ಪ್ಯಾಂಥರ್ಸ್‍ ಗೆ ಗುಮ್ಮಲು ಬುಲ್ಸ್ ರೆಡಿ

Social Share

ಬೆಂಗಳೂರು, ಜ.6- ತೆಲುಗು ಟೈಟಾನ್ ವಿರುದ್ಧ 1 ಅಂಕ (36-35)ದ ಅಂತರದಿಂದ ವಿರೋಚಿತ ಗೆಲುವು ಸಾಧಿಸುವ ಮೂಲಕ ಪ್ರೊ ಕಬಡ್ಡಿ 8ರ ಪಾಯಿಂಟ್ಸ್ ಪಟ್ಟಿಯಲ್ಲಿ ದಬಾಂಗ್ ಡೆಲ್ಲಿ ತಂಡವು ಮತ್ತೆ ಟಾಪ್ 1 ಸ್ಥಾನವನ್ನು ಅಲಂಕರಿಸಿದ್ದರೂ ಇಂದು ನಡೆಯಲಿರುವ ಜೈಪುರ್ ಪಿಂಕ್ ಪ್ಯಾಂಥರ್ಸ್ ವಿರುದ್ಧದ ಪಂದ್ಯವನ್ನು ಜಯಿಸುವ ಮೂಲಕ ಪವನ್‍ಕುಮಾರ್ ಶೆರಾವತ್ ನಾಯಕತ್ವದ ಬೆಂಗಳೂರು ಬುಲ್ಸ್ ತಂಡವು ನಂಬರ್ 1 ಸ್ಥಾನಕ್ಕೇರುವ ಹುಮ್ಮಸ್ಸಿನಲ್ಲಿದೆ.
ಬೆಂಗಳೂರು ಬುಲ್ಸ್ ತಂಡವು ಈ ಬಾರಿಯ ಋತುವಿನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದು ಆರಂಭಿಕ ಪಂದ್ಯದಲ್ಲಿ ಸೋಲು ಕಂಡ ನಂತರ ಗುಮ್ಮಲು ರೆಡಿಯಾಗಿರುವ ಬುಲ್ಸ್ ಇದುವರೆಗೂ ಸೋಲನ್ನೇ ಕಂಡಿಲ್ಲ ಪವನ್‍ಶೆರಾವತ್‍ಗೆ ರಂಜಿತ್ ಚಂದ್ರನ್‍ರಿಂದ ಉತ್ತಮ ಸಾಥ್ ಸಿಗುತ್ತಿದ್ದರೆ ಭರತ್ ಕೂಡ ಬೋನಸ್ ಹಾಗೂ ರೈಡಿಂಗ್ ಪಾಯಿಂಟ್ಸ್ ಗಳಿಸುವ ಮೂಲಕ ಈ ಇಬ್ಬರು ಆಟಗಾರರ ಒತ್ತಡವನ್ನು ಕಡಿಮೆ ಮಾಡಿದ್ದಾರೆ.
ಕಳೆದ ಪಂದ್ಯದಲ್ಲಿ ತಂಡದ ಉಪನಾಯಕ ಹಾಗೂ ತಂಡದ ಮುಖ್ಯ ಡಿಫೆಂಡರ್ ಮಹಿಂದ್ರ ಸಿಂಗ್ ಅವರು ಹೊರಗುಳಿದಿದ್ದರೂ ಕೂಡ ಅಮನ್, ಸೌರಭ್‍ನಂದಾಲ್‍ರಿಂದಲೂ ಉತ್ತಮ ಹೋರಾಟ ಕಂಡುಬಂದಿದ್ದರಿಂದ ಬುಲ್ಸ್ ಗೆಲುವಿನ ಓಟ ಮುಂದುವರೆಸಿದ್ದಾರೆ.
ಮಂಕಾದ ಹೂಡ:
ಪಿಂಕ್ ಪ್ಯಾಂಥರ್ಸ್ ತಂಡದ ನಾಯಕ ದೀಪಕ್‍ನಿವಾಸ್ ಹೂಡಾ ಅವರು ಕಳೆದ ಋತುಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದರೂ ಕೂಡ ಈಗ ಮಂಕಾಗಿರುವುದರಿಂದ ತಂಡದ ಮೇಲೆ ಒತ್ತಡ ಬಿದ್ದಿದೆ. ಯುವ ರೈಡರ್ ಅರ್ಜುನ್ ದೇಶ್ವಾಲ್ ಅವರು ಉತ್ತಮ ಪ್ರದರ್ಶನ ನೀಡುತ್ತಾ ಇದುವರೆಗೂ 5 ಪಂದ್ಯಗಳಿಂದ 68 ಪಾಯಿಂಟ್ಸ್‍ಗಳನ್ನು ತಂದುಕೊಟ್ಟಿದ್ದಾರೆ.
ಇಂದಿನ ಪಂದ್ಯವನ್ನು ಗೆಲ್ಲಲು ಜೈಪುರನ ಕೋಚ್ ಸಂಜೀವ್‍ಕುಮಾರ್ ಬಲಿಯಾನ್ ಅವರು ರಣತಂತ್ರ ರೂಪಿಸಿದ್ದಾರೆ.

Articles You Might Like

Share This Article