ಬೆಂಗಳೂರು,ಮಾ.19- ಕೆಲವು ಜನರು ಒಳಚರಂಡಿ ಮಾರ್ಗವನ್ನು ಮಣ್ಣು ಹಾಕಿ ಮುಚ್ಚಿದ್ದರಿಂದ ಶುಕ್ರವಾರ ಸುರಿದ ಮಳೆಗೆ ಬೆಂಗಳೂರು-ಮೈಸೂರು ಎಕ್ಸ್‍ಪ್ರೆಸ್ ಹೈವೇ ಮುಳುಗಡೆಯಾಗಿತ್ತು. ತುರ್ತು ಕಾಮಗಾರಿ ನಡೆಸಿದ್ದು, ಸಮಸ್ಯೆ ಬಗೆಹರಿಸಿದೆ ಎಂದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಸ್ಪಷ್ಟನೆ ನೀಡಿದೆ.
ಶುಕ್ರವಾರ ರಾತ್ರಿ ಅಕ ಮಳೆ ಸುರಿದಿದೆ. ಸಾಮಾನ್ಯ 0.1 ಮಿ.ಮೀ ಬದಲಾಗಿ 3.9 ಮಿ ಮೀ ಮಳೆಯಾಗಿದೆ. ಪರಿಣಾಮ ಪ್ರಾಣಿಗಳ ಓಡಾಟಕ್ಕಾಗಿ ನಿರ್ಮಿಸಿರುವ ಮೇಲ್ಸೇತುವೆಯ ಕೆಳಗೆ (ಕಿಲೋ ಮೀಟರ್ 42.640 ರಲ್ಲಿ) ಜನರು ಒಳಚರಂಡಿ ಮಾರ್ಗವನ್ನು ನಿರ್ಬಂಧಿಸಿದ್ದರಿಂದ ಮುಳುಗಡೆಯಾಗಿದೆ.
ಪಾಕಿಸ್ತಾನದಲ್ಲಿ ಇಮ್ರಾನ್‍ಖಾನ್ ಪಕ್ಷವನ್ನೇ ನಿಷೇಧಿಸಲು ಚರ್ಚೆ
ಮಾದಾಪುರ ಮತ್ತು ಇತರ ಸುತ್ತಮುತ್ತಲ ಭಾಗಗಳಲ್ಲಿ ತಮ್ಮ ಕೃಷಿ ಜಮೀನು ಮತ್ತು ಗ್ರಾಮಕ್ಕೆ ಕಿಲೋ ಮೀಟರ್ 42+640 ರಲ್ಲಿ ಪ್ರವೇಶಿಸಲು 3 ಮೀಟರ್ ಅಗಲದವರೆಗೆ ಚರಂಡಿಯನ್ನು ಮಣ್ಣಿನಿಂದ ಮುಚ್ಚಲಾಗಿತ್ತು. ಆ ಮೂಲಕ ಸರ್ವಿಸ್ ರಸ್ತೆಯಿಂದ ತಮ್ಮದೇ ಆದ ಮಾರ್ಗವನ್ನು ನಿರ್ಮಿಸುವ ಮೂಲಕ ರಸ್ತೆ ಕಡಿತ ಮಾರ್ಗ ಮಾಡಿಕೊಂಡಿದ್ದರು.
ಪ್ರಾಣಿಗಳ ಓಡಾಟಕ್ಕಿರುವ ಮೇಲ್ಸೇತುವೆಯ ಕೆಳಗೆ ಅವ್ಯಾಹತ ಮಳೆ ಸುರಿದಾಗ ಮುಳುಗಡೆಯಾಗಿದೆ. ಜನರ ಪ್ರವೇಶಕ್ಕಾಗಿ ನಿರ್ಮಿಸಿದ್ದ ದಂಡೆಯನ್ನು ಶನಿವಾರ ಮುಂಜ ನೆಯೇ ತೆರವುಗೊಳಿಸಲಾಗಿದೆ.
ಭಾರತ-ಬಾಂಗ್ಲಾ ನಡುವೆ ರೈಲ್ವೆ ಮಾರ್ಗ ಕಾಮಗಾರಿ ಚುರುಕುಗೊಳಿಸಲು ಕ್ರಮ
ಮಾದಾಪುರ ಗ್ರಾಮದ ಅಕ್ಕಪಕ್ಕದ ಹೊಲಗಳಿಗೆ ಅನುಕೂಲವಾಗುವಂತೆ 1.2 ಮೀ ಡಯಾ ಪೈಪ್‍ಎರಡು ಸಾಲುಗಳನ್ನು ಪೈಪ್ ಡ್ರೈನ್ ಮೂಲಕ ಒದಗಿಸಲು ನಿರ್ಧರಿಸಲಾಗಿದೆ. ಈ ಕಾಮಗಾರಿ ನಿನ್ನೆ ಮಧ್ಯರಾತ್ರಿ ಪೂರ್ಣಗೊಂಡಿದೆ ಎಂದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ತಿಳಿಸಿದೆ.
Bengaluru, Mysuru, Expressway, flooded, after, rains,