ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಕರ್ನಾಟಕದ ಬೆಳವಣಿಗೆಯ ಸಂಕೇತ : ಮೋದಿ

Social Share

ನವದೆಹಲಿ,ಮಾ.10- ಬೆಂಗಳೂರು-ಮೈಸೂರು ಎಕ್ಸ್‍ಪ್ರೆಸ್ ರಸ್ತೆ ಕರ್ನಾಟಕದ ಬೆಳವಣಿಗೆಯ ಪಥಕ್ಕೆ ಕೊಡುಗೆ ನೀಡಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ.

ಬೆಂಗಳೂರಿನಿಂದ ಮೈಸೂರಿಗೆ 90 ನಿಮಿಷದಲ್ಲಿ ತಲುಪಬಹುದಾದ ಎಕ್ಸ್‍ಪ್ರೆಸ್ ವೇ ರಸ್ತೆ ಮಾ.12ರಂದು ಉದ್ಘಾಟನೆಗೆ ಸಜ್ಜಾಗಿದ್ದು, ಮೋದಿ ಅವರೇ ಖುದ್ದು ದಶಪಥ ಕಾರಿಡಾರ್ ಉದ್ಘಾಟನೆ ಮಾಡುತ್ತಿದ್ದಾರೆ.

ಕಾರಿಡಾರ್ ಉದ್ಘಾಟನೆ ಕುರಿತಂತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮಾಡಿರುವ ಟ್ವಿಟ್ ಟ್ಯಾಗ್ ಮಾಡಿರುವ ಮೋದಿ ಅವರು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರ ಟ್ವೀಟ್ ಅನ್ನು ಪ್ರಧಾನಿ ಮೋದಿ ಟ್ಯಾಗ್ ಮಾಡಿ ಕರ್ನಾಟಕದ ಬೆಳವಣಿಗೆಯ ಪಥಕ್ಕೆ ಕೊಡುಗೆ ನೀಡುವ ಪ್ರಮುಖ ಸಂಪರ್ಕ ಯೋಜನೆ ಎಂದು ಯೋಜನೆಯ ಬಗ್ಗೆ ಗುಣಗಾನ ಮಾಡಿದ್ದಾರೆ.

ಈದ್ಗಾ ಮೈದಾನದಲ್ಲಿ ಕಾಮಣ್ಣ-ರತಿ ಪ್ರತಿಷ್ಠಾಪನೆಗೆ ಪಟ್ಟು : ಹುಬ್ಬಳ್ಳಿ ಉದ್ವಿಗ್ನ

ರಾಷ್ಟ್ರೀಯ ಹೆದ್ದಾರಿ-275ನ್ನು ಸುತ್ತುವರೆದಿರುವ ಬೆಂಗಳೂರು-ಮೈಸೂರು ಎಕ್ಸ್‍ಪ್ರೆಸ್‍ವೇ ನಾಲ್ಕು ರೈಲು ಮೇಲ್ಸೇತುವೆಗಳು, ಒಂಬತ್ತು ಮಹತ್ವದ ಸೇತುವೆಗಳು, 40 ಸಣ್ಣ ಸೇತುವೆಗಳು ಮತ್ತು 89 ಅಂಡರ್‍ಪಾಸ್‍ಗಳು ಮತ್ತು ಹಲವಾರು ಮೇಲ್ಸೇತುವೆಗಳನ್ನು ಹೊಂದಿದೆ.

Bengaluru, Mysuru, Expressway, Contribute, Karnataka, Growth, PM Modi,

Articles You Might Like

Share This Article