ಉದ್ದೇಶಪೂರ್ವಕವಾಗಿಯೇ ರೈಲಿನ ಹೆಸರು ಬದಲಾವಣೆ: ಪ್ರತಾಪ್‍ಸಿಂಹ

Social Share

ಮೈಸೂರು, ಅ.12- ರೈಲಿಗೆ ಟಿಪ್ಪು ಹೆಸರನ್ನು ಉದ್ದೇಶಪೂರ್ವಕವಾಗಿಯೇ ಬದಲಾಯಿಸಲಾಗಿದೆ ಎಂದು ಸಂಸದ ಪ್ರತಾಪ್‍ಸಿಂಹ ತಿಳಿಸಿದರು. ನಗರದಲ್ಲಿಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರೈಲ್ವೆ ಇತಿಹಾಸದಲ್ಲೇ ರೈಲಿಗೆ ಹೆಸರಿಡುವ ಸಂಪ್ರದಾಯ ನಡೆದು ಬಂದಿದೆ. ಆದರೆ ಇಟ್ಟ ಹೆಸರನ್ನು ಬದಲಿಸಿರುವುದು ಇದೇ ಮೊದಲು ಎಂದರು.

ಮೈಸೂರಿಗೆ ಟಿಪ್ಪು ಕೊಡುಗೆ ಏನೇನೂ ಇಲ್ಲ, ಹಾಗಾಗಿ ರೈಲಿಗೆ ಟಿಪ್ಪು ಹೆಸರು ಬದಲಾಯಿಸಿ ಒಡೆಯರ ಹೆಸರನ್ನು ಇಡಲಾಗಿದೆ. ಒಡೆಯರ ಅವರ ಕೊಡುಗೆ ನೂರಾರು ಇದೆ. ಟಿಪ್ಪು ಕೊಡುಗೆ ಏನಿದೆ ವಿವರಿಸಲಿ ಎಂದು ವಿರೋಧಿಸುವವರಿಗೆ ಅವರು ಸವಾಲು ಹಾಕಿದರು. ಹಲವು ಕಡೆಗಳಲ್ಲಿ ಮೈಸೂರಿನಲ್ಲಿ ಟಿಪ್ಪು ಕಾಲದ ಹೆಸರುಗಳಿವೆ ಅವುಗಳನ್ನು ಬದಲಿಸಲು ಕ್ರಮಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಮಾಜಿ ಸಿಎಂ ಸಿದ್ದರಾಮಯ್ಯನವರು ಒಡೆಯರ್ ಅವರ ಕೊಡುಗೆ ಬಗ್ಗೆ ಪ್ರಶ್ನಿಸುತ್ತಾರೆ. ಅವರನ್ನು ಕುರಿತು ಏಕವಚನದಲ್ಲಿ ಮಾತನಾಡುತ್ತಾರೆ. ಅವರಿಗೆ ನಾನು ಟಿಪ್ಪು ರೈಲಿನ ಹೆಸರಿನ ಬದಲಾವಣೆ ಕುರಿತು ಉತ್ತರಿಸುವ ಅಗತ್ಯ ಇಲ್ಲ ಎಂದು ಹೇಳಿದರು.

Articles You Might Like

Share This Article