ಬೆಂಗಳೂರು,ಡಿ.2- ಸಿಲಿಕಾನ್ ಸಿಟಿ ಜನರಿಗೆ ಚಿರತೆ ಕಾಟ ಶುರುವಾಗಿದೆ ಕೆಂಗೇರಿ, ಕುಂಬಳಗೋಡು ಸುತ್ತಮುತ್ತ ಚಿರತೆ ಕಾಣಿಸಿಕೊಂಡಿದ್ದು ಭಯ ಹುಟ್ಟಿಸಿದೆ. ಬಿಡಿಎ ಕೆಂಗೇರಿ ಸುತ್ತಮುತ ಬಿಡಿಎ ಕಾಂಪ್ಲೆಕ್ಸ್ ಕಡೆ ಚಿರತೆ ಬಂದಿದೆ ಎಂದು ಹೇಳಲಾಗುತ್ತಿದ್ದು ಜನರಲ್ಲಿ ಜಾಗೃತಿ ಮೂಡಿಸಲಾಗಿದೆ.
ಕನಕಪುರ ರಸ್ತೆ ಕೋಡಿಪಾಳದಲ್ಲಿ ಚಿರತೆ ಒಡಾಟ ಸಿಸಿ ಕ್ಯಾಮರಾದಲ್ಲಿ ಪತ್ತೆಯಾಗಿದ್ದು ಸುಮಾರು 4 ಚಿರತೆಗಳು
ನಗರ ಪ್ರದೇಶಕ್ಕೆ ಬಂದಿವೆ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಿದ್ದಾರೆ.
ಕೆಂಗೇರಿ ಹೊರವಲಯದಲ್ಲಿ ಹಲವಾರು ಶಾಲೆಗಳಿದ್ದು, ಪೊಷಕರು ಮಕ್ಕಳನ್ನು ಹೊರಗೆ ಕಳುಹಿಸಲು ಭಯಪಡಿತ್ತಿದ್ದಾರೆ.ತುರಹಳ್ಳಿಯಲ್ಲಿ ಕಳೆದ ರಾತ್ರಿ ಜಿಂಕೆಯನ್ನು ಭೇಟೆಯಾಡಿದ್ದ ಚಿರತೆ ಹಾಸುಪಾಸಿನಲ್ಲೇ ಇದೇ ಎಂಬ ಬೀತಿ ಹಿನ್ನಲೆಯಲ್ಲಿ ಇಲ್ಲಿನ ಕಲ್ಯಾಣ ಮಂಟಪದಲ್ಲಿ ಇಂದು ನಡೆದ ಮದುವೆಗೆ ಜನರು ಬಂದಿಲ್ಲ.
ಜೆಡಿಎಸ್ ಅಧಿಕಾರಕ್ಕೆ ಬಂದರೆ ದಲಿತರನ್ನು ಸಿಎಂ ಮಾಡ್ತೀವಿ : ಹೆಚ್ಡಿಕೆ
ಈಗಾಗಲೆ ಅರಣ್ಯ ಇಲಾಖೆ ಕಾರ್ಯಾಚರಣೆ ಕೈಗೊಂಡಿದೆ.ಹಲವೆಡೆ ಜನಜಾಗೃತಿ ಮೂಡಿಸಲಾಗುತ್ತಿದೆ. ಬೋನಿನಲ್ಲಿ ನಾಯಿಮರಿ ಕಟ್ಟಿಹಾಕಿ ಚಿರತೆ ಸೆರೆಗೆ ಪ್ರಯತ್ನಿಸಲಾಗುತ್ತಿದೆ.
600 ಕೋಟಿ ವೆಚ್ಚದ ‘ಅನುಭವ ಮಂಟಪ’ ಯೋಜನೆಗೆ ಚಾಲನೆ
ಇನ್ನು ದೇವನಹಳ್ಳಿ ಬಳಿ ಖಾಸಗಿ ಕಾರ್ಖಾನೆ ಸುತ್ತಮುತ್ತಲ ಪ್ರದೇಶದಲ್ಲಿ ಚಿರತೆ ಓಡಾಟ ನಡೆಸಿದೆ. ದಟ್ಟವಾದ ಕಾಡು ಇರುವುದರಿಂದ ಚಿರತೆ ಬಂದಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಐವರು ಅರಣ್ಯ ಸಿಬ್ಬಂದಿಯಿಂದ ಚಿರತೆಗಾಗಿ ಶೋಧ ಕಾರ್ಯ ನಡೆಯುತ್ತಿದ್ದು, ಚಿರತೆ ಹಿಡಿಯಲು ಅರಣ್ಯ ಅಧಿಕಾರಿಗಳು ಬೋನ್ ಇಟ್ಟಿದ್ದಾರೆ.
Bengaluru, leopards, Kengeri, BDA, complex,