ಆಟವಾಡುವಾಗ ಮಕ್ಕಳಿಗೆ ಮಾಸ್ಕ್ ಬೇಡ

Social Share

ಬೆಂಗಳೂರು, ಜ.4- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಲಹೆ ಮೇರೆಗೆ ರಾಜ್ಯದ ಹಲವು ಖಾಸಗಿ ಶಾಲೆಗಳು ತರಗತಿ, ಇತರ ಒಳಾಂಗಣ ಪ್ರದೇಶದಲ್ಲಿ ತಮ್ಮ ಮಕ್ಕಳಿಗೆ ಮಾಸ್ಕ್ ಹಾಕುವಂತೆ ಪೋಷಕರಿಗೆ ಸೂಚಿಸಿವೆ. ಆದರೆ ಮಕ್ಕಳು ಆಟವಾಡುವ ವೇಳೆ ಸದ್ಯಕ್ಕೆ ಮಾಸ್ಕ್‍ಗೆ ವಿನಾಯಿತಿ ನೀಡಲಾಗಿದೆ.

ಕ್ರಿಸ್‍ಮಸ್ ರಜೆ ಬಳಿಕ ಶಾಲೆಗೆ ಮರಳಿದ ಮಕ್ಕಳು ಕರ್ನಾಟಕ ಸರ್ಕಾರದ ಸುತ್ತೋಲೆ ಆಧಾರಿಸಿ ಶಾಲೆಗಳು ನೀಡಿದ ಸೂಚನೆ ಮೇರೆಗೆ ಮಾಸ್ಕ್ ಧರಿಸುತ್ತಿದ್ದಾರೆ. ತರಗತಿಯಗಳಲ್ಲಿ ಶಾಲೆಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಲಾಗಿದೆ. ಆದರೆ ಈ ನಿಯಮ ಶಾಲಾ ಆವರಣದಲ್ಲಿ ನಡೆಯುವ ತರಗತಿಗಳು, ವಿದ್ಯಾರ್ಥಿಗಳ ಹಾಜರಾತಿ ಅಥವಾ ಪಠ್ಯೇತರ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿಲ್ಲ ಎನ್ನಲಾಗಿದೆ.

ಹೊಸ ಕೋವಿಡ್ ರೂಪಾಂತರಗಳ ಬಗ್ಗೆ ಕಾಳಜಿ ಇರುವುದರಿಂದ, ನಾವು ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯಾರ್ಥಿಗಳಿಗೆ ಮಾಸ್ಕ್‍ಗಳನ್ನು ಸೂಚಿಸಿದ್ದೇವೆ. ಹೆಚ್ಚುವರಿಯಾಗಿ, ಈ ಋತುವಿನಲ್ಲಿ ಸಾಮಾನ್ಯವಾಗಿ ಶೀತ ಮತ್ತು ಜ್ವರದ ಪ್ರಮಾಣವು ಹೆಚ್ಚಾಗುತ್ತದೆ. ಹೀಗಾಗಿ ಮಕ್ಕಳ ಆರೋಗ್ಯ ದೃಷ್ಟಿಯಿಂದ ಮಾಸ್ಕ್ ಕಡ್ಡಾಯಗೊಳಿಸಿದ್ದೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸರ್ಕಾರಿ ವಿದ್ಯುತ್ ಕಂಪೆನಿಗಳ ಖಾಸಗೀಕರಣ ವಿರೋಧಿಸಿ ಸಿಬ್ಬಂದಿಗಳ ಮುಷ್ಕರ

ಸಾಂಕ್ರಾಮಿಕ ರೋಗ ಭೀತಿ ಇದ್ದಾಗ ಅದರ ಬಗ್ಗೆ ಅರಿತುಕೊಂಡು ಪ್ರತಿಯೊಬ್ಬರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ವಿದ್ಯಾರ್ಥಿಗಳು, ಶಿಕ್ಷಕರು ಮುಖಗವಸು ಧರಿಸಬೇಕು. ಆರೋಗ್ಯ ಕಾಳಜಿವಹಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಹಲವು ಶಾಲೆಗಳು ಅಭಿಪ್ರಾಯಪಟ್ಟಿವೆ.

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಹೈರಿಸ್ಕ್ ದೇಶಗಳ ಪ್ರಯಾಣಿಕರಿಗೆ ಕ್ವಾರಂಟೈನ್ ಕಡ್ಡಾಯ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಹೈರಿಸ್ಕ್ ದೇಶಗಳ ಪ್ರಯಾಣಿಕರಿಗೆ ಕ್ವಾರಂಟೈನ್ ಕಡ್ಡಾಯ
ರಾಜ್ಯ ಸರ್ಕಾರದ ಸಲಹೆಯನ್ನು ನೀಡಿದ ತಕ್ಷಣ, ನಾವು ಮಕ್ಕಳನ್ನು ಮಾಸ್ಕ್ ಧರಿಸಿ ಕಳುಹಿಸುವಂತೆ ಪೋಷಕರಿಗೆ ಪತ್ರ ಬರೆದಿದ್ದೇವೆ. ಈ ಪ್ರಕ್ರಿಯೆಗೂ ಮುನ್ನವೇ 8-12 ನೇ ತರಗತಿಯ ಮಕ್ಕಳು ಮಾಸ್ಕ್ ಧರಿಸುತ್ತಿದ್ದರು. ಈಗ ಹೆಚ್ಚಿನ ಮಕ್ಕಳು ಮಾಸ್ಕ್ ಬಳಸುತ್ತಿದ್ದಾರೆ.

ಅಲ್ಲದೇ ಕಳೆದ ಬಾರಿಗಿಂತ ಈ ವರ್ಷ ನಿಯಮಗಳು ಭಿನ್ನವಾಗಿವೆ. ಕಾರಣ ಶಾಲೆಗಳಲ್ಲಿ ಯಾವುದೇ ಪಠ್ಯೇತರ ಕಾರ್ಯಕ್ರಮಗಳನ್ನು ರದ್ದುಗೊಳಿಸಿಲ್ಲ. ಕೇವಲ ಒಳಾಂಗಣ ಪ್ರದೇಶಗಳಲ್ಲಿ ಮಾತ್ರವೇ ಮಾಸ್ಕ್ ಶಿಫಾರಸು ಮಾಡಲಾಗಿದೆ. ಮಕ್ಕಳು ಹೊರ ಬರುತ್ತಿದ್ದಂತೆ ತೆಗೆದು ಆಟವಾಡಬಹುದು ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳು ಮಾತ್ರವಲ್ಲದೇ ಶಾಲಾ ಸಿಬ್ಬಂದಿಯು ಮಾಸ್ಕ್ ಧರಿಸುತ್ತಿದ್ದಾರೆ. ಇದರೊಂದಿಗೆ ಸ್ವಚ್ಚತೆ, ಉತ್ತಮ ಆಹಾರ ಸೇವನೆ, ಬಿಸಿ ನೀರು ಕುಡಿಯುವುದ ಸೇರಿದಂತೆ ಇತರ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಸೂಚಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

9 ತಿಂಗಳ ಹಿಂದೆ ಯುವಕನ ಕೊಲೆ, ಚಾರ್ಮುಡಿ ಘಾಟ್‍ನಲ್ಲಿ ಶವಕ್ಕಾಗಿ ಹುಡುಕಾಟ

ಕೊರೊನಾ ಮೊದಲಿದ್ದ ಅಲೆಗಳಂತೆ ಈ ಬಾರಿ ಅಂತಹ ಭಯದ ಆತಂಕವಿಲ್ಲ. ಆದರೆ ನಿಯಮ ಪಾಲನೆ ಅತ್ಯಗತ್ಯವಾಗಿದೆ. ಶಾಲೆಗಳು ತೆಗೆದುಕೊಳ್ಳುತ್ತಿರುವ ಮುನ್ನೆಚ್ಚರಿಕೆಗಳ ಬಗ್ಗೆ ಪೋಷಕರಿಗೆ ತಿಳಿಸಿದ್ದೇವೆ. ಎಲ್ಲ ಸುರಕ್ಷತಾ ಕ್ರಮ ವಹಿಸಿದ್ದೇವೆ.

ಮಕ್ಕಳಲ್ಲಿ ಏನಾದರೂ ಕಾಯಿಲೆ ಲಕ್ಷಣಗಳು, ಅವರಲ್ಲಿ ಅಸ್ವಸ್ಥತೆ ಕಂಡು ಬಂದರೆ ಅವರನ್ನು ಪ್ರತ್ಯೇಕ ಗೊಳಿಸಲಾಗುವುದು. ನಂತರ ಪೋಷಕರಿಗೆ ತಿಳಿಸಲಾಗುವುದು. ಈ ಮೊದಲೇ ತಿಳಿಸಿದಂತೆ ಅನಾರೋಗ್ಯದಿಂದ ಬಳಲುತ್ತಿರುವ ಮಕ್ಕಳು ತರಗತಿಗಳಿಗೆ ಹಾಜರಾಗದಂತೆ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Bengaluru, Health Department, schools, Children, mask,

Articles You Might Like

Share This Article