ಬೆಂಗಳೂರು, ಜ.11- ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವಹಿಸಿದ್ದ ಮೂವರು ಎಂಜಿನಿಯರ್ಗಳನ್ನು ಬಿಎಂಆರ್ಸಿಎಲ್ ಅಮಾನತು ಮಾಡಿ ಆದೇಶ ಹೊರಡಿಸಿದೆ.
ಎಚ್ಬಿಆರ್ ಲೇಔಟ್ನಲ್ಲಿ ಮೆಟ್ರೋ ಕಾಮಗಾರಿ ಸಂದರ್ಭದಲ್ಲಿ ಕಬ್ಬಿಣದ ಪಿಲ್ಲರ್ ಬಿದ್ದು ತಾಯಿ-ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮಗಾರಿ ನಿರ್ಲಕ್ಷ್ಯ ವಹಿಸಿದ್ದ ಮೆಟ್ರೋ ಡೆಪ್ಯೂಟಿ ಚೀಫ್ ಎಂಜಿನಿಯರ್, ಎಕ್ಸಿಕ್ಯೂಟಿವ್ ಎಂಜಿನಿಯರ್, ಸೆಕ್ಷನ್ ಎಂಜಿನಿಯರ್ಗಳನ್ನು ಅಮಾನತು ಮಾಡಲಾಗಿದೆ ಎಂದು ಬಿಎಂಆರ್ಸಿಎಲ್ನ ಅಂಜುಂ ಫರ್ವೇಜ್ ತಿಳಿಸಿದ್ದಾರೆ.
ಎನ್ಸಿಸಿ ಕಂಪೆನಿಗೆ ಕಾದಿದ್ಯಾ ಕಂಟಕ: ದುರಂತದ ಹಿನ್ನೆಲೆಯಲ್ಲಿ ಎನ್ಸಿಸಿ ಕಂಪೆನಿಗೆ ನೋಟಿಸ್ ಮೇಲೆ ನೋಟಿಸ್ಗಳನ್ನು ಮೆಟ್ರೋ ನಿಗಮ ನೀಡುತ್ತಿದ್ದು, ಪಿಲ್ಲರ್ ಕುಸಿತದ ವರದಿ ನೀಡುವಂತೆ ಸೂಚನೆ ನೀಡಿದೆ.
ನಿನ್ನೆ ನಡೆದ ದುರಂತದ ಬಳಿಕ ಮೆಟ್ರೋ ಜೀಫ್ ಎಂಜಿನಿಯರ್ಗಳಿಂದ ಎನ್ಸಿಸಿ ಕಂಪೆನಿಗೆ ನೋಟಿಸ್ ನೀಡಲಾಗಿದ್ದು, ಇಂದು ಕೂಡ ಮೆಟ್ರೋ ನಿರ್ದೇಶಕರಿಂದ ಸಂಸ್ಥೆಯ ಆಡಳಿತ ವಿಭಾಗಕ್ಕೆ ಮತ್ತೊಂದು ನೋಟಿಸ್ ನೀಡಲಾಗಿದೆ.
ಮೂರು ದಿನಗಳೊಳಗೆ ಸಂಪೂರ್ಣ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಎನ್ಸಿಸಿ ಕಂಪೆನಿ ಮೇಲೆ ಈಗಾಗಲೇ ಕ್ರಿಮಿನಲ್ ಕೇಸ್ ದಾಖಲಾಗಿದ್ದು, ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಅಂಜುಂ ಫರ್ವೇಜ್ ತಿಳಿಸಿದ್ದಾರೆ.
ಕಾಂಗ್ರೆಸ್-ಜೆಡಿಎಸ್ಗೆ ಸೆಡ್ಡು ಹೊಡೆಯಲು ಬಿಜೆಪಿ ರಣತಂತ್ರ
ಕೇಂದ್ರದ ಅಂಗಳ ತಲುಪಿದ ಘಟನೆ: ಮೆಟ್ರೋ ಕಾಮಗಾರಿ ದುರಂತ ಕೇಂದ್ರದ ಅಂಗಳ ತಲುಪಿದ್ದು, ಕೇಂದ್ರ ನಗರಾಭಿವೃದ್ಧಿ ಇಲಾಖೆ ಮೆಟ್ರೋ ನಿಗಮದ ಎಂಡಿ ಅವರಿಗೆ ದೂರವಾಣಿ ಕರೆ ಮಾಡಿ ವರದಿ ಕೇಳಿದೆ. ಎರಡು ದಿನಗಳಲ್ಲಿ ವರದಿ ನೀಡುವುದಾಗಿ ಅಂಜುಂ ಫರ್ವೇಜ್ ಮಾಹಿತಿ ನೀಡಿದ್ದಾರೆ.ಘಟನೆ ಸಂಬಂಧ ಮಾಹಿತಿ ನೀಡಲು ಮೆಟ್ರೋ ಎಂಡಿ ವರದಿಯನ್ನು ಸಿದ್ಧಪಡಿಸುತ್ತಿದ್ದಾರೆ ಎನ್ನಲಾಗಿದೆ.
ಕೆಟ್ಟ ಮೇಲೆ ಬುದ್ಧಿ ಬಂತು: ಕೆಟ್ಟ ಮೇಲೆ ಬುದ್ಧಿ ಬಂತು ಎಂಬಂತೆ ಎರಡು ಅಮಾಯಕ ಜೀವಗಳು ಹೋದ ಮೇಲೆ ಬಿಎಂಆರ್ಸಿಎಲ್ ಎಚ್ಚೆತ್ತುಕೊಂಡು ರಾತ್ರೋರಾತ್ರಿ ಮೆಟ್ರೋ ಪಿಲ್ಲರ್ಗೆ ಸ್ಕೆಫ್ ಫೋಲ್ಡಿಂಗ್ (ಸುರಕ್ಷಾ ಸಾಧನ) ಅಳವಡಿಸಿದೆ.
ಎಚ್ಬಿಆರ್ ಲೇಔಟ್ನಲ್ಲಿ ನಿರ್ಮಾಣ ಹಂತದ ಮೆಟ್ರೋ ಕಾಮಗಾರಿ ವೇಳೆ ಕಬ್ಬಿಣದ ಪಿಲ್ಲರ್ ಬಿದ್ದು ತಾಯಿ-ಮಗಳು ದಾರುಣವಾಗಿ ಸಾವನ್ನಪ್ಪಿದ್ದು, ಸಾರ್ವಜನಿಕರು ಬಿಎಂಆರ್ಸಿಎಲ್ ವಿರುದ್ಧ ಹಿಡಿಶಾಪ ಹಾಕಿದರು.
ಇದರಿಂದ ಎಚ್ಚೆತ್ತುಕೊಂಡ ಸಂಸ್ಥೆ ಐಐಎಸ್ಸಿ ಎಂಜಿನಿಯರ್ಗಳ ತಂಡದೊಂದಿಗೆ ಪಿಲ್ಲರ್ಅನ್ನು ಪರಿಶೀಲಿಸಿ ದೊಡ್ಡ ದೊಡ್ಡ ಬಾಕ್ಸ್ಗಳನ್ನು ಅಳವಡಿಸಿದೆ. ಇದರಿಂದ ಪಿಲ್ಲರ್ ಭಾಗದಂತೆ ಸಫೋರ್ಟ್ ನೀಡಿದಂತಾಗಿದೆ. ಮೊದಲೇ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿದ್ದರೆ ದುರಂತ ಸಂಭವಿಸುತ್ತಿರಲಿಲ್ಲ.
ಎಫ್ಐಆರ್ ದಾಖಲು: ತಾಯಿ ಮತ್ತು ಮಗು ಬಲಿ ಪಡೆದ ನಮ್ಮ ಮೆಟ್ರೊ ಕಾಮಗಾರಿ ನಡೆಸುತ್ತಿರುವ ನಾಗಾರ್ಜುನ ಕಂಪನಿಯನ್ನು ಪ್ರಕರಣದ ಮೊದಲ ಆರೋಪಿಯನ್ನಾಗಿಸಲಾಗಿದೆ.
ಪ್ರಕರಣದಲ್ಲಿ ನಾಗಾರ್ಜುನ ಮೊದಲ ಆರೋಪಿಯಾಗಿದ್ದರೆ ನಾಗಾರ್ಜುನ ಕಂಪನಿಯ ಜೂನಿಯರ್ ಇಂಜಿನಿಯರ್ ಪ್ರಭಾಕರ್ 2ನೇ ಆರೋಪಿ, ನಿರ್ದೇಶಕ ಚೈತನ್ಯ 3ನೇ ಆರೋಪಿ, ಮತಾಯಿ ಸೂಪರ್ವೈಸರ್ ಮ್ಯಾನೇಜರ್ 4ನೇ ಆರೋಪಿ, ಪ್ರಧಾನ ವ್ಯವಸ್ಥಾಪಕ ವಿಕಾಸ್ ಸಿಂಗ್ 5ನೇ ಆರೋಪಿ, ಸೂಪರ್ವೈಸರ್ ಲಕ್ಷ್ಮಿಪತಿ 6ನೇ ಆರೋಪಿ, ಬಿಎಂಆರ್ಸಿಎಲ್ನ ಡೆಪ್ಯುಟಿ ಇಂಜಿನಿಯರ್ ವೆಂಕಟೇಶ್ ಶೆಟ್ಟಿ 7ನೇ ಆರೋಪಿ, ಎಕ್ಸಿಕ್ಯೂಟಿವ್ ಇಂಜಿನಿಯರ್ ಮಹೇಶ್ ಬೆಂಡೆಕೇರಿ ಅವರನ್ನು 8ನೇ ಆರೋಪಿಯನ್ನಾಗಿಸಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ದ್ವೇಷ ಹರಡುವ ರಾಜಕಾರಣದಿಂದ ಜನ ಬೇಸತ್ತಿದ್ದಾರೆ : ರಾಹುಲ್ ಗಾಂಧಿ
ನಿನ್ನೆ ನಾಗಾವರ ಬಳಿ ನಿರ್ಮಾಣ ಹಂತದ ಮೆಟ್ರೊ ಕಾಮಗಾರಿಯ ಪಿಲ್ಲರ್ ದಿಢೀರ್ ಕುಸಿತ ಕಂಡು ತೇಜಸ್ವಿನಿ ಮತ್ತು ಪುತ್ರ ವಿಹಾನ್ ಎಂಬುವರು ಸಾವನ್ನಪ್ಪಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಎಂಆರ್ಸಿಎಲ್ನ ಮುಖ್ಯ ಎಂಜಿನಿಯರ್ ಅವರನ್ನು ಸೇವೆಯಿಂದ ಅಮಾನತುಪಡಿಸಿದ್ದಾರೆ.
Bengaluru, metro, pillar, collapse FIR, 8 accused,