ಪದೇ ಪದೇ ಹೈಟೆನ್ಷನ್ ಅವಘಡ : ನಿವಾಸಿಗಳಿಗೆ ಬೆಸ್ಕಾಂ ನೋಟೀಸ್

Social Share

ಬೆಂಗಳೂರು,ಡಿ.2- ಹೈಟೆನ್ಷನ್ ವೈರ್‍ನಿಂದ ಪದೇ ಪದೇ ಅವಘಡಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಬೆಸ್ಕಾಂ ನಗರದ ಹಲವು ನಿವಾಸಿಗಳಿಗೆ ನೋಟೀಸ್ ನೀಡಿದೆ. ಹೈಟೆನ್ಷನ್ ವೈರ್‍ಗಳ ಕೆಳಗೆ ಮನೆ ನಿರ್ಮಿಸಿರುವವರಿಗೆ ನೋಟಿಸ್ ನೋಡಿ ಮನೆ ಖಾಲಿ ಮಾಡುವಂತೆ ಸೂಚನೆ ನೀಡಿದೆ.

ನಿನ್ನೆ ನಂದಿನಿ ಲೇಔಟ್‍ನಲ್ಲಿ ಬಾಲಕರಿಬ್ಬರು ಪಾರಿವಾಳ ಹಿಡಿಯಲು ಹೈಟೆನ್ಷನ್ ವೈರ್ ತಗುಲಿ ಗಾಯಗೊಂಡು ಚಿಂತಾಜನಕ ಪರಿಸ್ಥಿತಿಯಲ್ಲಿದ್ದಾರೆ. ಇಂತಹ ಘಟನೆಗಳು ಹಲವೆಡೆ ನಡೆದಿವೆ. ಬೆಸ್ಕಾಂ, ಬಿಬಿಎಂಪಿ ಕಳೆದ ನಾಲ್ಕೈದು ವರ್ಷಗಳ ಹಿಂದೆಯೇ ನೋಟಿಸ್ ನೀಡಿತ್ತು. ಆದರೆ ನಿವಾಸಿಗಳು ನಾವು ಮನೆ ಖಾಲಿ ಮಾಡುವುದಿಲ್ಲ. ಬೇಕಾದರೆ ವಿಷ ಕೊಡಿ ಎಂದು ಅಳಲು ತೋಡಿಕೊಂಡಿದ್ದರು.

ಕನ್ನಡ ಬಾವುಟ ಹಾರಿಸಿದ ಯುವಕನಿಗೆ ಪೊಲೀಸ್ ಥಳಿತ : ತನಿಖೆಗೆ ಸಿಎಂ ಸೂಚನೆ

ಹೈಟೆನ್ಷನ್ ವೈರ್‍ಗಳ ಎತ್ತರವನ್ನು ಇನ್ನಷ್ಟು ಹೆಚ್ಚಿಸುವಂತೆಯೂ ನಿವಾಸಿಗಳು ಮನೆ ಮಾಡಿದ್ದರು. ಸಾಲ ಮಾಡಿ ಮನೆ ಕಟ್ಟಿದ್ದೇವೆ. ಈಗ ಖಾಲಿ ಮಾಡಲು ಆಗುವುದಿಲ್ಲ. ಬೇರೆ ಜಾಗ ಕೊಡಿ ಎಂದು ಪಟ್ಟು ಹಿಡಿದಿದ್ದರು.

ಬಿಬಿಎಂಪಿ ನಿರ್ಲಕ್ಷ್ಯದಿಂದ ಅಮಾಯಕ ಜೀವಗಳಿಗೆ ಸಂಚಕಾರ ಬಂದಿದೆ. ರಾಜಧಾನಿಯಲ್ಲಿ 8ರಿಂದ 10 ಸಾವಿರ ಮನೆಗಳು ತಂತಿ ಹಾದುಹೋಗುವ ಮಾರ್ಗದಲ್ಲಿ ನಿರ್ಮಾಣ ಮಾಡಲಾಗಿದೆ. ಮನೆಗಳನ್ನು ತೆರವು ಮಾಡಿ ಎಂದು ಬಿಬಿಎಂಪಿಗೆ ಬೆಸ್ಕಾಂ ಪತ್ರ ಬರೆದಿದೆ.

ನಿಯಮ ಉಲ್ಲಂಘಿಸಿ ನಿರ್ಮಿಸಿದ ಕಟ್ಟಡಗಳನ್ನು ತೊರೆಯಲು ಜನರು ಹಿಂದೇಟು ಹಾಕುತ್ತಿದ್ದಾರೆ. ಜನಪ್ರತಿನಿಧಿಗಳ ಬೆಂಬಲದಿಂದ ವಿದ್ಯುತ್ ಮಾರ್ಗಗಳ ಬಳಿಯೇ ಜನರು ನಿಯಮ ಬಾಹಿರವಾಗಿ ಕಟ್ಟಡ ನಿರ್ಮಾಣ ಮಾಡಿಕೊಂಡಿದ್ದಾರೆ. ಆದರೆ ಸಂಭವಿಸುವ ಅವಘಡಗಳಿಗೆ ಹೊಣೆಯಾರು?

ಜಗತ್ತಿನ ಸೂಪರ್ ಪವರ್ ಪರಮಾಣು ರಾಷ್ಟ್ರವಾಗುತ್ತಾ ಉತ್ತರ ಕೊರಿಯಾ..?

ರಾಜರಾಜೇಶ್ವರಿನಗರದಲ್ಲಿ ಹೈಟೆನ್ಷನ್ ವೈರ್ ಹಾವಳಿ ಹೆಚ್ಚಾಗಿದೆ. ನಿಯಮ ಮೀರಿ ನೂರಾರು ಮನೆಗಳನ್ನು ನಿರ್ಮಿಸಲಾಗಿದೆ. ಇಷ್ಟಾದರೂ ಬಿಬಿಎಂಪಿ ಬೆಸ್ಕಾಂ ಎಚ್ಚೆತ್ತುಕೊಂಡಿಲ್ಲ. 240 ಕಿ.ವ್ಯಾ ಹೈಟೆನ್ಷನ್ ವೈರ್ ಅಪಾಯ ಎಂದು ಗೊತ್ತಿದ್ದರೂ ಎಚ್ಚರಿಸುವ ಕೆಲಸವನ್ನು ಅಕಾರಿಗಳು ಮಾಡುತ್ತಿಲ್ಲ. ಹೈಟೆನ್ಷನ್ ವೈರ್ ಕೆಳಗೆ ಮನೆಗಳನ್ನು ನಿರ್ಮಾಣ ಮಾಡಲಾಗಿದೆ.

Bengaluru, High, tension, wires, Bescom, notice,

Articles You Might Like

Share This Article