ಬೆಂಗಳೂರು,ಜ.3- ಕೆಲವು ವರ್ಷಗಳ ಹಿಂದೆ ಉದ್ಯಾನನಗರಿ ರಸ್ತೆಗಳಲ್ಲಿ ಸಂಚರಿಸಿ ಮಾಯವಾಗಿದ್ದ ಡಬಲ್ ಡೆಕ್ಕರ್ ಬಸ್ಗಳು ಕೆಲವೇ ದಿನಗಳಲ್ಲಿ ಮತ್ತೆ ರಸ್ತೆಗಿಳಿಯಲಿವೆ.
ಸಿಲಿಕಾನ್ ಸಿಟಿ ಜನರು ಡಬಲ್ ಡಕ್ಕರ್ ಬಸ್ನಲ್ಲಿ ಕುಳಿತು ನಗರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರಣಾಂತರಗಳಿಂದ ಈ ಬಸ್ ಸೇವೆ ಸ್ಥಗಿತಗೊಳಿಸಲಾಗಿತ್ತು. ಹಲವು ವರ್ಷಗಳ ಹಿಂದೆ ಇದ್ದ ಡಬಲ್ ಡಕ್ಕರ್ ಬಸ್ಗಳ ಸಂಚಾರಕ್ಕೆ ಬಿಎಂಟಿಸಿ ನಿಗಮ ತೀರ್ಮಾನಿಸಿದೆ. ಕೆಂಪು ಬಣ್ಣದ ಕಲರ್ನೊಂದಿಗೆ ಫೆ.6ರಂದು ವಿಧಾನಸೌಧದಲ್ಲಿ ಬಸ್ಗಳಿಗೆ ಹಸಿರು ನಿಶಾನೆ ದೊರೆಯಲಿದೆ.
ಮೊದಲ ಹಂತದಲ್ಲಿ ಆರು ಡಬಲ್ ಡೆಕ್ಕರ್ ಬಸ್ಗಳ ಸಂಚಾರಕ್ಕೆ ಸರ್ಕಾರ ಅನುಮತಿ ನೀಡಿದೆ. ವಿಧಾನಸೌಧ, ಕಬ್ಬನ್ ಪಾರ್ಕ್, ಹೈಕೋರ್ಟ್ ಸುತ್ತಮುತ್ತ ಬಸ್ಗಳು ಸಂಚರಿಸಲಿವೆ. ಫ್ಲೇಓವರ್ಗಳು ಇಲ್ಲದ ರಸ್ತೆಗಳಲ್ಲಿ ಮಾತ್ರ ಈ ಬಸ್ಗಳ ಸಂಚಾರ ಸುಗಮವಾಗಿರುತ್ತದೆ.
ಒಡಿಸ್ಸಾದಲ್ಲಿ ಮತ್ತೊಬ್ಬ ರಷ್ಯಾ ಪ್ರಜೆ ಅನುಮಾನಾಸ್ಪದ ಸಾವು
ಈ ಹಿನ್ನಲೆಯಲ್ಲಿ ಫ್ಲೈಓವರ್ಗಳಿಲ್ಲದ ರಸ್ತೆಗಳಲ್ಲಿ ಮಾತ್ರ ಬಸ್ ಸಂಚರಿಸಲಿವೆ. ಮತ್ತೆ ಡಬಲ್ ಡಕ್ಕರ್ನಲ್ಲಿ ಕುಳಿತು ಪ್ರಯಾಣಿಸುವ ಭಾಗ್ಯ ನಗರದ ಜನತೆಗೆ ಲಭಿಸಲಿದೆ.
Bengaluru, Double decker, bus, BMTC,