ಬೆಂಗಳೂರಿನಲ್ಲಿ ಮತ್ತೆ ಬಿಎಂಟಿಸಿ ಬಸ್ ಬೇ..!

Social Share

ಬೆಂಗಳೂರು,ಡಿ.29- ನಗರದಲ್ಲಿ ಬಸ್ ಬೇ ನಿರ್ಮಾಣ ಮಾಡಿ ಕೈ ಸುಟ್ಟುಕೊಂಡಿದ್ದ ಯೋಜನೆಗೆ ಪಾಲಿಕೆ ಮತ್ತೆ ಮಣೆ ಹಾಕಿದೆ. ನಷ್ಟ ಎಂದು ತಿಳಿದಿದ್ದರೂ ಮತ್ತೆ ಅದೇ ಯೋಜನೆ ಜಾರಿಗೆ ಸಿದ್ಧತೆ ನಡೆಸಿದೆ.

ಈ ಹಿಂದೆ ನಗರದಲ್ಲಿ 22 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿದ್ದ ಬಸ್ ಬೇ ಒಂದೇ ತಿಂಗಳಲ್ಲೇ ಹಳ್ಳ ಹಿಡಿದಿತ್ತು. ಈಗ ಮತ್ತೆ 75 ಕೋಟಿ ರೂ. ವೆಚ್ಚದಲ್ಲಿ ಬಸ್ ಬೇ ನಿರ್ಮಾಣಕ್ಕೆ ಮುಂದಾಗಿದೆ. ಸಾರ್ವಜನಿಕರ ತೆರಿಗೆ ಹಣ ಫೋಲು ಮಾಡಲು ಸಿದ್ಧತೆ ಮಾಡಿಕೊಂಡಿದೆ.

ತಿಂಗಳಾಂತ್ಯಕ್ಕೆ ಟೆಂಡರ್ ಅಂತಿಮಗೊಳಿಸುವ ಸಾಧ್ಯತೆ ಇದ್ದು, ಬಸ್ ಬೇಗೆ ಬೋಲಾರ್ಡ್ ಅಳವಡಿಕೆಗೆಂದು ಈ ಹಿಂದೆ 21 ಕೋಟಿ ರೂ. ವೆಚ್ಚ ಮಾಡಲಾಗಿತ್ತು. ಇನ್ನು ಬಸ್ ಬೇನಲ್ಲಿ ಬಣ್ಣ ಬಳಿಯಲು ಒಂದು ಕೋಟಿ ಖರ್ಚು ಮಾಡಿತ್ತು. ಈಗ ಮತ್ತೆ ಯೋಜನೆ ಮರು ಜಾರಿಗೆ ಸಿದ್ಧತೆ ನಡೆಸಲಾಗಿದೆ.

ರ‍್ಯಾಪಿಡ್ ಬೈಕ್ ಬ್ಯಾನ್‍ಗೆ ಒತ್ತಾಯಿಸಿ ಆಟೋ ಮುಷ್ಕರ

ಏನಿದು ಬಸ್ ಬೇ : ಬಿಎಂಟಿಸಿ ಬಸ್‍ಗಳ ಪ್ರತ್ಯೇಕ ಸಂಚಾರಕ್ಕಾಗಿ ಬುಲೇವಾರ್ಡ್ ಹಾಕಲಾಗುತ್ತದೆ. ಇದರಲ್ಲಿ ಬೇರೆ ಯಾವುದೇ ವಾಹನಗಳು ಸಂಚರಿಸಲು ಅವಕಾಶ ಇರುವುದಿಲ್ಲ. ನಿಗದಿ ಪಡಿಸಿದ ಸ್ಥಳಗಳಲ್ಲಿ ಬಿಎಂಟಿಸಿ ಬಸ್‍ಗಳು ಸಂಚಾರ ಮಾಡಬೇಕು.

ಇದರಿಂದ ನಗರದಲ್ಲಿ ಸಂಚಾರ ದಟ್ಟಣೆ ನಿವಾರಣೆಯಾಗಲಿದೆ ಎಂಬ ಉದ್ದೇಶದಿಂದ ಈ ಯೋಜನೆ ಕೈಗೊಳ್ಳಲಾಗಿತ್ತು. ಆದರೆ, ಒಂದೇ ತಿಂಗಳಲ್ಲಿ ಈ ಯೋಜನೆ ಹಳ್ಳ ಹಿಡಿದು ಪಾಲಿಕೆ ನಷ್ಟ ಅನುಭವಿಸಿತ್ತು. ಈಗ ಮತ್ತೆ ಅದೇ ಯೋಜನೆಗೆ ಪಾಲಿಕೆ ಮುಂದಾಗಿದೆ.

Bengaluru roads, BMTC bus, BBMP,

Articles You Might Like

Share This Article