ಬಾಲಕಿಗೆ ಲೈಂಗಿಕ ದೌರ್ಜನ್ಯ: ವೃದ್ಧನ ಹೊಡೆದು ಕೊಂದ ಜನ

Social Share

ಬೆಂಗಳೂರು,ಡಿ.12- ಅಪ್ರಾಪ್ತ ಬಾಲಕಿಯನ್ನು ಬೆತ್ತಲೆಗೊಳಿಸಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆಂದು ಆರೋಪಿಸಿ ವೃದ್ಧನೊಬ್ಬನನ್ನು ಹೊಡೆದು ಕೊಲೆ ಮಾಡಿರುವ ಘಟನೆ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.

ಬಾಬೂಸಾಪಾಳ್ಯದ ನಿವಾಸಿ ಕುಪ್ಪಣ್ಣ ಅಲಿಯಾಸ್ ಕುಪ್ಪಸ್ವಾಮಿ(73) ಕೊಲೆಯಾದ ವೃದ್ಧ.
ಹನ್ನೆರಡು ವರ್ಷದ ಬಾಲಕಿ ನಿನ್ನೆ ಸಂಜೆ ಮನೆ ಸಮೀಪದ 50 ಮೀ. ದೂರದಲ್ಲಿ ಒಣಗಿ ಹಾಕಿದ್ದ ಶಾಲಾ ಸಮವಸ್ತ್ರವನ್ನು ತೆಗೆದುಕೊಂಡು ಬರಲು ಹೋದಾಗ ಕುಪ್ಪಣ್ಣ ತನ್ನ ಮನೆಗೆ ಕರೆದೊಯ್ದ ಜ್ಯೂಸ್ ಕೊಟ್ಟು ಬೆತ್ತಲೆಗೊಳಿಸಿಲೈಂಗಿಕ ದೌರ್ಜನ್ಯವೆಸಗಿದ್ದಾರೆಂಬ ಆರೋಪ ಕೇಳಿಬಂದಿದೆ.

ಹೊರಗೆ ಹೋಗಿದ್ದ ಬಾಲಕಿ ಕಾಣದಿದ್ದಾಗ ಕುಟುಂಬದವರು ಹುಡುಕುತ್ತಾ ಕುಪ್ಪಣ್ಣ ಮನೆಗೆ ಹೋದಾಗ ಬಾಲಕಿ ವಿವಸ್ತ್ರವಾಗಿರುವುದನ್ನು ನೋಡಿ ಕಿರುಚಿಕೊಂಡಿದ್ದಾರೆ. ತಕ್ಷಣ ಕುಟುಂಬದವರು, ಅಕ್ಕಪಕ್ಕದ ನಿವಾಸಿಗಳು ಕುಪ್ಪಣ್ಣ ಮನೆ ಬಳಿ ಧಾವಿಸಿ ಬಾಲಕಿ ಮೇಲೆ ಅತ್ಯಾಚಾರ ನಡೆದಿರಬಹುದೆಂದು ತಿಳಿದು ಕುಪ್ಪಣ್ಣನ ಜೊತೆ ಜಗಳವಾಡಿ ಕೈಕಾಲುಗಳಿಂದ ಮನಬಂದಂತೆ ಥಳಿಸಿ ಹೋಗಿದ್ದರು.

ಕೈ ಅಭ್ಯರ್ಥಿಗಳ ಆಯ್ಕೆಗೆ ದೆಹಲಿಯಲ್ಲಿ ಕಸರತ್ತು

ಇಂದು ಬೆಳಗ್ಗೆ ಬಾಲಕಿ ಕಡೆಯವರು ಹೆಣ್ಣೂರು ಪೊಲೀಸ್ ಠಾಣೆಗೆ ಹೋಗಿ ವೃದ್ಧನ ವಿರುದ್ಧ ದೂರು ನೀಡಿದ್ದಾರೆ.
ಪೊಲೀಸರು ಸ್ಥಳಕ್ಕಾಗಮಿಸಿದಾಗ ಅಸ್ವಸ್ಥಗೊಂಡು ಬಿದ್ದಿದ್ದ ವೃದ್ಧನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.

ಹೆಣ್ಣೂರು ಠಾಣೆಯಲ್ಲಿ ಫೋಕ್ಸೋ ಪ್ರಕರಣ ಹಾಗೂ ಕೊಲೆ ಪ್ರಕರಣಗಳು ದಾಖಲಾಗಿವೆ. ಕೊಲೆ ಪ್ರಕರಣದ ತನಿಖೆ ನಡೆಸಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಕುಪ್ಪಣ್ಣ ಬಾಲಕಿಗೆ ಲೈಂಗಿಕ ದೌರ್ಜನ್ಯ ವೆಸಗಿದ್ದನೇ ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಸಿದ್ದು ದಲಿತ ಪ್ರೀತಿ ನಾಟಕ: ಬಿಜೆಪಿ ಕಿಡಿ

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರಗೆ ರವಾನಿಸಿ ಈ ವ್ಯಕ್ತಿಯ ನಡವಳಿಕೆಗಳ ಬಗ್ಗೆ ನೆರೆಹೊರೆಯವರಿಂದ ಹಾಗೂ ಸ್ಥಳೀಯರಿಂದಲೂ ಮಾಹಿತಿಗಳನ್ನು ಸಂಗ್ರಹಿಸಿ ಮುಂದಿನಕ್ರಮ ಕೈಗೊಂಡಿದ್ದಾರೆ.

Bengaluru, girl, assaulted, old man, murder,

Articles You Might Like

Share This Article