ಬೆಂಗಳೂರು,ಮಾ.2- ನಗರವಾಸಿಗಳ ಬಹುದಿನಗಳ ಬೇಡಿಕೆಯಾದ ಎ ಖಾತಾ ನೀಡುವುದೂ ಸೇರಿದಂತೆ ರಾಜಧಾನಿ ಬೆಂಗಳೂರಿಗೆ ಭರಪೂರ ಯೋಜನೆಗಳನ್ನೊಳಗೊಂಡಿರುವ 11,157,83 ಕೋಟಿ ರೂ.ಗಳ ದಾಖಲೆಯ ಬಿಬಿಎಂಪಿ ಬಜೆಟ್ ಮಂಡನೆಯಾಗಿದೆ.
ಆಡಳಿತಾಧಿಕಾರಿ ರಾಕೇಶ್‍ಸಿಂಗ್ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರ ಸಮ್ಮುಖದಲ್ಲಿಂದು ವಿಶೇಷ ಆಯುಕ್ತ ಜಯರಾಮ್ ರಾಯಪುರ ಅವರು ಪುರಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಪ್ರಸಕ್ತ ಸಾಲಿನ ಬಜೆಟ್ ಮಂಡನೆ ಮಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನ 4,093,86 ಕೋಟಿ ರೂ ಹಾಗೂ ಪ್ರಸಕ್ತ ವರ್ಷದ ಪಾಲಿಕೆ ಆದಾಯ 7,070,11ಕೋಟಿ ರೂ.ಗಳು ಸೇರಿದಂತೆ 11,163,97 ಕೋಟಿ ರೂ.ಗಳಾಗಿದ್ದು, ಈ ಬಾರಿ 11,157,83 ಕೋಟಿ ರೂ.ಗಳ ಉಳಿತಾಯ ಬಜೆಟ್ ಮಂಡನೆ ಮಾಡಲಾಗಿದೆ.
ಪ್ರಜಾಪ್ರಭುತ್ವ ದುರ್ಬಲಗೊಳಿಸುವ ಬಿಜೆಪಿ ಯತ್ನ ಫಲಿಸುವುದಿಲ್ಲ: ಕಾಂಗ್ರೆಸ್
ಪಾಲಿಕೆ ವ್ಯಾಪ್ತಿಯಲ್ಲಿರುವ ಬಿ ಖಾತೆ ನಿವೇಶನಗಳನ್ನು ಕ್ರಮಬದ್ದಗೊಳಿಸಿ ವರ್ಷಾಂತ್ಯದೊಳಗೆ ಎಲ್ಲ ನಿವೇಶನದಾರರಿಗೂ ಎ ಖಾತೆ ನೀಡುವ ಮೂಲಕ ಪ್ರಸಕ್ತ ಸಾಲಿನಲ್ಲಿ 300 ಕೋಟಿ ರೂ.ಗಳ ಅದಾಯ ನಿರೀಕ್ಷಿಸಲಾಗಿದೆ.
ಆಸ್ತಿ ತೆರಿಗೆ ಹೆಚ್ಚಳ ಮಾಡಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಈಗಾಗಲೇ ಖಾತಾ ಮೇಳ ನಡೆಸಲಾಗುತ್ತಿದೆ. ಕ್ರಯ ಪತ್ರ ನೋಂದಣಿಗೆ ಅವಕಾಶ ಮಾಡಿಕೊಡುವುದಕ್ಕಾಗಿ ನಗರದ ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ವಲಯಗಳಲ್ಲಿ ಇ-ಆಸ್ತಿ ತಂತ್ರಾಂಶ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ.
ಆಸ್ತಿ ತೆರಿಗೆಯಿಂದ ಹೊರಗುಳಿದಿರುವ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತಂದು ಈ ಬಾರಿ 4,412 ಕೋಟಿ ರೂ.ಗಳ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿದೆ.
ಪಾಲಿಕೆ ಅಧಿಕಾರಿಗಳಿಗೆ ಇ-ಆಫೀಸ್ ಸೌಲಭ್ಯ ಕಲ್ಪಿಸುವುದು, ಬಿಬಿಎಂಪಿ ಸಿಬ್ಬಂದಿಗಳಿಗೆ ಎರಡು ಲಕ್ಷ ರೂ.ಗಳ ನಾಡಪ್ರಭು ಕೆಂಪೇಗೌಡ ಆವಿಷ್ಕಾರ ಪ್ರಶಸ್ತಿ ನೀಡುವುದು ಹಾಗೂ ಸಿಬ್ಬಂದಿಗಳು ಮತ್ತು ಪಿಂಚಣಿದಾರರ ಅನುಕೂಲಕ್ಕಾಗಿ ಬಿಬಿಎಂಪಿ ಪಿಂಚಣಿದಾರರ ಆರೋಗ್ಯ ಕಲ್ಯಾಣ ನಿಧಿ ಸ್ಥಾಪಿಸಲಾಗುತ್ತಿದೆ ಎಂದು ಜಯರಾಮ್ ರಾಯ್‍ಪುರ ತಿಳಿಸಿದ್ದಾರೆ.
ಬೆಂಗಳೂರು ಸಂಚಾರ ದಟ್ಟಣೆಗೆ ನಿಯಂತ್ರಣಕ್ಕೆ ಬಿಬಿಎಂಪಿ ಮಹತ್ವದ ನಿರ್ಣಯ
ಪಾಲಿಕೆ ಲೆಕ್ಕಪತ್ರದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಮ್ಯಾನೇಜ್‍ಮೆಂಟ್ ಇನರ್ಮೇಷನ್ ಸಿಸ್ಟಮ್ ಜಾರಿ ಮಾಡುವುದು ಹಾಗೂ ಗುತ್ತಿಗೆದಾರರ ಬಿಲ್ ಪಾವತಿ ಸರಳೀಕರಣಗೊಳಿಸುವುದಕ್ಕಾಗಿ ಆಪ್ಷನಲ್ ವೆಂಡರ್‍ಬಿಲ್ ಡಿಸ್ಕೌಂಟಿಂಗ್ ಸಿಸ್ಟಮ್ ಪರಿಚಯಿಸಲಾಗುತ್ತಿದ್ದು, ಸರ್ಕಾರ ಈಗಾಗಲೇ 400 ಕೋಟಿ ರೂ.ಗಳ ಬಿಲ್ ಡಿಸ್ಕೌಂಟ್‍ಗೆ ಅನುಮತಿ ನೀಡಿದೆ ಎಂದು ತಿಳಿಸಿದ್ದಾರೆ.
ಚುನಾವಣಾ ವರ್ಷದ ದೃಷ್ಟಿಯಿಂದ ಒಟ್ಟಾರೆ ಬೆಂಗಳೂರಿಗೆ ಭರಪೂರ ಯೋಜನೆಗಳನ್ನು ಘೋಷಿಸುವ ಮೂಲಕ ನಗರವಾಸಿಗಳ ಜನಮನ ಗೆಲ್ಲಲು ರಾಯಪುರ ಅವರು ಕಸರತ್ತು ನಡೆಸಿರುವುದು ಕಂಡು ಬಂದಿದೆ.
ಮಹಿಳೆಯರು, ಮಕ್ಕಳು ಸುರಕ್ಷಿತವಲ್ಲದಾಗ ಸಂಭ್ರಮ ಔಚಿತ್ಯವಲ್ಲ: ಕಿರಣ್ ರಿಜಿಜು
ಈ ಹಿಂದೆ ಬಜೆಟ್ ಅನ್ನು 10 ಸಾವಿರ ಕೋಟಿ ರೂ.ಗಳಿಗೆ ನಿಗದಿಗೊಳಿಸಲು ತೀರ್ಮಾನಿಸಲಾಗಿತ್ತು. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇನ್ನು ಒಂದು ಸಾವಿರ ಕೋಟಿ ರೂ.ಗಳ ಹೆಚ್ಚುವರಿ ಅನುದಾನ ನೀಡಿರುವುದರಿಂದ ಈ ಬಾರಿ 11 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಮೊತ್ತದ ಬಜೆಟ್ ಮಂಡನೆ ಮಾಡಲಾಗಿದೆ.
BBMP, presents, Rs 11000, crore, budget,