ಬೆಂಗಳೂರಲ್ಲಿ ಕಂಡಕಂಡಲ್ಲಿ ಮೂತ್ರ ಮಾಡುವವರಿಗೆ ಕಾದಿದೆ ಶಾಕ್..!

ಬೆಂಗಳೂರು, ಆ.25- ಎಚ್ಚರ ಇನ್ನು ಮುಂದೆ ಶೌಚಾಲಯದಲ್ಲಿ ಮೂತ್ರ ಮಾಡಿ, ತುರ್ತು ಎಂದು ಎಲ್ಲೆಂದರಲ್ಲಿ ನಿಂತು ಮೂತ್ರ ಮಾಡಿದರೆ ದಂಡ ಬೀಳಲಿದೆ.

ಈವರೆಗೂ ಬೇಕಾಬಿಟ್ಟಿ ಕಸ ಎಸೆಯುವವರನ್ನು ಹಿಡಿದು ದಂಡ ಹಾಕಲಾಗುತ್ತಿತ್ತು. ಕೊರೊನಾ ಸಾಂಕ್ರಾಮಿಕ ಸೋಂಕಿನ ಸಂದರ್ಭದಲ್ಲಿ ಮಾಸ್ಕ್ ಧರಿಸದವರ, ಎಲ್ಲೆಂದರಲ್ಲಿ ಉಗುಳುವವರ ವಿರುದ್ಧ ಬಿಬಿಎಂಪಿ ಮಾರ್ಷಲ್‍ಗಳು ದಂಡ ವಿಸುತ್ತಿದ್ದರು.

ಇದೇ ಮೊದಲ ಬಾರಿಗೆ ಬೀದಿ ಬದಿಯಲ್ಲಿ ನಿಂತು ಮೂತ್ರ ಮಾಡುವವರಿಗೂ ದಂಡ ಹಾಕಿದ್ದಾರೆ. ವಾರ್ಡ್ ನಂಬರ್ 176ರ ಶಾಖಾಂಬರಿ ನಗರದಲ್ಲಿ ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಪುಟ್ಪಾತ್ ಮೇಲೆ ನಿಂತು ಮೂತ್ರ ಮಾಡುತ್ತಿದ್ದ ಅಯ್ಯಪ್ಪ ಎಂಬುವರಿಗೆ 500 ರೂಪಾಯಿ ದಂಡ ವಿಸಲಾಗಿದೆ.

ಸಾರ್ವಜನಿಕ ಸ್ಥಳವನ್ನು ಕೊಳಕು ಮಾಡುತ್ತಿದ್ದಕ್ಕಾಗಿ ದಂಡ ವಿಸುತ್ತಿರುವುದಾಗಿ ನಮೂದಿಸಲಾಗಿದೆ. ಇತ್ತೀಚೆಗೆ ಸ್ವಚ್ಛತಾ ರೇಟಿಂಗ್‍ನಲ್ಲಿ ಬೆಂಗಳೂರು 11ನೆ ಸ್ಥಾನಕ್ಕೆ ಕುಸಿದ ಹಿನ್ನೆಲೆಯಲ್ಲಿ ಮತ್ತಷ್ಟು ರೊಚ್ಚಿಗೆದ್ದಂತೆ ಕಾಣುತ್ತಿರುವ ಬಿಬಿಎಂಪಿ ಅಕಾರಿಗಳು ಬಿಗಿ ಕ್ರಮಗಳನ್ನು ಕೈಗೊಂಡಿದ್ದಾರೆ.

ನಗರದ ಎಲ್ಲಾ ಜನ ಮಲಗಿರುವಾಗ ಬಿಬಿಎಂಪಿ ಅಕಾರಿಗಳು ಮತ್ತು ಮಾರ್ಷೆಲ್‍ಗಳು ಅನೈರ್ಮಲ್ಯ ಮಾಡುವವನ್ನು ಪತ್ತೆ ಹಚ್ಚಲು ಕೆಲಸ ಮಾಡುತ್ತಿರುತ್ತಾರೆ.

ಹಗಲು ರಾತ್ರಿ ಕೆಲಸ ಮಾಡುವ ಮಾರ್ಷೆಲ್‍ಗಳು ಮತ್ತು ಬಿಬಿಎಂಪಿ ಅಕಾರಿಗಳನ್ನು ಎಲ್ಲರೂ ಗೌರವಿಸಬೇಕಿದೆ ಎಂದು ಪಾಲಿಕೆಯ ತ್ಯಾಜ್ಯ ನಿರ್ವಹಣೆಯ ವಿಶೇಷ ಆಯುಕ್ತರು ಟ್ವಿಟ್ ಮಾಡಿದ್ದಾರೆ.

Sri Raghav

Admin