Saturday, September 23, 2023
Homeಇದೀಗ ಬಂದ ಸುದ್ದಿಕಾರು ಚಾಲಕನ ಕೊಲೆ: 7 ಮಂದಿ ಆರೋಪಿಗಳ ಬಂಧನ

ಕಾರು ಚಾಲಕನ ಕೊಲೆ: 7 ಮಂದಿ ಆರೋಪಿಗಳ ಬಂಧನ

- Advertisement -

ಬೆಂಗಳೂರು, ಮೇ 29- ಯುಗಾದಿ ಹಬ್ಬದ ಸಂದರ್ಭದಲ್ಲಿ ಜೂಜಾಟದಿಂದ ಗೆದ್ದಿದ್ದ ಹಣದ ವಿಚಾರದಲ್ಲಿ ದ್ವೇಷ ಸಾಧಿಸಿ ಕಾರು ಚಾಲಕರೊಬ್ಬರನ್ನು ಕೊಲೆ ಮಾಡಿ ಪರಾರಿಯಾಗಿದ್ದ ಏಳು ಮಂದಿ ಆರೋಪಿಗಳನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಲಗ್ಗೆರೆಯ ಪ್ರೇಮನಗರ ನಿವಾಸಿ ಮಂಜುನಾಥ ಅಲಿಯಾಸ್ ಮಂಜು(42), ಚೌಡೇಶ್ವರಿ ನಗರದ ನಾಗರಾಜ ಅಲಿಯಾಸ್ ಸ್ಪಾಟ್ ನಾಗ(38), ಅನ್ನಪೂರ್ಣೇಶ್ವರಿ ನಗರದ ಗೋಪಾಲ್ ಅಲಿಯಾಸ್ ಗೋಪಿ(35), ಕಿರಣ್ ಕುಮಾರ್(29), ಮಣಿಕಂದನ್ ಅಲಿಯಾಸ್ ಮಣಿ(23) ಮತ್ತು ಕಾರ್ತಿಕ್(34), ಬಾಬು ಅಲಿಯಾಸ್ ಹಾಸಿಗೆ ಬಾಬು(32) ಬಂಧಿತ ಆರೋಪಿಗಳು.

- Advertisement -

ಲಗ್ಗೆರೆಯ ಚೌಡೇಶ್ವರಿನಗರದ ನಿವಾಸಿ, ಕಾರು ಚಾಲಕ ರವಿ ಅಲಿಯಾಸ್ ಮತ್ತಿ ರವಿ ಮೇ.24ರಂದು ಸಂಜೆ 7.45ರ ಸುಮಾರಿಗೆ ಕಾಂಗ್ರೆಸ್ ಮುಖಂಡ, ಸ್ನೇಹಿತ ಕೃಷ್ಣಮೂರ್ತಿ ಅವರ ಹುಟ್ಟುಹಬ್ಬ ಪಾರ್ಟಿ ಮುಗಿಸಿಕೊಂಡು ಮನೆಗೆ ವಾಪಸ್ಸಾಗಿದ್ದರು.

ಆ ವೇಳೆ ಮಂಜು ಎಂಬಾತ ಪದೇ ಪದೇ ರವಿಗೆ ಫೋನ್ ಮಾಡುತ್ತಿದ್ದನು. ಕರೆ ಸ್ವೀಕರಿಸಿದಾಗ 50 ಅಡಿ ರಸ್ತೆ ಹತ್ತಿರ ಬರುವುದಾಗಿ ಮನೆಯಲ್ಲಿ ಹೇಳಿ ರವಿ ಹೋಗಿದ್ದಾಗ ಹಳೆ ದ್ವೇಷದಿಂದ ಸಂಚು ರೂಪಿಸಿ ಹೊಂಚು ಹಾಕಿದ್ದ ದುಷ್ಕರ್ಮಿಗಳು ಏಕಾಏಕಿ ಬೈಕ್‍ಗಳಲ್ಲಿ ಬಂದು ಇವರ ಮೇಲೆ ಲಾಂಗ್‍ನಿಂದ ಹಲ್ಲೆಗೆ ಯತ್ನಿಸಿದ್ದಾರೆ.

ತಕ್ಷಣ ರವಿ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಚೌಡೇಶ್ವರಿ ನಗರದ ಹಳ್ಳಿ ರುಚಿ ಹೋಟೆಲ್ ಬಳಿ ಓಡುತ್ತಿದ್ದಾಗ ಅಟ್ಟಾಡಿಸಿಕೊಂಡು ಬಂದ ದುಷ್ಕರ್ಮಿಗಳು ರವಿ ಮೇಲೆ ಮಚ್ಚು, ಲಾಂಗ್‍ಗಳಿಂದ ಹಲ್ಲೆ ನಡೆಸಿದ್ದಲ್ಲದೆ, ಕೆಳಗೆ ಬಿದ್ದ ಆತನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದರು.

25ಕ್ಕೂ ಹೆಚ್ಚು ಬಾರಿ ಇರಿದು, ಕಲ್ಲಿನಿಂದ ಜಜ್ಜಿ ಬಾಲಕಿಯ ಭೀಕರ ಕೊಲೆ

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ನಂದಿನಿ ಲೇಔಟ್ ಠಾಣೆ ಪೊಲೀಸರು ತನಿಖೆ ಕೈಗೊಂಡು ಘಟನೆ ನಡೆದ ಕೆಲವೇ ದಿನಗಳಲ್ಲಿ ಏಳುಮಂದಿ ಆರೋಪಿಗಳನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಕಳೆದ ಯುಗಾದಿ ಹಬ್ಬದಲ್ಲಿ ರವಿ ಜೂಜಾಟದಲ್ಲಿ ಹಣ ಗೆದ್ದಿದ್ದನು. ಆರೋಪಿಗಳಾದ ನಾಗರಾಜ ಮತ್ತು ಗೋಪಾಲ್ ತಾವು ಸೋತ ಹಣವನ್ನು ಕೊಡುವಂತೆ ರವಿಗೆ ಪದೇ ಪದೇ ಕೇಳುತ್ತಿದ್ದರು. ರವಿ ಹಣ ಕೊಡದಿದ್ದಾಗ ಈ ಇಬ್ಬರು ಆರೋಪಿಗಳು ಬಲವಂತವಾಗಿ ರವಿಯಿಂದ ಸ್ವಲ್ಪ ಹಣ ಪಡೆದುಕೊಂಡಿದ್ದರು.
ಕೆಲ ದಿನಗಳ ನಂತರ ರವಿ ತಾನು ಕೊಟ್ಟ ಹಣವನ್ನು ವಾಪಸ್ ಕೊಡುವಂತೆ ಆಗಾಗ ಕೇಳುತ್ತಿದ್ದರಿಂದ ರವಿ ಮೇಲೆ ಆರೋಪಿಗಳು ದ್ವೇಷ ಸಾಧಿಸುತ್ತಿದ್ದರು.

ಅದರಂತೆ ರವಿಯನ್ನು ಅಂದು ಫೋನ್ ಮಾಡಿ ಕರೆಸಿಕೊಂಡು ಗುಂಪು ಕಟ್ಟಿಕೊಂಡು ಡ್ರ್ಯಾಗರ್‍ನಿಂದ ಮನ ಬಂದಂತೆ ಇರಿದುತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ಬಿಪಿಎಲ್ ಕಾರ್ಡ್ ಮಾಫಿಯಾ ವಿರುದ್ಧ ಕ್ರಮ ಕೈಗೊಳ್ಳಲು ಎನ್.ಆರ್. ರಮೇಶ್ ಮನವಿ

ಉತ್ತರ ವಿಭಾಗದ ಪಿಎಸ್‍ಐ ಶಿವಪ್ರಕಾಶ್ ದೇವರಾಜು ಅವರ ಮಾರ್ಗದರ್ಶನದಲ್ಲಿ ಮಲ್ಲೇಶ್ವರಂ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಪ್ರವೀಣ್, ಇನ್‍ಸ್ಪೆಕ್ಟರ್ ನಲವಾಗಲು ಮಂಜುನಾಥ, ಪಿಎಸ್‍ಐಗಳಾದ ಭೀಮಾಶಂಕರ್ ಗುಳೇದ, ವಿನೋಧ ರಾಥೋಡ್ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆ ಕೈಗೊಂಡಿದ್ದರು.

Bengaluru, Car driver, murder, 7 arrested,

- Advertisement -
RELATED ARTICLES
- Advertisment -

Most Popular