Saturday, September 23, 2023
Homeಇದೀಗ ಬಂದ ಸುದ್ದಿಆಟೋ ಚಾಲಕನ ಭೀಕರ ಕೊಲೆ

ಆಟೋ ಚಾಲಕನ ಭೀಕರ ಕೊಲೆ

- Advertisement -

ಬೆಂಗಳೂರು, ಜೂ.2- ಆಟೋ ಚಾಲಕರೊಬ್ಬರನ್ನು ಆತನ ಸಂಬಂಧಿಯೇ ಮಚ್ಚಿನಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.

ಕೆಂಗೇರಿಯ ಗಾಂಧಿ ನಗರದ ನಿವಾಸಿ ನವೀನ್ (25) ಕೊಲೆಯಾದ ಆಟೋ ಚಾಲಕ. ರಾತ್ರಿ 9 ಗಂಟೆ ಸುಮಾರಿನಲ್ಲಿ ಕೆಂಗೇರಿ ಉಪನಗರದ ಹೊಯ್ಸಳ ಸರ್ಕಲ್ ಬಳಿಯ ಹ್ಯಾಪಿ ಡೇ ಬಾರ್ಗೆ ಹೋಗಿದ್ದ ನವೀನ ಮದ್ಯಸೇವಿಸಿ ಹೊರಬರುತ್ತಿದ್ದಂತೆ ಅಲ್ಲೇ ತನ್ನ ಇಬ್ಬರು ಸಹಚರರ ಜೊತೆ ಕಾದುನಿಂತಿದ್ದ ಸಂಬಂಧಿ ಕುಮಾರ್(36) ಎಂಬಾತ ಏಕಾಏಕಿ ನವೀನ್ ಮೇಲೆ ಮಚ್ಚಿನಿಂದ ತಲೆಗೆ ಹೊಡೆದಿದ್ದಾನೆ.

- Advertisement -

ನವೀನ್ ತಪ್ಪಿಸಿಕೊಳ್ಳಲು ಯತ್ನಿಸಿದನಾದರೂ ಸಾಧ್ಯವಾಗಿಲ್ಲ. ಮತ್ತೆ ಆತನ ದೇಹದ ವಿವಿಧ ಕಡೆ ಹಲ್ಲೆ ನಡೆಸಿದ್ದರಿಂದ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬಿಜೆಪಿ ಜನಪರ ಯೋಜನೆಗಳ ಮುಂದುವರಿಕೆ: ಸಚಿವ ಖರ್ಗೆ

ಹಲ್ಲೆಯ ಸಂದರ್ಭದಲ್ಲಿ ಕುಮಾರ್ ಎಡಗಾಲಿಗೂ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈತನ ಜೊತೆಯಲ್ಲಿದ್ದ ಇನ್ನಿಬ್ಬರು ಸಹಚರರು ಸ್ಥಳದಿಂದ ಪರಾರಿಯಾಗಿದ್ದಾರೆ.

ಸುದ್ದಿ ತಿಳಿದು ಕೆಂಗೇರಿ ಠಾಣೆ ಪೊಲೀಸರು, ಎಫ್ಎಸ್ಎಲ್ ತಂಡದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಪರಾರಿಯಾಗಿರುವ ಇನ್ನಿಬ್ಬರಿಗಾಗಿ ಶೋಧ ಮುಂದುವರೆಸಿದ್ದಾರೆ.

Bengaluru, #autodriver, #murder,

- Advertisement -
RELATED ARTICLES
- Advertisment -

Most Popular