ಮೈಸೂರು ಉದ್ಯಾನ ಕಲಾಸಂಘ, ನರ್ಸರಿಮೆನ್ ಸೊಸೈಟಿಗೆ ಅನುಮತಿ ನೀಡಿ

Social Share

ಬೆಂಗಳೂರು,ಅ.24- ಲಾಲ್‍ಬಾಗ್ ಉದ್ಯಾನವನದಲ್ಲಿರುವ ದಿ ನರ್ಸರಿಮೆನ್ ಕೋ ಅಪರೇಟಿವ್ ಸೊಸೈಟಿಯ ಕಾರ್ಯ ಚಟುವಟಿಕೆಗಳನ್ನು ಯಾವುದೆ ಕಾರಣಕ್ಕೂ ಸ್ಥಗಿತಗೊಳಿಸಬಾರದು ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

ಲಾಲ್ ಬಾಗ್ ಉದ್ಯಾನವನದಲ್ಲಿರುವ ದಿ ನರ್ಸರಿಮೆನ್ ಕೋ ಆಪರೇಟಿವ್ ಸೊಸೈಟಿಯು ಕಳೆದ ಆರವತ್ತೈದು ವರ್ಷಗಳಿಂದ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸದರಿ ಸಂಸ್ಥೆಗೆ 1963 ರಲ್ಲಿ ಕೇವಲ 1.5 ಎಕರೆಗಳಷ್ಟು ಜಾಗವನ್ನು ಮಾತ್ರ ಸರ್ಕಾರದಿಂದ ಗುತ್ತಿಗೆಗೆ ನೀಡಲಾಗಿರುತ್ತದೆ.

ಸದರಿ ಸಂಸ್ಥೆಯ ನರ್ಸರಿಯಲ್ಲಿ ಸುಮಾರು ಎರಡು ಕೋಟಿಗೂ ಹೆಚ್ಚು ವಿವಿಧ ಜಾತಿಯ ಹಣ್ಣಿನ ಮತ್ತು ಹೂವಿನ ಸಸಿಗಳು ಇರುತ್ತವೆ ಹಾಗೂ ಈ ಸಂಸ್ಥೆ ಅಡಿಯಲ್ಲಿ 350ಕ್ಕೂ ಹೆಚ್ಚು ನರ್ಸರಿ ಕುಟುಂಬಗಳು ಸದಸ್ಯತ್ವ ಪಡೆದು ಕಾರ್ಯ ನಿರ್ವಹಿಸುತ್ತಿರುತ್ತವೆ.

ಕಂಚಗಲ್ಲು ಬಂಡೆ ಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ

ಅಂತಹ ಸೊಸೈಟಿ ಗುತ್ತಿಗೆ ಅವ ಮುಕ್ತಾಯವಾಗಿದ್ದು, ಕಳೆದ 06 ವರ್ಷಗಳಿಂದ ತಮ್ಮ ಗುತ್ತಿಗೆ ನವೀಕರಣಕ್ಕಾಗಿ ಹಲವು ಬಾರಿ ಅರ್ಜಿ ಸಲ್ಲಿಸಿದ್ದರೂ ಸಹ ಸದರಿ ಸಂಸ್ಥೆಯ ಗುತ್ತಿಗೆಯ ನವೀಕರಣ ಮಾಡದೆಯೇ, ಉದೇಶಪೂರ್ವಕವಾಗಿ ಏಕಾಏಕಿ ಸೊಸೈಟಿಗೆ ಹಾಗೂ ಮೈಸೂರು ಉದ್ಯಾನ ಕಲಾ ಸಂಘಗಳಿಗೆ ಬೀಗ ಜಡಿಯಲಾಗಿದೆ.

ಇದನ್ನು ಗಮನಿಸಿದರೆ, ಈ ಎರಡು ಸಂಸ್ಥೆಗಳಿಗೆ ಬೀಗ ಜಡಿದು ಬೇರೆಯವರಿಗೆ ಅವಕಾಶ ಮಾಡಿಕೊಡುವ ಹುನ್ನಾರ ನಡೆಯುತ್ತಿರುವುದು ಕಂಡು ಬರುತ್ತಿದೆ. ಒಂದು ವೇಳೆ ಸಂಸ್ಥೆಗಳನ್ನು ಮುಚ್ಚಿಸಿದರೆ, 350ಕ್ಕೂ ಹೆಚ್ಚು ಕುಟುಂಬಗಳು ಬೀದಿ ಪಾಲಾಗಲಿವೆ.

ಆದುದರಿಂದ ಮುಚ್ಚಲಾಗಿರುವ ದಿ ನರ್ಸರಿಮೆನ್ ಕೋ ಆಪರೇಟಿವ್ ಸೊಸೈಟಿಯನ್ನು ತೆರೆಯುವ ಹಾಗೂ ದಿ ನರ್ಸರಿಮೆನ್ ಕೋ ಆಪರೇಟಿವ್ ಸೊಸೈಟಿಯ ಗುತ್ತಿಗೆ ಅವಯನ್ನು ನವೀಕರಿಸುವ ಸಂಬಂಧ ಕೂಡಲೇ ಸಂಬಂಧಪಟ್ಟವರಿಗೆ ಸೂಕ್ತ ಆದೇಶ ನೀಡಬೇಕೆಂದು ರಮೇಶ್ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ಮೀಸಲಾತಿ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ, ಪ್ರತಿಭಟನೆ ಕೈಬಿಟ್ಟ ಪ್ರಸನ್ನಾನಂದ ಸ್ವಾಮೀಜಿ

ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಅವರ ಕ್ರಮ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿರುವುದರಿಂದ ಮುಖ್ಯಮಂತ್ರಿಗಳು ಹಾಗೂ ತೋಟಗಾರಿಕಾ ಇಲಾಖೆ ಸಚಿವರು ಇತ್ತ ಗಮನ ಹರಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಅವರು ವಿನಂತಿಸಿಕೊಂಡಿದ್ದಾರೆ.

Articles You Might Like

Share This Article