ದೇಶದಲ್ಲಿ ಸಂಪರ್ಕ ಕ್ರಾಂತಿ, ರಾಜ್ಯಕ್ಕೆ 3 ಲಕ್ಷ ಕೋಟಿ : ನೀತಿನ್ ಗಡ್ಕರಿ

Social Share

ಬೆಂಗಳೂರು,ಮಾ.12- ಎರಡು ಲಕ್ಷ ಕೋಟಿ ರೂಪಾಯಿಗಳ ಮೊತ್ತದ ಯೋಜನೆಗಳನ್ನು ಕರ್ನಾಟಕ ರಾಜ್ಯದಲ್ಲಿ ಕೈಗೊಳ್ಳಲಾಗಿದೆ. ಮುಂದಿನ ವರ್ಷಕ್ಕೆ ಅದು ಮೂರು ಲಕ್ಷ ಕೋಟಿ ರೂಪಾಯಿಗೆ ಹೆಚ್ಚಾಗಲಿದೆ ಎಂದು ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವ ನೀತಿನ್ ಗಡ್ಕರಿ ಹೇಳಿದ್ದಾರೆ.

ದಶಪಥ ರಸ್ತೆ ಯೋಜನೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರು ದೇಶಕ್ಕೆ ಐಟಿ ಕ್ಷೇತ್ರದಲ್ಲಿ ಮತ್ತು ಮೈಸೂರು ಸಾಂಸ್ಕøತಿಕ ರಾಜಧಾನಿಗಳಾಗಿವೆ. ಈ ಎರಡು ನಗರಗಳ ನಡುವೆ ಒಂದು ಗಂಟೆಯಲ್ಲಿ ತಲುಪಲು ಈ ಹೆದ್ದಾರಿ ನಿರ್ಮಿಸಲಾಗಿದೆ.

ಇದರ ಮೇಲೆ ಎಂಟು ಸಾವಿರ ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ದಶಪಥ ಯೋಜನೆಯ ಆರಂಭದಲ್ಲಿ ಅನೇಕ ಅಡಚಣೆಗಳು ಎದುರಾದವು, ರಾಜ್ಯ ಸರ್ಕಾರದ ಸಹಕಾರದಲ್ಲಿ ಯೋಜನೆ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದರು.

ಅನ್ಯಾಯದ ವಿರುದ್ಧ ಉಪ್ಪಿನ ಸತ್ಯಾಗ್ರಹ ಪರಿಣಾಮಕಾರಿ ಹೋರಾಟ : ಪ್ರಧಾನಿ

ಕೇಂದ್ರ ಸರ್ಕಾರ ಹೊಸ ಕಾನೂನು ರೂಪಿಸಲಾಗಿದೆ. ಹೆದ್ಧಾರಿ ನಿರ್ಮಾಣದ ವೇಳೆ ರೈತರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಸ್ಥಳೀಯರ ಬೇಡಿಕೆ ಆಧರಿಸಿ 89 ಕೆಳಸೇತುವೆಗಳನ್ನು ನಿರ್ಮಿಸಲಾಗಿದೆ. ಅಲ್ಲಲ್ಲಿ ಅಗತ್ಯ ಸೌಲಭ್ಯಗಳನ್ನು ಸೃಷ್ಟಿಸಲಾಗಿದೆ. ಹೆದ್ಧಾರಿಯಿಂದ ಉದ್ಯೋಗಾವಕಾಶಗಳು ಹೆಚ್ಚಾಗಲಿವೆ. ತಮಿಳುನಾಡಿನವರೆಗು ಮತ್ತು ಕೇರಳದ ಸುಲ್ತಾನ್‍ಕೇರಿವರೆಗೂ ಎರಡು ದಿಕ್ಕುಗಳಲ್ಲಿ ಸಂಪರ್ಕ ಕಲ್ಪಿಸಲಾಗುತ್ತದೆ ಎಂದು ಹೇಳಿದರು.

ಹೆದ್ದಾರಿಯಲ್ಲಿ ಕರ್ನಾಟಕ ಕರಕುಶಲ ಕಲೆಗಳು, ಆಟಿಕೆಗಳು, ಚಂದನ್ ಸೋಪ್ ಸೇರಿದಂತೆ ಸ್ಥಳೀಯ ವಸ್ತುಗಳ ಮಾರಾಟಕ್ಕೆ ಮಳಿಗೆಗಳನ್ನು ನಿರ್ಮಿಸಿಕೊಡಲಾಗುವುದು. ಇದರಲ್ಲಿ ಯಾರಿಗೂ ಅನುಮಾನ ಬೇಡ ಎಂದು ತಿಳಿಸಿದರು.

75ನೇ ಶತಕ ಸಿಡಿಸಿ ಸಂಭ್ರಮಿಸಿದ ಕೊಹ್ಲಿ

ದೇಶದಲ್ಲಿ ಹೆದ್ದಾರಿಗಳನ್ನು ಜೋಡಿಸುವ ಮಹತ್ತರ ಕಾರ್ಯ ನಡೆದಿದ್ದು, ಬರುವ ಡಿಸೆಂಬರ್ ವೇಳೆಗೆ ಚೆನ್ನೈನಿಂದ ಮೈಸೂರು ಎಕ್ಸ್‍ಪ್ರೆಸ್ ಹೈವೇ ಕಾಮಗಾರಿ ಪೂರ್ಣಗೊಳ್ಳಲಿದೆ. ಇನ್ನು ಬೆಂಗಳೂರಿನ ಸಂಚಾರಿ ವ್ಯವಸ್ಥೆಯನ್ನು ಸುಸ್ಥಿತಿಗೆ ತರುವ ನಿಟ್ಟಿನಲ್ಲಿ ಕೈಗೊಂಡಿರುವ ವರ್ತುಲ ರಸ್ತೆ ಕಾಮಗಾರಿ ಕೂಡ ಮುಂದಿನ ಮಾರ್ಚ್ ವೇಳೆಗೆ ಪೂರ್ಣಗೊಳಿಸುವ ವಿಶ್ವಾಸವಿದೆ ಎಂದರು.

ಶ್ರೇಯಾಸ್ ಅಯ್ಯರ್‌ಗೆ ಮತ್ತೆ ಕಾಡಿದ ಸಮಸ್ಯೆ..?

ಮೊದಲು 4 ರಿಂದ 5 ಗಂಟೆ ಪ್ರಯಾಣದ ಅವ ತಗುಲುತ್ತಿತ್ತು. ಈಗ ಅದು ಒಂದು ಗಂಟೆಗೆ ಇಳಿದಿದೆ. ಇದರಿಂದ ಹಲವು ಪ್ರಯೋಜನಗಳಾಗಲಿವೆ ಎಂದರು.

ಗತಿ ಶಕ್ತಿ ಯೋಜನೆಯಡಿ ಬಹುಮಾದರಿಯ ಸಂಪರ್ಕ ವ್ಯವಸ್ಥೆಯಡಿ ಬೆಂಗಳೂರು-ಚನ್ನೈ ಎಕ್ಸಪ್ರೆಸ್ ಹೆದ್ದಾರಿಯನ್ನು ಕಾಶ್ಮೀರದವರೆಗೂ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು. ಬೆಂಗಳೂರು-ಚೆನೈ-ಸೂರತ್ ಎಕ್ಸಪ್ರೆಸ್ ಹೈವೇ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದ್ದು ಲೋಕಾರ್ಪಣೆ ಮಾಡಲಾಗುವುದು ಎಂದರು.

Bengaluru, Mysuru, Expressway, Minister, Nitin Gadkari, Mandya,

Articles You Might Like

Share This Article