ಬೆಂಗಳೂರು,ಜ.21- ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ಸಾವನ್ನಪ್ಪಲು ಕಾಮಗಾರಿ ಗುತ್ತಿಗೆ ಪಡೆದಿರುವ ಕಂಟ್ರಾಕ್ಟರ್ ಹಾಗೂ ಎಂಜಿನಿಯರ್ಗಳೇ ಕಾರಣ ಎನ್ನುವುದು ಸಾಬೀತಾಗಿದೆ.
ಪ್ರಕರಣ ಕುರಿತಂತೆ ತಾಂತ್ರಿಕ ತನಿಖೆ ನಡೆಸಿರುವ ಐಐಎಸ್ಸಿ ತಜ್ಞರು ಇಂದು ಬಿಎಂ ಆರ್ಸಿಎಲ್ಗೆ ವರದಿ ಸಲ್ಲಿಸಿದ್ದು,
ವರದಿಯಲ್ಲಿ ಗುತ್ತಿಗೆದಾರ ಹಾಗೂ ಎಂಜಿನಿಯರ್ಗಳ ಬೇಜವಬ್ದಾರಿತನವೇ ಪಿಲ್ಲರ್ ಕುಸಿದು ಬೀಳಲು ಕಾರಣ ಎನ್ನುವುದು ದಾಖಲಾಗಿದೆ.
ಕುಸಿದು ಬಿದ್ದ ಪಿಲ್ಲರ್ನ ಕಂಬಿ, ಮರಳು, ಸಿಮೆಂಟ್ಗಳ ಕ್ವಾಲಿಟಿ ರಿಪೋರ್ಟ್ ಪಡೆದು ತನಿಖೆ ಆರಂಭಿಸಿದ್ದ ಐಐಎಸ್ಸಿ ತಜ್ಞರು ತನಿಖೆ ಪೂರ್ಣಗೊಳಿಸಿ ಇದೀಗ ವರದಿ ಸಲ್ಲಿಸಿದ್ದಾರೆ.
ಮೆಟ್ರೋ ಪಿಲ್ಲರ್ ನಿರ್ಮಾಣದ ವೇಳೆ 18 ಮೀಟರ್ ಎತ್ತರದ ಕಂಬಿ ಕಟ್ಟಲಾಗಿತ್ತು. ಈ ಎತ್ತರದ ಪಿಲ್ಲರ್ನಲ್ಲಿ 6 ಅಂತಸ್ತಿನ ಮನೆ ಕಟ್ಟಬಹುದಾಗಿತ್ತು. ಅಷ್ಟು ಉದ್ದದ ಕಂಬಿ ಕಟ್ಟಿದಾದರೂ ಯಾಕೆ ಎಂದು ತಿಳಿಯುತ್ತಿಲ್ಲ.
ಇಷ್ಟು ಎತ್ತರದ ಪಿಲ್ಲರ್ಗೆ ಕಂಬಿ ಕಟ್ಟುವಾಗ ಮುಂಜಾಗೃತಾ ಕ್ರಮವಾಗಿ ಕಂಬಿಗೆ ಸರಿಯಾದ ಸಪೋರ್ಟ್ ನೀಡಬೇಕಿತ್ತು. ಆ ಕೆಲಸವನ್ನು ಮಾಡದಿರುವುದೇ ದುರಂತಕ್ಕೆ ಕಾರಣ ಎಂದು ವರದಿಯಲ್ಲಿ ಬಹಿರಂಗಗೊಳಿಸಲಾಗಿದೆ.
ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆಗೆ ಹರಿದು ಬಂದ ಭಕ್ತ ಸಾಗರ
ಕೆಲಸಗಾಗರು ಕಂಬಿಯ ಫಿಲ್ಲರ್ಅನ್ನು ನೇರವಾಗಿ ನಿಲ್ಲಿಸಲು ಸುತ್ತಲೂ ಸಪೋರ್ಟ್ ನೀಡಬೇಕಿತ್ತು ಅದು ಕೆಲಸಗಾರರಿಗೆ ಗೊತ್ತಾಗಲ್ಲ, ಕಂಟ್ರಾಕ್ಟರ್ ಹಾಗೂ ಇಂಜಿನಿಯರ್ ಗಳೆ ಅದನ್ನ ನೋಡಿಕೊಳ್ಳಬೇಕು ಅವರ ಕೆಲಸದಲ್ಲಿ ವಿಫಲರಾಗಿರುವುದರಿಂದ ಘಟನೆಗೆ ಗುತ್ತಿಗೆದಾರ ಮತ್ತು ಎಂಜಿನಿಯರ್ಗಳೇ ಹೊಣೆ ಎಂದು ಬಿಂಬಿಸಲಾಗಿದೆ.
Bengaluru, Metro pillar, collapse, probe, engineers, responsible,