ಬೆಂಗಳೂರು, ಫೆ.11- ಸ್ಕೂಟರ್‍ನಲ್ಲಿ ಪ್ಲೈಓವರ್ ಮೇಲೆ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿರುವ ಘಟನೆ ತಡ ರಾತ್ರಿ ಸಿಟಿ ಮಾರ್ಕೆಟ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗುಡ್ಡದ ಹಳ್ಳಿಯ ಅರಪತ್ ನಗರ ನಿವಾಸಿ ಕಬೀರ್ ಪಾಷಾ(22) ಮೃತಪಟ್ಟ ಸ್ಕೂಟರ್ ಸವಾರ. ಹಿಂಬದಿ ಸವಾರ ಪರ್ವೀಜ್ ಗಾಯಗೊಂಡಿದ್ದಾನೆ. ರಾತ್ರಿ ಕಬೀರ್ ಪಾಷಾ ಸ್ಕೂಟರ್ ತೆಗೆದುಕೊಂಡು ಸ್ನೇಹಿತ ಪರ್ವೀಜ್ ಮನೆಗೆ ಹೋಗಿ ಆತನನ್ನು ಕರೆದುಕೊಂಡು 11 ಗಂಟೆ ಸುಮಾರಿನಲ್ಲಿ ಟೌನ್‍ಹಾಲ್ ಕಡೆಯಿಂದ ಎನ್‍ಆರ್ ರಸ್ತೆ ಮೂಲಕ ಮೈಸೂರು ರಸ್ತೆ ಕಡೆಯ ಬಿಜಿಎಸ್ ಪ್ಲೈಓವರ್ ಮೇಲೆ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಹೋಗುತ್ತಿದ್ದಾಗ ಮುಂದೆ ಹೋಗುತ್ತಿದ್ದ ವಾಹನ ಓವರ್‍ಟೆಕ್ ಮಾಡುವ ಬರದಲ್ಲಿ ಎಆರ್ ಎಂಟರ್‍ಪ್ರೈಸಸ್ ನೇರದಲ್ಲಿ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದಾನೆ.
ಸ್ಕೂಟರ್ ಸವಾರರಿಬ್ಬರು ಕೆಳಗೆ ಬಿದ್ದಿದ್ದು, ಕಬೀರ್ ತಲೆಗೆ ಗಂಭೀರ ಪೆಟ್ಟಾಗಿ ತೀವ್ರ ರಕ್ತಸ್ರಾವವಾಗಿದೆ. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ.
ಬೆಂಗಳೂರಲ್ಲಿ ಫುಡ್ ಡೆಲಿವರಿ ಬಾಯ್ ಮತ್ತು ಟೆಂಪೋ ಚಾಲಕನ ಬರ್ಬರ ಕೊಲೆ
ಸ್ಥಳದಲ್ಲಿದ್ದ ಎಂಟು ಮೊಬೈಲ್‍ಗಳು ವಶಕ್ಕೆ:
ಸುದ್ದಿ ತಿಳಿದು ಸಿಟಿ ಮಾರ್ಕೆಟ್ ಸಂಚಾರಿ ಠಾಣೆ ಪೆÇಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ಸ್ಥಳದಲ್ಲಿ 8 ಮೊಬೈಲ್‍ಗಳು ಸಿಕ್ಕಿದ್ದು, ಅವುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಮೊಬೈಲ್‍ಗಳು ಕಬೀರನಿಗೆ ಸೇರಿದ್ದೇ, ಆತನಿಗೆ ಸೇರಿದ್ದಾದರೆ ಏತಕ್ಕೆ ಇಷ್ಟು ಮೊಬೈಲ್‍ಗಳನ್ನು ಇಟ್ಟುಕೊಂಡಿದ್ದನು. ಅಥವಾ ದರೋಡೆ ಮಾಡಿರುವುದೇ ಎಂಬುದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಸಿಟಿ ಮಾರ್ಕೆಟ್ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.