ಬೆಂಗಳೂರಲ್ಲಿ ಜೋಡಿಕೊಲೆ : ಪರಿಚಯಸ್ಥರ ಮೇಲೆಯೇ ಅನುಮಾನ

Social Share

ಬೆಂಗಳೂರು,ಡಿ.19- ಕೋರಮಂಗಲದಲ್ಲಿ ಉದ್ಯಮಿ ಮನೆಯ ಕೆಲಸಗಾರ ಹಾಗೂ ಸೆಕ್ಯುರಿಟಿ ಗಾರ್ಡ್‍ನನ್ನು ಪರಿಚಯಸ್ಥರೇ ಕೊಲೆ ಮಾಡಿ ಹಣ, ಆಭರಣ ದೋಚಿ ಪರಾರಿಯಾಗಿದ್ದಾರೆ ಎಂದು ಪೂರ್ವ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಸುಬ್ರಹ್ಮಣೇಶ್ವರ ರಾವ್ ಶಂಕೆ ವ್ಯಕ್ತಪಡಿಸಿದ್ದಾರೆ.

ಜೋಡಿ ಕೊಲೆಯಾದ ಘಟನಾ ಸ್ಥಳಕ್ಕೆ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಸದ್ಯಕ್ಕೆ ದೊರೆತಿರುವ ಕುರುಹುಗಳ ಆಧಾರದ ಮೇಲೆ ಹೇಳುವುದಾದರೆ ಪರಿಚಯಸ್ಥರಿಂದಲೆ ಈ ಕೃತ್ಯ ನಡೆದಿರಬಹುದೆಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದರು.

ಈ ಜೋಡಿ ಕೊಲೆಯನ್ನು ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳು ಸೇರಿ ಮಾಡಿದ್ದಾರೆ. ಮನೆಯೊಳಗೆ ಯಾವುದೇ ಬೀಗಗಳನ್ನು ಮುರಿದಿರುವುದು ಕಂಡುಬಂದಿಲ್ಲ. ಈಗಾಗಲೇ ಸಾಕಷ್ಟು ಸಾಕ್ಷ್ಯಾಧಾರಗಳನ್ನು ನಮ್ಮ ತಂಡಗಳು ಕಲೆಹಾಕಿವೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

BIG BREAKING : ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ನಮಗೆ ಸಿಕ್ಕಿರುವ ಸಾಕಷ್ಟು ಸುಳಿವುಗಳ ಆಧಾರದ ಮೇಲೆ ದುಷ್ಕರ್ಮಿಗಳ ಬಂಧನಕ್ಕೆ ನಮ್ಮ ತಂಡಗಳು ಕಾರ್ಯಾಚರಣೆ ಕೈಗೊಂಡಿವೆ ಎಂದರು.ವಿಷ ಯ ತಿಳಿಯುತ್ತಿದ್ದಂತೆ ನಮ್ಮ ಪೊಲೀಸರು ಮನೆಯನ್ನು ಪರಿಶೀಲಿಸಿದಾಗ ಮನೆ ಕೆಲಸಗಾರ ಕೊಲೆಯಾಗಿರುವುದು ಮೊದಲಿಗೆ ಕಂಡುಬಂತು.

ಈ ಆಧಾರದ ಮೇಲೆ ತನಿಖೆ ನಡೆಸಿದಾಗ ಈತನ ಜೊತೆಯಲ್ಲಿದ್ದ ಸೆಕ್ಯುರಿಟಿ ಗಾರ್ಡ್ ಕಾಣದಿದ್ದಾಗ ಆತನ ಮೇಲೆ ಮೊದಲು ಶಂಕೆ ವ್ಯಕ್ತವಾಗಿತ್ತು. ತದನಂತರ ಆತನ ಪತ್ತೆ ಕಾರ್ಯ ಮಾಡುತ್ತಿದ್ದಾಗ ಘಟನೆ ಬೆಳಕಿಗೆ ಬಂದ ಆರು ಗಂಟೆಯ ನಂತರ ಸೆಕ್ಯುರಿಟಿ ಗಾರ್ಡ್ ಶವ ಸಂಪ್‍ನಲ್ಲಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಸಾವರ್ಕರ್ ಫೋಟೋಗೆ ನಮ್ಮ ಆಕ್ಷೇಪವಿಲ್ಲ : ಸಿದ್ದರಾಮಯ್ಯ

ನಮ್ಮ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದೆ. ದುಷ್ಕರ್ಮಿಗಳು ಎಷ್ಟೇ ಜಾಣತನ ಪ್ರದರ್ಶಿಸಿದರೂ ಆದಷ್ಟು ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಸುಬ್ರಹ್ಮಣೇಶ್ವರ ರಾವ್ ವಿಶ್ವಾಸ ವ್ಯಕ್ತಪಡಿಸಿದರು.

Bengaluru, double murder,

Articles You Might Like

Share This Article