ಬೆಂಗಳೂರಲ್ಲಿ 3 ತಿಂಗಳ ಹಿಂದಷ್ಟೇ ಉದ್ಘಾಟನೆಗೊಂಡಿದ್ದ ಅಂಡರ್‌ಪಾಸ್ ಕುಸಿತ

Social Share

ಬೆಂಗಳೂರು,ಅ.10-ಕಳೆದ ಮೂರು ತಿಂಗಳ ಹಿಂದಷ್ಟೇ ಲೋಕಾರ್ಪಣೆಯಾಗಿದ್ದ ಕುಂದಲಹಳ್ಳಿ ಅಂಡರ್‌ಪಾಸ್ ಮೇಲ್ಭಾಗದ ರಸ್ತೆ ಕುಸಿದಿದ್ದು, ಸಂಚಾರಕ್ಕೆ ಭಾರೀ ತೊಂದರೆ ಉಂಟಾಗಿದೆ. ಹೂಡಿ ಮುಖ್ಯರಸ್ತೆ ಹಾಗೂ ಐಟಿಪಿಐಎಲ್ ಮುಖ್ಯರಸ್ತೆಗೆ ಹೂಡಿ ಮುಖ್ಯರಸ್ತೆ ಹಾಗೂ ಐಟಿಪಿಐಎಲ್ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಕುಂದನಹಳ್ಳಿ ಅಂಡರ್‌ಪಾಸ್ ಮೇಲ್ಭಾಗದಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಪೈಪ್‍ಲೈನ್‍ನಲ್ಲಿ ನೀರು ಸೋರಿಕೆಯಿಂದ ಕುಸಿದಿದೆ ಎನ್ನಲಾಗಿದೆ.

ಸುಮಾರು 25 ಕೋಟಿ ರೂ. ವೆಚ್ಚದಲ್ಲಿ 2019ರಲ್ಲಿ ಈ ಕಾಮಗಾರಿ ಪ್ರಾರಂಭವಾಗಿ ಕಳೆದ ಮೂರು ತಿಂಗಳ ಹಿಂದಷ್ಟೇ ಲೋಕಾರ್ಪಣೆಗೊಂಡಿದ್ದ ರಸ್ತೆ ಈ ಕುಸಿದಿದ್ದು ವಾಹನ ಸವಾರರಲ್ಲಿ ಆತಂಕ ಸೃಷ್ಟಿಸಿದೆ. 40% ಕಮೀಷನ್‍ನಿಂದಲೇ ಈ ಕಾಮಗಾರಿ ನಡೆದಿದ್ದು, ಈಗ ಕುಸಿದಿದೆ ಎಂದು ಕಾಂಗ್ರೆಸ್ ನಾಯಕರು ಟ್ವಿಟರ್‍ನಲ್ಲಿ ಗರಂ ಆಗಿದ್ದಾರೆ.

ಬೆಂಗಳೂರು ನೀರು ಸಬರಾಜು ಮತ್ತು ಒಳಚರಂಡಿ ಮಂಡಳಿಯು ಪೈಪ್‍ಲೈನ್ ದುರಸ್ತಿ ಕಾರ್ಯ ಮಾಡಿದೆ. ಆದರೆ ಅಧಿಕಾರಿಗಳು ಕುಸಿದ ರಸ್ತೆಗೆ ಜಲ್ಲಿ ಹಾಕಿದ್ದಾರೆ. ಇನ್ನು ಪೈಪ್‍ಲೈನ್ ಸೋರಿಕೆ ಹಿನ್ನೆಲೆಯಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ.

ರಸ್ತೆ ದುರಸ್ತಿಗಾಗಿ ಇನ್ನು ಕೆಲವು ದಿನಗಳು ಬೇಕಾಗಿದ್ದು, ಅಂಡರ್‍ಪಾಸ್ ವಾರ್ಷಿಕ ನಿರ್ವಹಣೆ ಮತ್ತು ನೂನ್ಯತೆ ಹೊಣೆಗಾರಿಕೆಯ ಷರತ್ತಿನಡಿ ಒಳಗೊಂಡಿರುವುದರಿಂದ ಗುತ್ತಿಗೆದಾರರು ಕುಸಿದ ರಸ್ತೆಯನ್ನು ಸರಿಪಡಿಸಲು ಯಾವುದೇ ಶುಲ್ಕ ವಿಸುವಂತಿಲ್ಲ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಕಾಂಗ್ರೆಸ್ ನಾಯಕ ನಾಗರಾಜ್ ಯಾದವ್ ಮಾತನಾಡಿ, ಶೇ.40 ಭ್ರಷ್ಟಾಚಾರದ ಮತ್ತೊಂದು ನಿದರ್ಶನವಾಗಿದ್ದು, ಇಂತಹ ಆರೋಪಗಳನ್ನು ಆಧಾರ ರಹಿತ ರಾಜಕೀಯ ಸೇಡು ಎಂದು ಸರ್ಕಾರ ತಳ್ಳಿ ಹಾಕಿದೆ ಎಂದರು.

Articles You Might Like

Share This Article