ಹ್ಯಾಟ್ರಿಕ್ ಗೆಲುವಿನತ್ತ ಬೆಂಗಳೂರು ಬುಲ್ಸ್..

Social Share

ಬೆಂಗಳೂರು, ಅ.12- ತವರಿನಲ್ಲಿ ನಮ್ಮ ಗೂಳಿಗಳು ಬಲಿಷ್ಠವೆಂಬುದನ್ನು ಪ್ರೊ ಕಬಡ್ಡಿ 9ನೆ ಆವೃತ್ತಿಯಲ್ಲೂ ಬೆಂಗಳೂರು ಬುಲ್ಸ್ ತೋರಿಸಿಕೊಟ್ಟಿದೆ.

ಕಳೆದ ಋತುವಿನಲ್ಲಿ ಬುಲ್ಸ್‍ನ ನಂಬಿಕೆಯ ಆಟಗಾರ ಪವನ್ ಶೆರಾವತ್‍ರ ಅನುಪಸ್ಥಿತಿಯಲ್ಲಿ ಬುಲ್ಸ್ ಮಂಕಾಗಬಹುದು ಎಂದು ಟೂರ್ನಿಯ ಆರಂಭಕ್ಕೂ ಅಂದಾಜಿಸಲಾಗಿತ್ತಾದರೂ, ಪ್ರಥಮ ಪಂದ್ಯದಲ್ಲೇ ತೆಲುಗು ಟೈಟಾನ್ಸ್ ತಂಡದ ವಿರುದ್ಧ 34-29 ಅಂತರದಿಂದ ಗೆಲುವು ಸಾಧಿಸಿ ಶುಭಾರಂಭ ಮಾಡಿದ್ದ ಬುಲ್ಸ್ ನಂತರ ಪಂದ್ಯದಲ್ಲಿ ಪುನೇರಿ ಪಲ್ಟನ್ಸ್ ವಿರುದ್ಧ 39-41 ಅಂತರದಿಂದ ಗೆಲುವು ಸಾಧಿಸಿದ್ದು ಬೆಂಗಾಲ್ ವಾರಿಯರ್ಸ್ ವಿರುದ್ಧ ಗೆದ್ದು ಹ್ಯಾಟ್ರಿಕ್ ಸಂಭ್ರಮದ ಹೊಸ್ತಿನಲ್ಲಿದೆ.

ಬುಲ್ಸ್‍ನ ರೈಡರ್ ಹಾಗೂ ಡಿಫರೆಂಡರ್ ಬಳಗವು ಬಲಿಷ್ಠವಾಗಿದ್ದು ತಂಡದ ಪ್ರಮುಖ ರೈಡರ್ ವಿಕಾಸ್ ಕಂಡೋಲ ಎದುರಾಳಿ ಕೋರ್ಟ್‍ನಲ್ಲಿ ಗೂಳಿಯಂತೆಯೇ ಅಬ್ಬರಿಸುತ್ತಿದ್ದು ಇದುವರೆಗೂ 16 ಅಂಕಗಳನ್ನು ಕಲೆಹಾಕಿದ್ದರೆ, ಇವರಿಗೆ ಉತ್ತಮ ಸಾಥ್ ನೀಡುತ್ತಿರುವ ಭರತ್ 17, ನೀರಜ್ ನರ್ವಾಲ್ 8 ಅಂಕ ಗಳಿಸಿ ಉತ್ತಮ ಸಾಥ್ ನೀಡಿದರೆ, ಡಿಫರೆಂಡರ್‍ಗಳಾದ ಸೌರಭ್ ನಂದಲ್ (7), ನಾಯಕ ಮಹೇಂದ್ರ ಸಿಂಗ್ (6), ಅಮನ್ (4) ಉತ್ತಮ ಟ್ಯಾಕಲ್ ಮಾಡುವ ಮೂಲಕ ಎದುರಾಳಿ ರೈಡರ್‍ಗಳನ್ನು ಕಾಡುತ್ತಿದ್ದಾರೆ.

ಮತ್ತೊಂದೆಡೆ ಬೆಂಗಾಲ್ ವಾರಿಯರ್ಸ್ ಆಡಿರುವ ಎರಡು ಪಂದ್ಯಗಳಲ್ಲಿ ಹರಿಯಾನ್ ಸ್ಟೀಲರ್ಸ್ ವಿರುದ್ಧ 33-41 ರಿಂದ ಸೋಲು ಕಂಡರೂ, ಕಳೆದ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ 25-45 ಅಂತರದಿಂದ ಗೆದ್ದಿದ್ದು ಬುಲ್ಸ್ ವಿರುದ್ಧವೂ ಗೆಲುವಿನ ಅಭಿಯಾನ ಮುಂದುವರೆಸುವ ಸೂಚನೆ ನೀಡಿದೆ.

ಬಂಗಾಳ್ ವಾರಿಯರ್ಸ್ ನಾಯಕ ಮಣಿಂದರ್ ಸಿಂಗ್ (18 ಅಂಕ) ಮುಂಚೂಣಿ ರೈಡರ್ ಆಗಿದ್ದರೆ, ದೀಪಕ್ ಹೂಡಾ (9), ಮನೋಜ್ ಗೌಡ (8) ರೈಡ್ ಪಾಯಿಂಟ್ಸ್‍ಗಳನ್ನು ಕಲೆಹಾಕಿದ್ದರೆ, ಡಿಫೆಂಡರ್ ಗಿರೀಶ್ ಯಾಲಂಕಿ (9) ಉತ್ತಮ ಟ್ಯಾಕಲ್‍ಮಾಡುತ್ತಿದ್ದರೆ ಇವರಿಗೆ ಶುಭಂ ಶಿಂಧೆ, ಬಾಲಾಜಿ, ವೈಭವ್ ಗರ್ಜೆ ಉತ್ತಮ ಸಾಥ್ ನೀಡುತ್ತಿದ್ದಾರೆ.

Articles You Might Like

Share This Article