಲ್ಯೂಷನ್ ಸಿಟಿಯಾಗಿ ಬದಲಾಗಿದೆ. ನಗರದಲ್ಲಿ ವಾಯು ಮಾಲಿನ್ಯ ಮಟ್ಟ ತೀವ್ರವಾಗಿ ಕುಸಿದಿರುವುದರಿಂದ ಇಲ್ಲಿ ಇನ್ಮುಂದೆ ಉಸಿರಾಡುವುದೂ ಕಷ್ಟ ಕಷ್ಟ ಎನ್ನುವಂತಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿ ಮಾದರಿಯಲ್ಲೇ ಬೆಂಗಳೂರಲ್ಲೂ ವಾಯು ಮಾಲಿನ್ಯ ಏರಿಕೆಯಾಗುತ್ತಿ ರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದ ಒಂದು ವರ್ಷದಲ್ಲಿ ನಗರದಲ್ಲಿ ಶೇ.40 ರಷ್ಟು ಮಾಲಿನ್ಯ ಹೆಚ್ಚಳವಾಗಿರುವು ಕಂಡು ಬಂದಿದೆ.

ಕಳೆದ ವರ್ಷ ಇದ್ದ 66ರಷ್ಟಿದ್ದ ಎಕ್ಯೂಐ ವಾಯು ಗುಣಮಟ್ಟ ನವೆಂಬರ್ ಅಂತ್ಯದ ವೇಳೆಗೆ 93ಕ್ಕೆ ಏರಿಕೆಯಾಗಿರುವುದು ಕಂಡು ಬಂದಿರುವುದರಿಂದ ಬೆಂಗಳೂರಿನಲ್ಲೂ ವಾಯು ಮಾಲಿನ್ಯ ದುಪ್ಟಟಾಗುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.ಅದರಲ್ಲೂ ದೀಪಾವಳಿ ಹಬ್ಬದ ನಂತರ ನಗರದ ಬಹುತೇಕ ಪ್ರದೇಶಗಳಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಳವಾಗಿದೆ.

ಲಾಲೂಗೆ ಪುತ್ರಿಗೆ ಆದರ್ಶ ಪುತ್ರಿ ಎಂದು ಕೊಂಡಾಡಿದ ರಾಜಕೀಯ ವಿರೋಧಿಗಳು

ಎಲ್ಲೆಲ್ಲಿ ಮಾಲಿನ್ಯ ಪ್ರಮಾಣ ಹೆಚ್ಚಳ: ನಗರದಲ್ಲಿ ವಾಯು ಮಾಲಿನ್ಯ ಗುಣಮಟ್ಟ ಪತ್ತೆ ಹಚ್ಚಲು 7 ಮಾನಿಟರಿಂಗ್ ಕೇಂದ್ರಗಳನ್ನು ತೆರೆಯಲಾಗಿದ್ದು, ಆ ಯಂತ್ರಗಳಲ್ಲಿ ಬೆಂಗಳೂರು ಸಿಟಿ ಜಂಕ್ಷನ್, ಹೆಬ್ಬಾಳ, ಸಾಣೆಗುರುವನಹಳ್ಳಿ, ನಿಮ್ಹಾನ್ಸ್, ಜಯನಗರ, ಮೈಸೂರು ರಸ್ತೆ ಮತ್ತು ಸೆಂಟ್ರಲ್ ಸಿಲ್ಕï ಬೋರ್ಡ್ ಗಳಲ್ಲಿ ವಾಯು ಮಾಲಿನ್ಯ ಪ್ರಮಾಣ ಕುಸಿದಿರುವ ಅಂಕಿ ಅಂಶಗಳು ದಾಖಲಾಗಿದೆ.

ಕಾರಣವೇನು? ನಗರದಲ್ಲಿ ವಾಹನಗಳ ಸಂಖ್ಯೆ ಮಿತಿ ಮೀರುತ್ತಿರುವುದು ವಾಯು ಮಾಲಿನ್ಯ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಉಳಿದಂತೆ ನಗರೀಕರಣದ ಹೆಸರಿನಲ್ಲಿ ಹಸಿರು ಮಾಯವಾಗಿ ಕಾಂಕ್ರೀಟಿಕರಣಗೊಂಡಿರು ವುದು ಹಾಗೂ ಪರಿಸರಕ್ಕೆ ಹಾನಿಕಾರಕ ವಾಗಿರುವ ಪಟಾಕಿಗಳನ್ನು ಸ್ಪೋಟಿಸುತ್ತಿರು ವುದೇ ಇಷ್ಟೆಲ್ಲಾ ಅನಾಹುತಗಳಿಗೆ ಕಾರಣವಾಗಿದೆ.

ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ರಾಜಕೀಯ ಬದ್ಧ ವೈರಿಗಳು

ಎಚ್ಚೆತ್ತುಕೊಳ್ಳದಿದ್ದರೆ ಕಾದಿದೆ ಅಪತ್ತು: ದೆಹಲಿಯಂತೆ ನಗರದಲ್ಲೂ ಪರಿಸ್ಥಿತಿ ಕೈ ಮೀರುವ ಮೊದಲು ಸರ್ಕಾರ, ಸಂಘ ಸಂಸ್ಥೇಗಳು ಹಾಗೂ ಸಾರ್ವಜನಿಕರು ವಾಯು ಮಾಲಿನ್ಯದಿಂದ ಎದುರಾಗುವ ಅಪತ್ತುಗಳ ಬಗ್ಗೆ ಎಚ್ಚೆತ್ತುಕೊಳ್ಳುವುದು ಸೂಕ್ತ.

ಹೆಚ್ಚಾಗುತ್ತಿರುವ ವಾಹನಗಳಿಗೆ ಕಡಿವಾಣ ಹಾಕಿ, ಪರಿಸರಕ್ಕೆ ಮಾರಕವಾಗುವ ವಸ್ತುಗಳ ಉತ್ಪದಾನೆ ಮತ್ತ ಬಳಕೆ ತಪ್ಪಿಸಲು ಕ್ರಮ ಕೈಗೊಳ್ಳಬೇಕು ಇಂತಹ ಕಾರ್ಯದಲ್ಲಿ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಸರ್ಕಾರದೊಂದಿಗೆ ಕೈ ಜೋಡಿಸುವ ಅವಶ್ಯಕತೆ ಇದೆ.

Bengaluru, air, pollution,

Articles You Might Like

Share This Article