ಬೆಂಗಳೂರು,ಡಿ.3- ಕಳೆದ ತಿಂಗಳು ನಡೆದ ಕಾರ್ಯಾ ಚರಣೆಯಲ್ಲಿ ವಿದೇಶದಿಂದ ವಿವಿಧ ಸ್ವರೂಪದಲ್ಲಿ ಕಳ್ಳ ಸಾಗಾಣಿಕೆ ಮೂಲಕ ತರಲಾಗಿದ್ದ ಏಳು ಕೆಜಿಗೂ ಅಧಿಕ ತೂಕದ ಚಿನ್ನವನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶ ಪಡಿಸಿ ಕೊಳ್ಳಲಾಗಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿನ್ನೆ ಐರನ್ ಬಾಕ್ಸ್‍ನಲ್ಲಿ ಅಡಗಿಸಿಟ್ಟು ತರುತ್ತಿದ್ದ ಒಂದುವರೆ ಕೋಟಿ ರೂಪಾಯಿಗೆ ಹೆಚ್ಚಿನ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ದುಬೈನಿಂದ ನವೆಂಬರ್ 29ರಂದು ಮುಂಜಾನೆ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಇಕೆ 568 ಸಂಖ್ಯೆಯ ವಿಮಾನದಲ್ಲಿ ಪ್ರಯಾಣಿಕರನ್ನು ತಪಾಸಣೆ ನಡೆಸಿದಾಗ 3015.13 ಗ್ರಾಮ್ ಚಿನ್ನ ಕಳ್ಳಸಾಗಾಣಿಕೆ ಪತ್ತೆಯಾಗಿದೆ. ಐರನ್ ಬಾಕ್ಸ್‍ನ ತಳಹಂಚಿಗೆ ಚಿನ್ನವನ್ನು ಅಂಟಿಸಲಾಗಿತ್ತು.
500ಕೆಜಿ ನಿಷೇಧಿತ ಪ್ಲಾಸ್ಟಿಕ್ ಸೀಜ್, 34 ಸಾವಿರ ರೂ.ದಂಡ
ಮೆಟಲ್ ಕಟ್ಟರ್ ಮೂಲಕ ಚಿನ್ನವನ್ನು ಬೇರ್ಪಡಿಸಿದಾಗ ಅದರ ತೂಕ 3 ಕೆ.ಜಿ. ಗೂ ಮಿಗಿಲಾಗಿರುವುದು ಪತ್ತೆಯಾಗಿದೆ. ಇದರ ಮೌಲ್ಯ ಸುಮಾರು 1.60 ಕೋಟಿ ರೂಪಾಯಿಗಳೆಂದು ಹೇಳಲಾಗಿದೆ. ಚಿನ್ನ ಕಳ್ಳಸಾಗಣಿಕೆ ಮಾಡಲು ಯತ್ನಿಸಿದ ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ, ತನಿಖೆ ಮುಂದುವರೆದಿದೆ.
ಸುಂದರ್ ಪಿಚೈಗೆ ಅಮೆರಿಕಾದಲ್ಲಿ ಪದ್ಮಭೂಷಣ ಪ್ರದಾನ
ಈ ನಡುವೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಯ ಬಗ್ಗೆ ಕಸ್ಟಮ್ಸ್ ಅಧಿಕಾರಿಗಳು ಪತ್ರಿಕಾ ಹೇಳಿಕೆ ನೀಡಿದ್ದಾರೆ. ನವೆಂಬರ್ 1ರಿಂದ 30ರವಗೆ ನಡೆದ ತಪಾಸಣೆಯಲ್ಲಿ 7 ಕೆಜಿ 692 ಗ್ರಾಮ್ 24 ಕ್ಯಾರೆಟ್ ಚಿನ್ನವನ್ನು ವಶ ಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ 4,01,18,280 ರೂಪಾಯಿಗಳೆಂದು ತಿಳಿಸಲಾಗಿದೆ.
ದುಬೈನಿಂದ 10 ಪುರುಷ ಪ್ರಯಾಣಿಕರು ವಿವಿಧ ಸ್ವರೂಪದಲ್ಲಿ ಚಿನ್ನವನ್ನು ಕಳ್ಳ ಸಾಗಾಣಿಕೆ ಮಾಡಲು ಯತ್ನಿಸಿ, ಸಿಕ್ಕಿಬಿದ್ದಿದ್ದಾರೆ. ಎಲ್‍ಇಡಿ ಬಲ್ಪ್‍ಗಳಲ್ಲಿ, ರಿಸ್ಟ್ ವಾಚ್‍ನಲ್ಲಿ, ಕೀ ಪ್ಯಾಡ್ ಮೊಬೈಲ್ ಫೋನ್‍ಗಳಲ್ಲಿ, ಟ್ರ್ಯಾಲಿ ಬ್ಯಾಗ್‍ಗಳಲ್ಲಿ, ಕ್ಯಾಪಿಚಿನೋ ತಯಾರಿಸುವ ಮೋಟಾರ್‍ನ ಬೆಳ್ಳಿ ಲೇಪಿತ ಪ್ಲೇಟ್‍ಗಳಲ್ಲಿ, ಎರಡು ಪದರಗಳ ಬನಿಯನ್, ಒಳುಉಡುಪು ಹಾಗೂ ಸಾಕ್ಸ್‍ಗಳಲ್ಲಿ ಮರೆ ಮಾಡುವ ಮೂಲಕ, ಕಾರ್ಟ್‍ನ್ ಬಾಕ್ಸ್‍ಗಳಲ್ಲಿ ಅಡಗಿಸಿಟ್ಟ ಪುಡಿ ಮತ್ತು ಪೆಸ್ಟ್ ರೂಪದಲ್ಲಿ ಕಳ್ಳಸಾಗಾಣಿಕೆ ನಡೆಸಲು ಯತ್ನಿಸಲಾಗಿದೆ ಎಂದು ಕೇಂದ್ರ ಅಬಕಾರಿ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.
Bengaluru, iron box, parts, gold, smuggler,