ಬೆಂಗಳೂರು,ಮೇ 31- ನಾನು ಬೆಂಗಳೂರಿಗ. ನಾನು ಹುಟ್ಟಿ ಬೆಳೆದಿದ್ದು ಬೆಂಗಳೂರು ನಗರದಲ್ಲೆ, ನಾನು ಬೇರೆಯವರ ಜೊತೆ ಮಾತನಾಡುವಾಗ ನಾನು ಬೆಂಗಳೂರಿಗ ಎಂದು ಹೇಳಿಕೊಳ್ಳುತ್ತೇನೆ, ನನಗೆ ಹೆಮ್ಮೆಯಾಗುತ್ತದೆ. ಬೆಂಗಳೂರು ನಗರವನ್ನು ನಾನು ಚೆನ್ನಾಗಿ ಬಲ್ಲೆ. ಈ ಹಿಂದೆ ಸಂಚಾರಿ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ, ಅಪರಾಧ ವಿಭಾಗದ ಜಂಟೀ ಪೊಲೀಸ್ ಆಯುಕ್ತರಾಗಿ ಕೆಲಸ ಮಾಡಿದ್ದೇನೆ . ಹಾಗಾಗಿ ನನಗೆ ಬೆಂಗಳೂರು ಸಾಕಷ್ಟು ಪರಿಚಯವಿದೆ ಎಂದು ದಯಾನಂದ ಅವರು ಹೇಳಿದರು.
ನಗರದಲ್ಲಿ ರೌಡಿ ಚಟುವಟಿಕೆಗಳನ್ನು ಸಂಪೂರ್ಣವಾಗಿ ಮಟ್ಟ ಹಾಕಲಾಗುವುದು ಎಂದು ನೂತನ ನಗರ ಪೆÇಲೀಸ್ ಆಯುಕ್ತರಾದ ಬಿ. ದಯಾನಂದ್ ಅವರು ತಿಳಿಸಿದರು. ಅಧಿಕಾರ ವಹಿಸಿಕೊಂಡ ನಂತರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ರೌಡಿ ಚಟುವಟಿಕೆಗಳನ್ನು ಹತ್ತಿಕ್ಕಲು ಸಿಸಿಬಿಯಲ್ಲಿ ವಿಶೇಷ ಘಟಕವಿದೆ. ಅಲ್ಲಿ ದಕ್ಷ, ಸಮರ್ಥ ಅಧಿಕಾರಿಗಳಿದ್ದಾರೆ ಎಂದರು.
ನಾವು ಎಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂಂದಿಯ ಸಹಕಾರದೊಂದಿಗೆ ರೌಡಿ ಚಟುವಟಿಕೆಗಳನ್ನು ಹತ್ತಿಕ್ಕಲಾಗುವುದು. ಇತ್ತೀಚೆಗೆ ರೌಡಿಗಳು ರಿಯಲ್ ಎಸ್ಟೇಟ್ ಕಡೆಗೆ ಹೋಗುತ್ತಿದ್ದಾರೆ. ಅದನ್ನು ಸಹ ನಾವು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.
ಬೆಂಗಳೂರು ನಗರದ ಪ್ರಜ್ಞಾವಂತ ನಾಗರಿಕರು ಪೊಲೀಸ್ ಇಲಾಖೆ ಮೇಲೆ ಅಪಾರವಾದ ನಂಬಿಕೆ, ವಿಶ್ವಾಸ ಇಟ್ಟುಕೊಂಡಿದ್ದು, ಅದಕ್ಕೆ ಪೂರಕವಾಗಿ ಕರ್ತವ್ಯ ನಿರ್ವಹಿಸುತ್ತೇನೆ. ಕರ್ತವ್ಯಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಕೆಲಸ ಮಾಡುವುದಾಗಿ ಆಶ್ವಾಸನೆ ನೀಡುತ್ತೇನೆ ಎಂದು ಅವರು ತಿಳಿಸಿದರು.

ಬದಲಾವಣೆ ಜಗದ ನಿಯಮ, ಬದಲಾವಣೆಗೆ ತಕ್ಕಂತೆ ಕೆಲಸ ಮಾಡಲಾಗುವುದು. ಈ ಹಿಂದೆ ಹಲವಾರು ಹಿರಿಯ ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಅದನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ಎಲ್ಲಿ ಬದಲಾವಣೆ ಬೇಕೋ ಅಲ್ಲಿ ಬದಲಾವಣೆ ತರುತ್ತೇವೆ. ನಗರದ ಅಧಿಕಾರಿಗಳು, ಸಿಬ್ಬಂದಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ ತಂತ್ರಜ್ಞಾನದ ಅಳವಡಿಕೆ, ಜನಸ್ನೇಹಿ ಪೊಲೀಸಿಂಗ್ ವ್ಯವಸ್ಥೆಗೆ ಒತ್ತು ನೀಡಲಾಗುವುದು. ಜೊತೆಗೆ ಪೆÇಲೀಸರು ಜನರಿಗೆ ಹತ್ತಿರವಾಗಿರಬೇಕು ಎಂದು ಹೇಳಿದರು.
ನೂತನ ತಂತ್ರಜ್ಞಾನವನ್ನು ಕಾಲ ಕಾಲಕ್ಕೆ ಅಳವಡಿಸಿಕೊಂಡು ಅದಕ್ಕೆ ತಕ್ಕಂತೆ ಕರ್ತವ್ಯ ನಿರ್ವಹಿಸುವುದಾಗಿ ಅವರು ಹೇಳಿದರು. ಯಾವಾಗಲೂ ರಸ್ತೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್‍ಗಳು ನಿಂತು ಕೆಲಸ ಮಾಡುತ್ತಾರೆ. ನಾನು ಅವರ ಸಲಹೆ ಸೂಚನೆಗಳನ್ನು ಪಡೆದು ಮುಂದಿನ ಕೆಲಸ ಮಾಡುವುದಾಗಿ ಅವರು ಹೇಳಿದರು.
ನಗರದ ಸಂಚಾರ ನಿರ್ವಹಣೆ ಒಂದು ಸವಾಲಾಗಿದೆ ಸಂಚಾರ ದಟ್ಟಣೆ ಕಡಿಮೆ ಮಾಡಲು ಪೊಲೀಸ್ ಇಲಾಖೆ ಒಂದರಿಂದಲೇ ಸಾಧ್ಯವಿಲ್ಲ. ನಮ್ಮ ಇಲಾಖೆ ಜೊತೆ ಬಿಬಿಎಂಪಿ, ಬಿಡ್ಲ್ಯೂಎಸ್‍ಎಸ್‍ಬಿ, ಬಿಎಂಆರ್‍ಸಿ ಸೇರಿದಂತೆ ಇತರ ಇಲಾಖೆಗಳ ಸಹಕಾರ ಬೇಕು. ಎಲ್ಲರೂ ಒಟ್ಟಾಗಿ ಕೆಲಸ ನಿರ್ವಹಿಸಿದರೆ ಮಾತ್ರ ಸಂಚಾರ ನಿರ್ವಹಣೆ ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಜೆಡಿಎಸ್ ಪಕ್ಷ ವಿಸರ್ಜನೆ ಮಾಡುವುದಿಲ್ಲ: ಕುಮಾರಸ್ವಾಮಿ
ಈಗ ಮಳೆಗಾಲದ ಸಂದರ್ಭವಾಗಿದ್ದು, ಈ ವೇಳೆ ಸಾಕಷ್ಟು ಸನ್ನಿವೇಶಗಳು ಎದುರಾಗುತ್ತವೆ. ಅವುಗಳನ್ನು ಪರಿಹರಿಸಲು ಎಲ್ಲರ ಸಹಕಾರ ಬೇಕು. ರಸ್ತೆಯಲ್ಲಿ ಹೆಚ್ಚಾಗಿ ಸಂಚಾರಿ ವಿಭಾಗದ ಪೊಲೀಸ್ ಕಾನ್ಸ್ಟೇಬಲ್‍ಗಳು ಕರ್ತವ್ಯ ನಿರ್ವಹಿಸುತ್ತಾರೆ. ಅವರ ಸಲಹೆ ಸಹಕಾರ ಪಡೆದುಕೊಳ್ಳುವುದಾಗಿ ಅವರು ಹೇಳಿದರು.
ಗುಪ್ತದಳ ಪೊಲೀಸ್ ಇಲಾಖೆಯ ಬೆನ್ನೆಲುಬು. ಆಧುನಿಕ ಸಮಸ್ಯೆಗಳನ್ನು ಎದುರಿಸಲು ಗುಪ್ತದಳ ಬಲವಾಗಿರಬೇಕು. ಬೆಂಗಳೂರು ನಗರದಲ್ಲಿ ಗುಪ್ತದಳವನ್ನು ಮತ್ತಷ್ಟು ಬಲಪಡಿಸಲು ಕ್ರಮ ಕೈಗೊಳ್ಳುತ್ತೇನೆ ಎಂದರು.
ಇತ್ತೀಚಿನ ದಿನಗಳಲ್ಲಿ ಆಧುನಿಕ ಸವಾಲುಗಳಿವೆ. ಭೂಗತ ಚಟುವಟಿಕೆಗಳು, ಸೈಬರ್ ಅಪರಾಧಗಳು ಹೆಚ್ಚಾಗುತ್ತಿವೆ. ನಗರದ ಪ್ರತಿಯೊಂದು ವಿಭಾಗಗಳಲ್ಲೂ ಸೈಬರ್ ಠಾಣೆಗಳಿವೆ. ಹೆಚ್ಚಾಗಿ ಪ್ರಕರಣಗಳು ದಾಖಲಾಗುತ್ತಿರುವುದರಿಂದ ತನಿಖೆ ವಿಳಂಬವಾಗುತ್ತಿದೆ. ಹಾಗಾಗಿ ಸಣ್ಣಪುಟ್ಟ ಪ್ರಕರಣಗಳನ್ನು ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದಾಖಲು ಮಾಡಿಕೊಳ್ಳುತ್ತೇವೆ.
ಬೆಂಗಳೂರು ನಗರದಲ್ಲಿ ಭಯೋತ್ಪಾದಕ ನಿಗ್ರಹ ದಳದ ಘಟಕ ಇದೆ, ಅದನ್ನು ಇನ್ನಷ್ಟು ಚುರುಕುಗೊಳಿಸುತ್ತೇವೆ. ಸ್ಥಳೀಯ ಪೊಲೀಸರು ಭಯೋತ್ಪಾದ ಚಟುವಟಿಕೆಗಳ ಬಗ್ಗೆ ಮಾಹಿತಿ ಇದ್ದರೆ, ಅದನ್ನು ನಿಗ್ರಹಿಸಬಹುದಾಗಿದೆ ಎಂದರು.
ಇತ್ತೀಚೆಗೆ ಹೆಚ್ಚಿನ ತಂತ್ರಜ್ಞಾನವುಳ್ಳ ವಿದ್ಯಾವಂತ ಯುವಜನರು ಇಲಾಖೆಗೆ ಸೇರುತ್ತಿದ್ದಾರೆ. ಅವರುಗಳನ್ನು ಸೈಬರ್ ಕ್ರೈಂಗೆ ಬಳಸಿಕೊಳ್ಳುತ್ತೇವೆ. ಸಣ್ಣಪುಟ್ಟ ಸೈಬರ್ ಪ್ರಕರಣಗಳನ್ನು ಆಯಾ ಠಾಣೆಯಲ್ಲೇ ದಾಖಲಿಸಿಕೊಳ್ಳಲಾಗುವುದು. ಕ್ಲಿಷ್ಟಕರ ಪ್ರಕರಣಗಳನ್ನು ಆಯಾ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ವರ್ಗಾಯಿಸಲಾಗುತ್ತದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಾಮಾಜಿಕ ಜಾಲತಾಣ ಹೆಚ್ಚಾಗಿ ಅತಿಬೇಗ ಸಾರ್ವಜನಿಕರಿಗೆ ತಲುಪುತ್ತದೆ. ಇದು ಹೆಚ್ಚು ಪ್ರಚಲಿತದಲ್ಲಿದೆ. ಸಾಮಾಜಿಕ ಜಾಲತಾಣವನ್ನು ದುರುಪಯೋಗ ಮಾಡಿಕೊಳ್ಳಬಾರದು ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗಬಾರದು, ಯಾರೇ ಆಗಲಿ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನೆ ನೀಡುವಂತಹ ಹೇಳಿಕೆಯಾಗಲಿ, ಫೋಸ್ಟರ್ ಹಾಕಿದರೆ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿದರು.
ಮೋದಿ ಹತ್ಯೆಗೆ ಸಂಚು: ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಹಲವು ಕಡೆ ಎನ್‍ಐಎ ದಾಳಿ
ಪೊಲೀಸ್ ಠಾಣೆಗೆ ಸಮಸ್ಯೆ ತೆಗೆದುಕೊಂಡು ಬರುವ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ. ಅವರು ನೀಡುವ ದೂರನ್ನು ದಾಖಲಿಸಿಕೊಳ್ಳಬೇಕು. ನೀವು ಅವರ ಸಮಸ್ಯೆ ಆಲಿಸದಿದ್ದರೆ ಅವರು ಹಿರಿಯ ಅಧಿಕಾರಿಗಳನ್ನು ಭೆಟಿ ಮಾಡುತ್ತಾರೆ. ಆಗ ಆ ಠಾಣಾ ಅಧಿಕಾರಿಯ ಕಾರ್ಯಕ್ಷಮತೆ ಗೊತ್ತಾಗುತ್ತದೆ. ಪ್ರತಿ ಠಾಣೆಯಲ್ಲೂ ಜನರಿಗೆ ಸ್ಪಂದಿಸಿ ಉತ್ತಮವಾಗಿ ಕೆಲಸ ನಿರ್ವಹಿಸಿ ಎಂದು ಅವರು ಸೂಚಿಸಿದರು.
#Bengaluru, #PoliceCommissioner, #Dayananda, #rowdy, #activitie,