ಸಿಲಿಕಾನ್ ಸಿಟಿಯಲ್ಲಿ ಮುಗಿಯದ ಕಾಮಗಾರಿ, ಪಾದಚಾರಿಗಳಿಗೆ ಕಿರಿಕಿರಿ

Social Share

ಸಿಲಿಕಾನ್ ಸಿಟಿಯಲ್ಲಿ ವರ್ಷ ಪೂರ್ತಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಲೇ ಇರುತ್ತವೆ. ಆದರೆ, ಸಮಸ್ಯೆಗಳು ಮಾತ್ರ ಹಾಗೆಯೇ ಇವೆ. ನಿನ್ನೆ ನೋಡಿದ ರಸ್ತೆಗಳು ಇಂದಿಗೆ ಗುಂಡಿಮಯವಾಗಿರುತ್ತವೆ. ಆ ಕಾಮಗಾರಿ, ಈ ಕಾಮಗಾರಿಗೆಂದು ರಸ್ತೆಗಳನ್ನು ಬಗೆದು ಗುಂಡಿ ಮಾಡಿಬಿಡುತ್ತಾರೆ. ಅದನ್ನು ಮುಚ್ಚಲು ತಿಂಗಳುಗಟ್ಟಲೆ ಬೇಕು.

ನಗರದಲ್ಲಿ ಸಂಚರಿಸಬೇಕಾದರೆ ವಾಹನ ಸವಾರರು, ಪಾದಚಾರಿಗಳು ಮೈಯೆಲ್ಲಾ ಕಣ್ಣಾಗಿಟ್ಟುಕೊಂಡಿರಬೇಕು. ಎಲ್ಲಿ ಗುಂಡಿ ಇರುತ್ತವೋ, ಚರಂಡಿಗಳು ಬಾಯಿತೆರೆದಿಟ್ಟು ಕೊಂಡಿರುತ್ತವೋ ತಿಳಿಯದು. ಒಂದು ವೇಳೆ ಎಚ್ಚರ ತಪ್ಪಿದರೆ ಜೀವಕ್ಕೆ ಆಪತ್ತು ಖಚಿತ.

ಹೇಳುವುದಕ್ಕೆ ಮಾತ್ರ ಬೆಂಗಳೂರು ಸಿಲಿಕಾನ್ ಸಿಟಿ ನೋಡಲು ಹೋದರೆ ಗಾರ್ಬೇಜ್ ಸಿಟಿ. ಹೌದು. ಪಾದ ಜಾರಿಯಾಗಿ ಓಡಾಡಿದರೆ ಮಾತ್ರ ನಗರದ ಹುಳುಕು ಕಾಣುತ್ತದೆ. ಇದಕ್ಕೆ ಪೂರಕವಾಗಿ ಮಲ್ಲೇಶ್ವರಂ ನ 15ನೇ ಅಡ್ಡ ರಸ್ತೆಯ ಒಂದು ಚಿತ್ರಣ ಇಲ್ಲಿದೆ.

ವೇದಿಕೆ ಬಿಟ್ಟಿಳಿಯದ ನಾಯಕರು, ತಳಮಟ್ಟದಲ್ಲಿ ಸೊರಗುತ್ತಿರುವ ಕಾಂಗ್ರೆಸ್

ಮಲ್ಲೇಶ್ವರಂ ವಾರ್ಡ್ ನಂ.65 ರ15ನೇ ಅಡ್ಡ ರಸ್ತೆ ಚಿತ್ರಪುರ ವೃತ್ತದಿಂದ ವೈಯಾಲಿಕಾವಲ್ ಮುಖ್ಯರಸ್ತೆವರಿಗೂ ಪಾದಾಚಾರಿ ರಸ್ತೆಯನ್ನು ನೋಡಿದರೆ ಬೆಂಗಳೂರಿನ ಸ್ಥಿತಿ ಯ ಚಿತ್ರಣ ಹೊರಬರುತ್ತದೆ.

ಕಾಮಗಾರಿ ನೆಪದಲ್ಲಿ ಪಾದಚಾರಿ ರಸ್ತೆಯನ್ನು ಕಿತ್ತು 15 ರಿಂದ 20 ದಿನಗಳಾದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಈ ರಸ್ತೆ ಮಲ್ಲೇಶ್ವರಂನಿಂದ ವೈಯಾಲಿಕಾವಲಿಗೆ ಸೇರುವ ರಸ್ತೆಯಾಗಿದ್ದು, ಟ್ರಾಫಿಕ್ ಸಮಸ್ಯೆ ಇದ್ದೇ ಇರುತ್ತದೆ.

ಆದರೆ, ಪಾದಚಾರಿಗಳು ರಸ್ತೆಯಲ್ಲಿ ಓಡಾಡಲಾಗದೆ ಪಾದಚಾರಿ ರಸ್ತೆಯನ್ನೇ ಅವಲಂಬಿಸುತ್ತಾರೆ. ಆದರೆ, ಪಾದಚಾರಿ ರಸ್ತೆ ಕಿತ್ತಿರುವುದರಿಂದ ಪಾದಚಾರಿಗಳು ಇದೆ ರಸ್ತೆಯಲ್ಲಿ ಓಡಾಡುವ ಸ್ಥಿತಿ ಎದುರಾಗಿದೆ. ಈ ರಸ್ತೆಯಲ್ಲಿ ಮೋರಿ ಇದ್ದು, ಸ್ವಲ್ಪ ಆಯ ತಪ್ಪಿದರೂ ಕೈ-ಕಾಲು ಮುರಿಯುವುದು ನಿಶ್ಚಿತ.

ಈ ರಸ್ತೆ ಪಕ್ಕದಲಿ ಅಂಗಡಿಗಳಿದ್ದು, ಇಲ್ಲಿಗೆ ಬರುವವರು ಮೋರಿ ವಾಸನೆ ಸವಿಯಬೇಕಾಗಿದೆ. ಶಾಲಾ ಮಕ್ಕಳು ಈ ಪಾದಚಾರಿ ರಸ್ತೆಯಲ್ಲಿ ಓಡಾಡುತ್ತಿತ್ತು, ಆಯ ತಪ್ಪಿದರೆ ದೇವರೇ ಗತಿ. ಸ್ಥಳೀಯರು ಹೇಳುವ ಪ್ರಕಾರ ಕೆಲವು ಗುತ್ತಿಗೆದಾರರು ಈ ಕಾಮಗಾರಿಯ ಗುತ್ತಿಗೆಯನ್ನು ಬೇರೆಯವರಿಗೆ ನೀಡುತ್ತಾರೆ ಎಂಬ ಭಯದಿಂದ ಈ ರೀತಿ ಅರ್ಧಂಬರ್ಧ ಕೆಲಸ ಮಾಡುತ್ತಾರೆ ಎನ್ನಲಾಗಿದೆ.

ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರಿಗೆ ಗುಡ್ ನ್ಯೂಸ್

ವೃದ್ಧರಂತು ಈ ರಸ್ತೆ ಸಚರಿಸಬೇಕಾದರೆ ಬಹಳ ಎಚ್ಚರ ವಹಿಸಬೇಕಾಗಿದೆ. ಕೂಡಲೇ ಸಂಬಂಧಪಟ್ಟ ಅಕಾರಿಗಳು ಮತ್ತು ಸ್ಥಳೀಯ ಮುಖಂಡರು ಇತ್ತ ಗಮನ ಹರಿಸಿ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಬೇಕೆಂದು ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ.

Bengaluru, Roads, potholes, Malleshwaram,

Articles You Might Like

Share This Article